ಮಾರಾಟಗಾರರ ಬೆಳವಣಿಗೆಗೆ ಬದ್ಧ: ಅಮೆಜಾನ್

Upayuktha
0


ಮಂಗಳೂರು:
ಹಬ್ಬದ ಋತುವಿನಲ್ಲಿ ಕರ್ನಾಟಕ ಮತ್ತು ಭಾರತದಾದ್ಯಂತ ಮಾರಾಟಗಾರರಿಗೆ ದೊಡ್ಡ ಯಶಸ್ಸು ಸಾಧಿಸಲು, ಅಮೆಜಾನ್ ವಿವಿಧ ಉಪಕ್ರಮಗಳು ಮತ್ತು ನಾವೀನ್ಯತೆಗಳನ್ನು ಹೊರತಂದಿದೆ. ಮಾರಾಟಗಾರರು ತಮ್ಮ ಗಳಿಕೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಬೆಲೆಗಳನ್ನು ನೀಡಲು ಸಹಾಯ ಮಾಡಲು, ದಿನಸಿ, ಫ್ಯಾಷನ್ ಮತ್ತು ಎಲೆಕ್ಟ್ರಾನಿಕ್ಸ್‍ನಂತಹ ವಿಭಾಗಗಳಲ್ಲಿ 3% ದಿಂದ 12% ವರೆಗೆ ಮಾರಾಟ ಶುಲ್ಕದಲ್ಲಿ ಗಮನಾರ್ಹವಾದ ಕಡಿತವನ್ನು ಘೋಷಿಸಿದೆ.


ಇದು ಮಾರಾಟಗಾರರಿಗೆ ದೀಪಾವಳಿಯ ಶಾಪಿಂಗ್ ದಟ್ಟಣೆಗಾಗಿ ತಮ್ಮ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ಅವಕಾಶವನ್ನು ನೀಡುತ್ತದೆ ಮತ್ತು ಹಬ್ಬಗಳ ನಂತರ ವ್ಯಾಪಾರದ ಬೆಳವಣಿಗೆಯನ್ನು ಮುಂದುವರಿಸುತ್ತದೆ. ಗ್ರಾಹಕರ ವೆಚ್ಚದಲ್ಲಿ ಸಂಭಾವ್ಯ ಹೆಚ್ಚಳದೊಂದಿಗೆ ಇ-ಕಾಮರ್ಸ್ ಮೂಲಕ ತಮ್ಮ ಆನ್‍ಲೈನ್ ವ್ಯವಹಾರವನ್ನು ಹೆಚ್ಚಿಸಲು ಕರ್ನಾಟಕದ ಎಸ್‍ಎಂಬಿಗಳಿಗೆ ಒಂದು ದೊಡ್ಡ ಅವಕಾಶವಾಗಿದೆ. 


ಈ ವರ್ಷ, ರಾಜ್ಯದ 70,000 ಕ್ಕೂ ಹೆಚ್ಚು ಮಾರಾಟಗಾರರು, ಅಮೆಜಾನ್.ಇನ್ ನಲ್ಲಿ ತಮ್ಮ ಉತ್ಪನ್ನಗಳನ್ನು ಪಟ್ಟಿ ಮಾಡಿ ಪ್ರದರ್ಶಿಸುತ್ತಿದ್ದಾರೆ. ಭಾರತದ ಉದ್ದಗಲಕ್ಕೂ ತಮ್ಮ ಗ್ರಾಹಕರನ್ನು ತಲುಪುತ್ತಾರೆ. ಹೆಚ್ಚಿದ ಬೇಡಿಕೆ, ದಟ್ಟಣೆ ಮತ್ತು ವಿಶೇಷ ಕೊಡುಗೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ, ಈ ಮಾರಾಟಗಾರರು ತಮ್ಮ ಮಾರಾಟವನ್ನು ಹೆಚ್ಚಿಸಬಹುದು ಮತ್ತು ಹೊಸ ಗ್ರಾಹಕರನ್ನು ತಲುಪಬಹುದು ಎಂದು ಅಮೆಜಾನ್ ಇಂಡಿಯಾ ಉತ್ಪನ್ನ ನಿರ್ವಹಣೆ ವಿಭಾಗದ ನಿರ್ದೇಶಕ ವಿಕ್ರಂ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


