ಬಳ್ಳಾರಿ: ಬಳ್ಳಾರಿ ನಗರದ ವೀರಶೈವ ವಿದ್ಯಾವರ್ಧಕ ಸಂಘವು ಶಿಕ್ಷಕ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಘದ ಸಭಾಂಗಣದಲ್ಲಿ ಆಯೋಜಿಸಿತ್ತು. ಸಂಘದ ಶಾಲಾ ಕಾಲೇಜುಗಳಲ್ಲಿ ಸೇವರ ಸಲ್ಲಿಸಿ ನಿವೃತ್ತರಾದ ಡಾ ಜಲಜಾಕ್ಷಿ, ಡಾ.ಜಿ ಬಿ ನಾಗನಗೌಡ,ಲಿಂಗರಾಜ ಸೇರಿದಂತೆ 28 ಜನರಿಗೆ ಸನ್ಮಾನಿಸಿ ಗೌರವಿಸಲಾಯ್ತು.
ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ಟಿಟೋರಿಯಲ್ ಮುಖ್ಯಸ್ಥ ಪ್ರಕಾಶ್ ಕುಲಕರ್ಣಿ ಮಾತನಾಡಿ, ನನ್ನ ಯಶಸ್ಸಿನ ಹಿಂದೆ ನನ್ನೆಲ್ಲಾ ಶಿಕ್ಷಕರ ಶ್ರಮವಿದೆ.ಬಡತನದಲ್ಲಿ ಓದಿ ಬಂಗಾರದ ಪದಕ ಪೆಡದು ಪಾಸಾದ ನಾನು ವೀ ವಿ ಸಂಘದ ವಿದ್ಯಾರ್ಥಿ, ಕಳೆದ 40 ವರ್ಷಗಳಿಂದ ಪ್ರಕಾಶ್ ಟ್ಯೂಟೋರಿಯಲ್ ನಡೆಸುತ್ತಾ ಬಂದಿದ್ದೇನೆ. ಶಿಕ್ಷಕರು ಸಮಾಜದ ಶಿಲ್ಲಿಗಳು, ಅವರು ಹೊಸ ತಂತ್ರಜ್ಞಾನ ತಿಳಿದು ಮಕ್ಕಳಿಗೆ ಭೋಧಿಸಬೇಕು ಎಂದರು. ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೀಲ್, ಬದಲಾದ ವ್ಯವಸ್ಥೆಯಲ್ಲಿ ಮಕ್ಜಳಿಗೆ ಕಲಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಈ ಸವಾಲನ್ನು ಸ್ವಿಕರಿಸಿ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಸಂಘದ ಪ್ರತಿಯೊಬ್ಬ ನೌಕರರು ಶ್ರಮವಹಿಸಿ ದುಡಿದು ಕೀರ್ತಿ ತರಬೇಕೆಂದರು.
ವೀ ವಿ ಸಂಘದ ಕೋಶಾಧಿಕಾರಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಮಾಜಿ ಕಾರ್ಯದರ್ಶಿ ಚೋರನೂರು ಟಿ. ಕೊಟ್ರಪ್ಪ ಮಾತನಾಡಿದರು.ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಹಚ್ಚೊಳ್ಳಿ ಎಂ ಶರಣಬಸವನಗೌಡ , ಕೋರಿ ವಿರುಪಾಕ್ಷಪ್ಪ, ಟಿ ನರೇಂದ್ರಬಾಬು (ಮಿಂಚೇರಿ) ಮೊದಲಾದವರು ಉಪಸ್ಥಿತರಿದ್ದರು.ಗಂಧರ್ವ ಶಾಲೆಯ ಮಕ್ಕಳು ವಚನಗಾಯನ ಹಾಗೂ ಪ್ರಾರ್ಥನೆ ನೆರವೇರಿಸಿದರು ಎ.ಎಸ್ ಎಂ ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದ ರಾಜು ವಂದನೆಗಳನ್ನು ಸಲ್ಲಿಸಿದರು . ಉಪನ್ಯಾಸಕ ಡಾ.ಗಂಗಾಧರ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