ಕಲಬೆರಕೆಯ ಬಿಸಿಯನ್ನು ಭೂ ವೈಕುಂಠದ ದೇವರಿಗೂ ತೋರಿಸಿದ ಜನ...

Upayuktha
0


ತಿರುಪತಿಯ ಲಾಡುವಿನಲ್ಲಿ ಪ್ರಾಣಿ ಜನ್ಯ ಕೊಬ್ಬು ತುಪ್ಪದಲ್ಲಿ ಬಳಸುತ್ತಿರುವ ವಿಷಯ ದೃಢಪಟ್ಟು ಆಂಧ್ರಪ್ರದೇಶ ಸರಕಾರವು ಇದನ್ನು ಅಧಿಕೃತವಾಗಿ ಪ್ರಸಾರ ಮಾಡಿದ ಮೇಲೆ ಸಾಕ್ಷಿಗಳ ಸಮೇತ ಪ್ರಚಾರ ಮಾಡಿ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿರುವುದು ಸಧ್ಯಕ್ಕೆ ದೇಶದಾದ್ಯಂತ ಬಹು ಚರ್ಚಿತ ವಿಷಯವಾಗಿದೆ.


ತುಪ್ಪದಲ್ಲಿ ಕಲಬೆರಕೆಯ ಸಮಸ್ಯೆ:

ತುಪ್ಪದಲ್ಲಿ ಕಲಬೆರಕೆಯ ಸಮಸ್ಯೆ ಇತ್ತೀಚಿನ 2-3 ದಶಕಗಳಿಂದ ಅತೀಯಾಗಿಯೇ ನಡೆದಿದೆ ಕಾರಣ ಇಷ್ಟೆ ನಾವುಗಳು ಪ್ರಾಣಿಗಳನ್ನು ಅದರಲ್ಲೂ ಗೋವನ್ನು ಹೆಚ್ಚು ಪ್ರಮಾಣದಲ್ಲಿ ಸಾಕುವುದಿಲ್ಲ. ಅವಳ ರಕ್ಷಣೆಯ ಹೊಣೆಯನ್ನು ಕೂಡ ಹೊರದೇ ಇರುವ ಕಾರಣ, ತುಪ್ಪವನ್ನು ತಯಾರು ಮಾಡಲು ಸರಿಯಾಗಿ ಹಾಲನ್ನು ಕೊಡುವ ಎಲ್ಲ ಪ್ರಾಣಿಗಳ ರಕ್ಷಣೆ ಆಗುತ್ತಿಲ್ಲ. ತುಪ್ಪದ ಬೇಡಿಕೆಯಿಂದ ಇಂತಹ ಹೊಸ ಹೊಸ ರೀತಿಯಿಂದ ರಸಾಯನಿಕಗಳಿಂದ ತುಪ್ಪವನ್ನು ತಯಾರಿಸುವುದರನ್ನು ಜನರು ಕಲಿತು ಅಡಲ್ಟ್ರೇಷನ್‌ ಮಾಡುತ್ತ ಬಹಳ ದಿನಗಳಾಗಿವೆ.   


