ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ: ವಾರ್ಷಿಕ ಲೆಕ್ಕಪತ್ರ ಮಹಾಸಭೆ

Upayuktha
0




ಪಣಜಿ:
ಎಲ್ಲ ಸಮಾಜಗಳಲ್ಲಿ ಧರ್ಮದ ಸಂಘಟನೆಗಳಲ್ಲಿ ಹಣಕಾಸಿನ ವಿಷಯದಲ್ಲಿ ಕೆಲವೊಮ್ಮೆ ಏನೇ ಅಡೆತಡೆಗಳು ಬಂದಾಗ ಹಿಂದಿನ ಎಲ್ಲ ವಿಷಯ ಮರೆತು ಇಂದಿನಿಂದ ಹೊಸದಾಗಿ ಯಾವುದೇ ಲೋಪದೋಷಗಳು ಆಗದಂತೆ ನಿಗಾ ವಹಿಸಿ ಎಂದು  ಸಮರ್ಥ ಮಂದಿರದ ಅಧ್ಯಕ್ಷ ಜಯೇಶ ನಾಯ್ಕ ನುಡಿದರು.


 ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ಮಡಗಾಂವ ಇದರ ವಾರ್ಷಿಕ ಲೆಕ್ಕಪತ್ರ ಸರ್ವ ಸಾಧಾರಣ ಸಭೆಯು  ಮಡಗಾಂವನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದು ಜಯೇಶ್ ನಾಯ್ಕ ಮಾತನಾಡಿದರು.


ಯಾವುದೇ ಕಾರಣಕ್ಕೂ ಸಮಾಜದ ಸದಸ್ಯತ್ವದ ಹಣವನ್ನು ಇನ್ನು ಮುಂದೆ ಕೇಂದ್ರ ಕಮೀಟಿ ಮಡಗಾಂವನಲ್ಲಿಯೇ ಇಡಬೇಕು. ಕೇವಲ ದಾನ ಬಂದ ಹಣದಲ್ಲಿ ಮಾತ್ರ ಕಾರ್ಯಕ್ರಮ ಮಾಡಿರಿ. ಇನ್ನು ಮುಂದೆ ನೀವು ಜಾಗ ಖರೀದಿಸಿ, ಗುಡಿ, ಮಠ, ಏನೇ ಖರೀದಿ ಮಾಡಲು ಫಕ್ಸ ಆಗಿ ಹಣವನ್ನು ಬ್ಯಾಂಕ್ ನಲ್ಲಿ ಫಿಕ್ಸ ಆಗಿ ಇಡಿ ಎಂದು ಜಯೇಶ್ ನಾಯ್ಕ ನುಡಿದರು. ಇದಕ್ಕೆ ಎಲ್ಲ ಸದಸ್ಯರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.


ಇನ್ನೋರ್ವ ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ ಮಾತನಾಡಿ- ಕೇಂದ್ರ ಕಮೀಟಿ ಎಂದ ಮೇಲೆ ಕೇವಲ ಮಡಗಾಂವ ಸದಸ್ಯರಷ್ಟೇ ಅಲ್ಲ ಎಲ್ಲಾ ಊರಿನ ಎಲ್ಲ ಶಾಖೆಯ ಸದಸ್ಯರಲ್ಲಿ ಒಬ್ಬೊಬ್ಬರನ್ನು ಕೇಂದ್ರ ಕಮೀಟಿಗೆ ಸೇರಿಸಿಕೊಳ್ಳಬೇಕು. ಆಗ ಸಮಾಜದಲ್ಲಿ ಒಂದು ಒಗ್ಗಟ್ಟಿನ ಬಲ ಬರುವುದು ಎಂದರು.


ಇನ್ನೋರ್ವ ಚುನಾವಣಾಧಿಕಾರಿಯಾಗಿ ಉಪಸ್ಥಿತರಿದ್ದ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಮಹೇಶ ಬಳಬಟ್ಟಿ ಮಾತನಾಡಿ- ಕೇಂದ್ರ ಕಮಿಟಿಗೆ ಎಲ್ಲ ಶಾಖೆಯ ಸದಸ್ಯರನ್ನು ಸೇರಿಸಿಕೊಳ್ಳು ವುದರಿಂದ ಸಮಾಜದ ಕಾರ್ಯಗಳು ಅತ್ಯಂತ ವಿಜೃಂಭಣೆಯಿಂದ ನೆರವೇರುವುದು. ಈ ಕಾರ್ಯಕ್ರಮ ಕೆಲಸಕ್ಕೆ ಸರ್ವರಿಂದಲೂ ಸಹಕಾರ ಸಿಗುವುದು ಎಂದರು.


ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಕೇಂದ್ರ ಕಮೀಟಿಯ ಅಧ್ಯಕ್ಷರಾದ ಜಯಶ್ರೀ ಹೊಸ್ಮನಿ ಮಾತನಾಡಿ- ವೀರಶೈವ ಲಿಂಗಾಯತ ಧರ್ಮವು ಅತ್ಯಂತ ಸನಾತನ ಧರ್ಮ. ಈ ಧರ್ಮದಲ್ಲಿ ಹುಟ್ಟಿದ ನಾವು ಭಾಗ್ಯವಂತರು. ಈ ಧರ್ಮದ ತತ್ವ ಸಿದ್ಧಾಂತಗಳು ಶರಣರ ವಚನ ಸಾಹಿತ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯ ಸಂಸ್ಕಾರ ಸಿಗುವುದು.ಗೋವಾದಲ್ಲಿ ಮರೆತು ಹೋಗುತ್ತಿರುವ ಧರ್ಮದ ತತ್ವಗಳನ್ನು ಉಳಿಸಬೇಕಾದರೆ ವರ್ಷಕ್ಕೆ ಒಮ್ಮೆಯಾದರೂ ಜಗಧ್ಗುರುಗಳನ್ನು ಬರಮಾಡಿಕೊಂಡು ಲಿಂಗದೀಕ್ಷೆ, ಮಂತ್ರ ದೀಕ್ಷೆ, ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವುದರ ಜೊತೆಗೆ ಜನರಲ್ಲಿ ಧರ್ಮಜಾಗೃತಿ ಮೂಡಿಸಬಹುದು ಎಂದರು.


