ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ಉಪ ಚುನಾವಣೆಯ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದಲ್ಲಿ ಚುರುಕಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ, ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಮೋಹನ್ ಅಗರವಾಲ ನೇತೃತ್ವದಲ್ಲಿ ಪಕ್ಷದ ಚಟುವಟಿಕೆಗಳನ್ನು ಆರಂಭಿಸಿದೆ.
ಬಿಜೆಪಿಯಿಂದ ವೈ.ದೇವೇಂದ್ರಪ್ಪ ರಾಜ್ಯ ಬಿಜೆಪಿ ವಾಲ್ಮೀಕಿ ಘಟಕದ ಅಧ್ಯಕ್ಷ ಬಂಗಾರು ಹನುಮಂತ, ಕೆ.ಅರ್.ಪಿಯಿಂದ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಕೆ.ದಿವಾಕರ ಅವರ ಹೆಸರುಗಳನ್ನು ಅಂತಿಮ ಗೊಳಿಸಿ ಹೈಕಮಾಂಡ್‌ಗೆ ವರದಿಯನ್ನು ನೀಡಲಾಗಿದೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಅರ್ಹ ಅಭ್ಯರ್ಥಿಯ ಹೆಸರನ್ನು ಪಕ್ಷ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಂತೋಷ್ ಎಸ್ ಲಾಡ್ ನಿರ್ಧರಿಸಿರುವ ಅಭ್ಯರ್ಥಿಗೆ ಟಿಕೇಟ್ ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಅದರೆ ಕಾಂಗ್ರೇಸ್ ಪಕ್ಷದಲ್ಲಿ ಆರ್. ಶಿವರಾಮ, ಯಂಕಪ್ಪ, ತುಮಟಿ ಲಕ್ಷ್ಮಣ, ಅನ್ನಪೂರ್ಣಮ್ಮ ತುಕರಾಂ, ಸಂಸದರ ಪುತ್ರರ ಹೆಸರು ಕೇಳಿಬರುತ್ತಿದ್ದು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ತಲೆನೋವಾಗಿದೆ.
ಉಪಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಸಿಲಿಕ್ಕಾಗಿ ಬಿಜೆಪಿ ಬೂತ್ ಮಟ್ಟದಲ್ಲಿ ಆಭಿಯಾನವನ್ನು ನಡೆಸುತ್ತಿದ್ದು ಪಕ್ಷದ ಸಂಘಟನೆಗಾಗಿ ವ್ಯವಸ್ಥಿತ ಯೋಜನೆಗಳನ್ನು ರೂಪಿಸುತ್ತಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಆರು ಜಿಲ್ಲಾ ಪಂಚಾಯಿತಿಗಳಲ್ಲಿ ಕ್ಷೇತ್ರಗಳಿವೆ. ಬಿಜೆಪಿ ಪ್ರತಿ ಕ್ಷೇತ್ರವನ್ನು ಇಬ್ಬರು ಮುಖಂಡರಿಗೆ ಒಪ್ಪಿಸಿ ಪಕ್ಷದ ಸಂಘಟನೆ ಕಾಂಗ್ರೆಸ್ ವೈಫಲ್ಯಗಳನ್ನು ಮತದಾರರಿಗೆ ತಿಳಿಸುವ ಹೊಣೆಗಾರಿಕೆ ನೀಡಿದೆ. ಇಲ್ಲಿ ಮುಖ್ಯವಾಗಿ ಕೇವಲ ಕಾಂಗ್ರೆಸ್ ಪಕ್ಷ ಒಂದು ಸಭೆಯನ್ನು ನಡೆಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿರುವುದು ಗಮನಾರ್ಹ ಎಂದು ಹೇಳಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