ಆದರೆ ಟಿಟಿಡಿ ದೇವಲಾಯದ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಸುವಿನ ದೇಹದಿಂದ ಜನ್ಯವಾದ ಕೊಬ್ಬಿನಂಶ ಅತೀ ಆಘಾತಕಾರಿ ವಿಷಯ ಏಕೆಂದರೆ ಹಿಂದು ಧರ್ಮದಲ್ಲಿ ದೇವರಿಗೆ ಯಾವುದೇ ಮಾಂಸದ ಅಥವಾ ಪ್ರಾಣಿ ಜನ್ಯ ಪದಾರ್ಥಗಳ ನೈವೇದ್ಯ ಮಾಡಲಾಗುವದಿಲ್ಲ. ಪಾರಂಪರಿಕವಾಗಿ ತಿರುಪತಿಯ ಲಡ್ಡು ಪ್ರಸಾದವನ್ನು ಶುದ್ಧವಾದ ದೇಸಿ ಆಕಳಿನ ತುಪ್ಪದಿಂದ ಶುದ್ಧವಾದ ತುಪ್ಪದಿಂದ ತಯಾರಿಸಲಾಗುತ್ತಿತ್ತು. ಜಗನ್ ಸರಕಾರವು ಬಂದ ಮೇಲೆ ನಂದಿನಿ ತುಪ್ಪದ ಗುತ್ತಿಗೆಯನ್ನು ಬದಲಾಯಿಸಿ ಬೇರೆ ಸಂಸ್ಥೆಯ ತುಪ್ಪಕ್ಕೆ ಕಡಿಮೆ ದರದಲ್ಲಿ ಟೆಂಡರ್‌ ಮಾಡಿಕೊಂಡ ಕಾರಣ ಅವರ ತುಪ್ಪದ ಗುಣಮಟ್ಟ ಮತ್ತು ಶುದ್ಧತೆಯನ್ನು ಪರೀಕ್ಷಿಸದೇ ಅಥವಾ ಪ್ರಜ್ಞಾಪೂರ್ವಕವಾಗಿಯೇ ಈ ಪ್ರಮಾದ ನಡೆದಿರಬಹುದು.


ಇಲ್ಲಿ ಜನರು ಗಮನಿಸಬೇಕಾಗಿರುವುದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಸಸ್ಯಾಹಾರಿ ಜನರ ಮನಸ್ಸಿಗೆ ದೊಡ್ಡ ಆಘಾತವೇ ಆಗಿದೆ.  ಇತ್ತೀಚಿಗೇ ಅಧ್ಯಯನಗಳ ಪ್ರಕಾರ ಮಾಂಸಾಹಾರದಿಂದ ಅನೇಕ ರೋಗ ರುಜಿನಗಳು ಬರುವುದಲ್ಲದೇ ಅದರಿಂದ ಅನೇಕ ತೊಂದರೆಗಳು ಬರುತ್ತವೆ. ಇಷ್ಟೆಲ್ಲ ತಿಳಿದಿದ್ದರೂ ಸರಕಾರವು ಅನವಶ್ಯಕ ಹಣ ಉಳಿತಾಯ ಮಾಡುವ ಅಥವಾ ಜನರ ಆರೋಗ್ಯ ಮತ್ತು ಧಾರ್ಮಿಕ ಭಾವನೆಗಳ ಬಗೆಗೆ ಕಾಳಜಿ ಮಾಡದೇ ದೊಡ್ಡ ಪ್ರಮಾದವೆಸಗಿದ್ದಾರೆ. ಇಲ್ಲಿ ಈ ಎಲ್ಲ ವಿವಾದ ಮತ್ತು ಅಪರಾಧಕ್ಕೆ ಕಾರಣ ಯಾರು ಅಥವಾ ಯಾರೆಲ್ಲ ಜವಾಬ್ದಾರಿ ಅವರಿಗೆ ಏನು ಶಿಕ್ಷೆ ಅಗಬೇಕು ಎಂದು ವಿಚಾರ ಮಾಡುವ ಮೊದಲಿಗೆ  ಧಾರ್ಮಿಕ ದತ್ತಿ ಇಲಾಖೆಗಳ ಸ್ಥಾಪನೆ ಮತ್ತು ಅವುಗಳ ಕಾರ್ಯನಿರ್ವಹಣೆಯಾಗು ಮತ್ತಿತರ ಕೆಲಸಗಳಲ್ಲಿ ಸುಧಾರಣೆ ಮಾಡಿ ಪ್ರಸಾದ ತಯಾರಿಕೆ ವಿತರಣೆ ಮೊದಲಾದ ಜವಾಬ್ದಾರಿ ನಿರ್ವಹಣೆಯಲ್ಲಿ ಶಿಸ್ತು ಮತ್ತು ಸರಿಯಾದ ನಿರ್ವಹಣೆ ಮಾಡುವ ಉತ್ತಮ ಅಧಿಕಾರಿಗಳನ್ನು ನೇಮಿಸುವ ವ್ಯವಸ್ಥೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ನಡೆಯ ಬೇಕು. ಎಲ್ಲಕ್ಕೂ ಹೆಚ್ಚಿಗೆ ದೇವಾಲಯಗಳ ಆಡಳಿತ ಸರಕಾರಗಳ ಕೈಲಿ ಬೇಡದೆ ಆಡಳಿತ ಆಯಾ ಧರ್ಮದ ಮುಖ್ಯಸ್ಥರಿಗೆ ಬಿಡುವುದು ಉತ್ತಮವೆನಿಸುತ್ತದೆ. 