"ಅಮೆಜಾನ್‍ನಲ್ಲಿ, ಇ-ಕಾಮರ್ಸ್‍ನ ಪ್ರಯೋಜನಗಳನ್ನು ಬಳಸಿಕೊಳ್ಳಲು ಸಹಾಯ ಮಾಡುವ ಮೂಲಕ ಕರ್ನಾಟಕದ ಎಸ್‍ಎಂಬಿಗಳನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ. ಪ್ರತಿ ವರ್ಷ, ಉತ್ತಮ ಉತ್ಪನ್ನ ಪಟ್ಟಿಗಳು ಮತ್ತು ಆಯ್ಕೆಗಳ ಮೂಲಕ ಹಬ್ಬದ ಸೀಸನ್‍ಗಾಗಿ ಅವರನ್ನು ಸಿದ್ಧಪಡಿಸಲು ನಾವು ವಿವಿಧ ಉಪಕ್ರಮಗಳನ್ನು ಹೊರತರುತ್ತೇವೆ.


ಅದು ಅವರ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಾವು ನೀಡುವ ಉಳಿದ ಪರಿಹಾರಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಮಾರಾಟದ ಶುಲ್ಕದಲ್ಲಿನ ಕಡಿತವು ಹಬ್ಬದ ಋತುವಿನಲ್ಲಿ ಮತ್ತು ನಂತರದ ಸಮಯದಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಲು ಮಾರಾಟಗಾರರಿಗೆ ಅನುವು ಮಾಡಿಕೊಡುತ್ತದೆ ಎಂದು ನಮಗೆ ವಿಶ್ವಾಸವಿದೆ" ಎಂದು ಹೇಳಿದರು.


ಅಮೆಜಾನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೆಷಿನ್ ಲನಿರ್ಂಗ್ (ಎಂಎಲ್) ನ ಶಕ್ತಿಯನ್ನು ಮಾರಾಟಗಾರರು ತಮ್ಮ ಪ್ರಮುಖ ಕಾರ್ಯಾಚರಣೆಗಳಾದ ನೋಂದಣಿ, ಪಟ್ಟಿ ಮತ್ತು ಜಾಹೀರಾತು, ಮುನ್ಸೂಚನೆ ಬೇಡಿಕೆ, ಕ್ಯಾಟಲಾಗ್ ಗುಣಮಟ್ಟ ಮತ್ತು ಉತ್ಪನ್ನ ಪಟ್ಟಿಗಳನ್ನು ಸುಧಾರಿಸಲು ಮತ್ತು ಡೀಲ್‍ಗಳು ಹಾಗೂ ಪ್ರೋತ್ಸಾಹಕಗಳನ್ನು ಶಿಫಾರಸು ಮಾಡಲು ಸಹಾಯ ಮಾಡುತ್ತದೆ. ಇದು ಇತ್ತೀಚೆಗೆ ಅಮೆಜಾನ್‍ನ ಉತ್ಪನ್ನ ಕ್ಯಾಟಲಾಗ್ ಮತ್ತು ವೆಬ್‍ನಾದ್ಯಂತ ಮಾಹಿತಿಯ ಕುರಿತು ತರಬೇತಿ ಪಡೆದ ಜೆನ್‍ಎಐ ಆಧಾರಿತ ಶಾಪಿಂಗ್ ಸಹಾಯಕ ರೂಫಸ್‍ನ ಬೀಟಾ ಆವೃತ್ತಿಯನ್ನು ಪ್ರಾರಂಭಿಸಿದೆ ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top