ಸೆ.13 -15: ಬಳ್ಳಾರಿಯಲ್ಲಿ ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕರ 11 ನೇ ವಾರ್ಷಿಕ ಸಮ್ಮೇಳನ

Upayuktha
0


ಬಳ್ಳಾರಿ: 
ಬಳ್ಳಾರಿ ಜಿಲ್ಲೆಯ ತೋರಣಗಲಿನಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿ 3 ದಿನಗಳ ರಾಜ್ಯಮಟ್ಟದ ಅಖಿಲ ಭಾರತ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಕರ ಸಂಘದ 11 ನೇ ವಾರ್ಷಿಕ ಸಮ್ಮೇಳನವನ್ನು ಬಳ್ಳಾರಿ ಶಾಖೆಯಿಂದ ಸೆ 13 ರಿಂದ 15 ರ ವರೆಗೆ ಸರ್ಕಾರಿ ದಂತ ಕಾಲೇಜಿನ ಬಾಯಿ, ಮುಖ ಹಾಗೂ ದವಡೆ ಚಿಕಿತ್ಸಕ ವಿಭಾಗದ ಸಹಯೋಗದಿಂದ ಆಯೋಜಿಸಲಾಗಿದೆ ಎಂದು ನಗರದ ಐ.ಎಂ.ಎ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಮ್ಮೇಳನದ ಕಾರ್ಯದರ್ಶಿ ಡಾ ಮಧುಸೂಧನ್ ರೆಡ್ಡಿ ತಿಳಿಸಿದರು.

ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಕರರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರಗಳನ್ನು ತಿಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯುವ ಶಸ್ತ್ರಚಿಕಿತ್ಸಕರರಿಗೆ ಸೆ. 13 ರಂದು ತಜ್ಞ ವೈದ್ಯರು ಇಡೀ ದಿನ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.  

ಸೆ.14 ರಂದು ಖ್ಯಾತ ವೈದ್ಯ ಕಿಶೋರ ನಾಯಕ ಅವರ ಸ್ಮರಣಾರ್ಥ ವಿವಿಧ ವಿಷಯಗಳ ಉಪನ್ಯಾಸ ಏರ್ಪಡಿಸಲಾಗಿದೆ. ಅದರಲ್ಲಿ ರಾಮದಾಸ್ ಬಾಲಕೃಷ್ಣ, ಡಾ ವೆಂಕಟೇಶ್  ಆನೆಹೊಸರು, ಡಾ ಉಮ್ಮರ್ ಮಂಗಲತ್, ದೀಪೇಶ್ ರಾವ್ ಒಳಗೊಂಡ ಹಲವಾರು ತಜ್ಞ ವೈದ್ಯರು ಉಪನ್ಯಾಸ ನೀಡಲಿದ್ದಾರೆ. ಇದಲ್ಲದೆ ಹಿರಿಯ ವೈದ್ಯರುಗಳಾದ ಶ್ರೀನಾಥ್ ಎನ್, ಕಣ್ಣನ್ ಬಲರಾಮ್ ಕವಿತಾ ರಾಘೋತ್ತಮ್, ಸೋನಲ್ ಅಂಚಲಿಯಾ ಅವರುಗಳು ಯುವ ವೈದ್ಯರಿಗೆ ವೃತ್ತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಸೆ.15 ರಂದು ಸೀಳು ತುಟಿ ಚಿಕಿತ್ಸೆ, ಮುಖವನ್ನು ಸುಂದರಗೊಳಿಸುವುದು, ದವಡೆ ಭಾಗ ಕತ್ತರಿಸಿ ಮರುಜೋಡಿಸುವುದು ಸೇರಿದಂತೆ ಹಲವಾರು ಉಪನ್ಯಾಸಗಳನ್ನು ಆಯೋಗಿಸಲಾಗಿದೆ. ಸೆ.14 ರಂದು ಬೆಳಿಗ್ಗೆ 11 ಕ್ಕೆ ಬಳ್ಳಾರಿ ಸಂಸದ ಈ ತುಕಾರಾಂ ಅವರು ಚಾಲನೆ ನೀಡಲಿದ್ದಾರೆ. 

ಜಿಂದಾಲ್ ವಿಜಯನಗರ ವರ್ಕ್ಸ್ ನ ಅಧ್ಯಕ್ಷ ಪಿ.ಕೆ ಮುರುಗನ್, ಬಳ್ಳಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ಸರ್ಕಾರಿ ದಂತ ಕಾಲೇಜಿನ ಪ್ರಾಂಶುಪಾಲೆ ಎಸ್. ಹೆಚ್  ಭಾರತಿ, ಡಾ ಭಗವಾನ್ ದಾಸ್ ರೈ, ಅಖಿಲ ಭಾರತ ಬಾಯಿ, ಮುಖ ಹಾಗೂ ದವಡೆ ಚಿಕಿತ್ಸಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಗಿರೀಶ್ ರಾವ್ ರಾಜ್ಯದ ಅಧ್ಯಕ್ಷ ರಾಮದಾಸ್ ಬಾಲಕೃಷ್ಣ, ಕಾರ್ಯದರ್ಶಿ ನಾಗರಾಜಪ್ಪ ದಾಸ್ ಸಮ್ಮೇಳನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂಧರ್ಬದಲ್ಲಿ ಡಾ ನಂದಕುಮಾರ್ ಹಾಗೂ ಡಾ ಪ್ರಕಾಶ್ ತಂದೂರ್ ಅವರಿಗೆ ಜೀವಮಾನದ ಸಾಧನೆ ಗುರುತಿಸಿ ಸತ್ಕರಿಸಲಾಗುವುದೆಂದು ಸಮ್ಮೇಳನದಲ್ಲಿ 320 ಕ್ಕೂ ಹೆಚ್ಚು ಹಿರಿಯ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 


ಇತ್ತೀಚೆಗೆ ತಂಬಾಕು ಸೇವನೆಯಿಂದ ಯುವ ಜನರಿಗೆ ಬೇಗನೇ ಬಾಯಿ ಕ್ಯಾನ್ಸರ್ ಬರುತ್ತಿದೆ. ಈ ವೇಳೆ ಅವರಿಗೆ ನೀಡುವ ಚಿಕಿತ್ಸೆ ನೀಡುವ ಹೊಸ ವಿಧಾನಗಳ ಕುರಿತು ತಿಳಿಸಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ವೈದ್ಯರಾದ ಡಾ.ಬಸವರಾಜ್, ಡಾ.ಗುರುಪ್ರಸಾದ್ ಯಡವಳ್ಳಿ, ಡಾ.ಮಂಜುನಾಥ್  ಮತ್ತಿತರರಯ ಉಪಸ್ಥಿತರಿದ್ದರು. 
                                                                                                                                                                       

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top