ಜನವರಿ 5 ರಂದು ಭಾನುವಾರ ಮಡಗಾಂವನಲ್ಲಿ ಧರ್ಮಜಾಗೃತಿ ಕಾರ್ಯಕ್ರಮವನ್ನು ಕಾಶಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಮಾಡಲು ಸರ್ವರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಅಲ್ಲದೆಯೇ ಈ ಸಭೆಗೆ ಆಗಮಿಸಿದ ಬಿಚೋಲಿ ಹಾಗೂ ಸಾಖಳಿಯ ಸದಸ್ಯರು ತಮಗೂ ಶಾಖಾ ಕಮಿಟಿಯನ್ನು ಮಾಡಿಕೊಡಬೇಕು ಎಂದು ಕೇಳಿಕೊಂಡ ಕಾರಣ ಬಿಚೋಲಿಯ ಶಾಖಾ ಕಮಿಟಿಯ ಅಧ್ಯಕ್ಷರಾಗಿ ಬಸವರಾಜ ಹಿಪ್ಪರಗಿ ರವರನ್ನು, ಸಾಖಳಿಯ ಶಾಖಾ ಕಮಿಟಿಯ ಅಧ್ಯಕ್ಷರನ್ನಾಗಿ ಗಂಗಾಧರ ಅಂಗಡಿಯವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.


ಮಡಗಾಂವ ಕೇಂದ್ರ ಕಮಿಟಿಯ ನೂತನ ಅಧ್ಯಕ್ಷರಾಗಿ ಜಯಶ್ರೀ ಹೊಸ್ಮನಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಫರ್ತಾಬಾದ್, ಕಾರ್ಯದರ್ಶಿಯಾಗಿ ಸಂಗೀತಾ ಚಪರೆ, ಸಹಕಾರ್ಯದರ್ಶಿಯಾಗಿ ಮಲ್ಲಪ್ಪ ಕೋರಿ, ಕೋಶಾಧ್ಯಕ್ಷರಾಗಿ ಭೀಮನಗೌಡ ಪಾಟೀಲ, ಸಹಕೋಶಾಧ್ಯಕ್ಷರಾಗಿ ಚೆನ್ನು ಹಡಪದ, ವಿಶೇಷ ಸದಸ್ಯರಾಗಿ ದೀಪಕರಾಜ ಕುಡಚೀಮಠ, ಬದ್ರೇಗೌಡ ಬಾದರದಿನ್ನಿ, ಬಸವರಾಜ ಅಬ್ಬೀಗೇರಿ, ಸುರೇಶ ಹದಪದ, ಗಂಗಾಧರ ಅಂಗಡಿ, ರವರು ಸರ್ವಾನುಮತದಿಂದ ಆಯ್ಕೆಯಾದರು. ಈ ಸಮಾಜಕ್ಕೆ ಹನುಮಂತಪ್ಪ ಶಿರೂರ ರೆಡ್ಡಿ ರವರು ಗೋವಾ ರಾಜ್ಯದ ಗೌರವ ಅಧ್ಯಕ್ಷರಾಗಿ ಹನುಮಂತಪ್ಪ ಶಿರೂರ ರೆಡ್ಡಿ ಸರ್ವಾನುಮತದಿಂದ ಆಯ್ಕೆಯಾದರು.


ಸಲಹಾ ಸಮಿತಿಯಲ್ಲಿ ರುದ್ರಯ್ಯಸ್ವಾಮಿ ಹಿರೇಮಠ, ಶಂಕರ ಹೊಸ್ಮನಿ, ಮಹೇಶ ಬಳಬಟ್ಟಿ, ಮುತ್ತಪ್ಪ ಹಲಗತ್ತಿ, ಈರಣ್ಣ ಗೋದಿ, ಬಸವರಾಜ ಅಬ್ಬೀಗೇರಿ, ಬಾಲಪ್ಪ ಬೆಳವಾಡ, ಮಹಾದೇವಪ್ಪ ನಾಗೋಡ, ಸಿದ್ಧಾರ್ಥ ಗಾಡವಿ, ವಿರೂಪಾಕ್ಷ ತೊಂಡಿಹಾಳ, ಶಿವಾನಂದ ಯೋಗಿಕೊಳ್ಳಮಠ, ಜಗದೀಶ ಮೇಟಿ, ಹನುಮಂತಗೌಡ ಬಿರಾದಾರ್, ಮಹಾದೇವಪ್ಪ ಬಡಳವಾಡ, ಹನುಮಂತ ಉಮಚಗಿ, ಶಿವಾನಂದ ಮಸಬಿನಾಳ, ಸಂಜಯ ಶಿರಗಣ್ಣವರ್ ಸರ್ವಾನುಮತದಿಂದ ಆಯ್ಕೆಯಾದರು. ಸಂಗೀತಾ ಚಪರೆ ಪ್ರಾರ್ಥನೆಗೈದರು, ಚೆನ್ನು ಹಡಪದ ವಂದನಾರ್ಪಣೆಗೈದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top