ಏಕೆಂದರೆ ಭಾರತ ದೇಶದಲ್ಲಿ ದೇವಾಲಯಗಳು ಕೇವಲ ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗಿರದೇ ಸರಕಾರಕ್ಕೆ ಆದಾಯದ ಮೂಲಗಳಾಗಿವೆ. ಸರಕಾರಗಳು  ಸರಕಾರದ ಆಯವ್ಯಯದ ಒಂದಂಶವನ್ನು ಈ ದತ್ತಿ ಇಲಾಖೆಯಿಂದಲೂ ಪಡೆಯುತ್ತಾರೆ. ಯಾವುದೇ ಇಲಾಖೆಯ ಕೆಲಸದಲ್ಲಿ ಇರಲಿ ಸ್ವಚ್ಛತೆ ಮತ್ತು ಸುರಕ್ಷತೆಗೆ ಒತ್ತು ಕೊಟ್ಟು ಗಮನ ಹರಿಸಬೇಕು ಅದರಲ್ಲಿ ಧಾರ್ಮಿಕ ದತ್ತಿ ಇಲಾಖೆಗಳು ದೇವಾಲಯಗಳ ಕಾರ್ಯ ನಿರ್ವಹಣೆ, ಪ್ರಸಾದ ತಯಾರಿಕೆ, ನೀರು ಪೂರೈಕೆ ಮೊದಲಾದ ಆರೋಗ್ಯಕ್ಕೆ ಸಂಬಂಧಿತ ವಿಷಯಗಳಲ್ಲಿ ಹೆಚ್ಚು ಗಮನ ಹರಿಸಿ ಜನರ ಆರೋಗ್ಯ ರಕ್ಷಣೆಗೆ ಗಮನ ಹರಿಸಬೇಕು. ಸರಕಾರಗಳು ಕೇವಲ ತಾವು ಒಬ್ಬರೇ ಮಾಡುತ್ತೇವೆ ಎನ್ನದೆ ಸಾರ್ವಜನಿಕ ಸಹಾಭಾಗಿತ್ವ ಹಾಗೂ ಪಾರದರ್ಶಕತೆ ತೋರಿಸುವುದು ಬಹು ಮುಖ್ಯ ಸಂಗತಿಯಾಗಿದೆ.


ಸಮುದಾಯದ ಬಹಳಷ್ಟು ಜನರ ಧಾರ್ಮಿಕ ಭಾವನೆಗಳಿಗೆ ನಂಬಿಕೆ ದ್ರೋಹ ಮಾಡಿರುವುದು ಕಂಡು ಬಂದು ದೇಶದಾದ್ಯಂತ ಪ್ರಸಾದಗಳ ಲ್ಯಾಬ್‌ ಟೆಸ್ಟ್‌ಗೆ ಮುಂದಾಗಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ಸರಿ? ಧಾರ್ಮಿಕ ದತ್ತಿ ಇಲಾಖೆಯ ನೇಮಕಾತಿಯ ಸಮಯದಲ್ಲಿ ಜಾತ್ಯಾತೀತ ಎಂಬ ಹೆಸರಿನಲ್ಲಿ ಧಾರ್ಮಿಕ ಶ್ರದ್ಧೆ ಇರದ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ನಿಯುಕ್ತಿ ಹಾಗೂ ಉತ್ತಮ ಪದವಿಗಳ ನಿಯುಕ್ತಿ ಹಾಗೂ ಧಾರ್ಮಿಕ ಶ್ರದ್ಧೆಗಳನ್ನು ನಾಶ ಮಾಡುವ ಅವಹೇಳನ ಮಾಡುವ ಪ್ರಯತ್ನವೇ ನಡೆದಿದೆ ಎಂದೇ ಹೇಳ ಬಹುದು. ಈಗ ಪರೀಕ್ಷಣೆಗೆ ಗುರಿ ಮಾಡಿದರೆ ಹೊಸದಾದ ಪ್ರಸಾದ ತಯಾರಿಕೆ ಮಾಡಿಕೊಟ್ಟು ಪಾರಾಗುವ ಸಂಭವ ಇರಬಹುದು.   


ಆಗಿದ್ದನ್ನು ಬದಲು ಮಾಡಲು ಆಗುವುದಿಲ್ಲ ಆದರೆ ಮುಂದೆ ಇಂತಹ ಪ್ರಮಾದ ಮತ್ತು ಅನ್ಯಾಯದ ಕೆಲಸಗಳು ಆಗದಂತೆ ನೋಡಿಕೊಳ್ಳಬೇಕು. ಕೇವಲ ಸರಕಾರಗಳ ಅದೇಶದ ಮೇರೆ ದೇವಾಲಯಗಳ ನಿಯುಕ್ತಿ ಆಗದೇ ಆಯಾ ಸಮುದಾಯದ ಪ್ರತಿನಿಧಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಇಂತಹ ದೊಡ್ಡ ದೇವಾಲಯಗಳ ಅಥವಾ ಯಾವುದೇ ದೇವಾಲಯಗಳ ಸಿಬ್ಬಂದಿ ನೇಮಕಾತಿಯಲ್ಲಿ ಇರಲೇ ಬೇಕು. ಜೊತೆಗೆ ಗುಣಮಟ್ಟದ ಪರೀಕ್ಷಣೆಯಲ್ಲಿ ಕೂಡ ಕೇವಲ ಸರಕಾರಿ ಕರ್ಮಚಾರಿಗಳಲ್ಲದೇ ಸಾರ್ವಜನಿಕರ ಪ್ರತಿನಿಧಿಗಳನ್ನು ಸೇರಿಸಿಕೊಳ್ಳುವುದರಿಂದ ಯಾವುದೇ ರೀತಿ ಅನ್ಯಾಯ ಅಥವಾ ಗದ್ದಲಗಳಾದರೂ ಅದನ್ನು ಸಮಿತಿಯೊಳಗೆ ಇದ್ದು ಕೆಲಸ ಕಾರ್ಯಗಳನ್ನು ಗಮಿನಿಸಿ ಸುಧಾರಿಸುವ ಪ್ರಯತ್ನ ಮಾಡಬಹುದು


ನಂದಿನಿ ತುಪ್ಪದ ಬಳಕೆಯನ್ನು ನಿಲ್ಲಿಸಿ ಕಡಿಮೆ ದರದಲ್ಲಿ ತುಪ್ಪ ಖರೀದಿ ಮಾಡಿದುದು ಇಷ್ಟೆಲ್ಲ ಆಘಾತಕಾರಿ ಘಟನೆಗೆ ಮೂಲವಾಗಿದೆ.  ಆದರೆ ಧಾರ್ಮಿಕವಾಗಿ ಬೇರೆ ಧರ್ಮದ ಜನರನ್ನು ಯಾವುದೇ ದೇವಸ್ಥಾನದ ಸಮಿತಿಯೊಳಗೆ ಅಥವಾ ಉದ್ಯೋಗದೊಳಗೆ ಬಿಡಬಾರದು ಎಂಬ ನಿಯಮವನ್ನೇ ತರಬೇಕು. ಕೆಲವು ಧರ್ಮದ ಜನರಿಗೆ ಮತ್ತೊಬ್ಬರ ಧರ್ಮದ ಬಗೆಗೆ ಗೌರವ ಇರದೇ ಇತರ ಧರ್ಮದವರನ್ನು ಧಾರ್ಮಿಕ ಸ್ಥಳದಲ್ಲಿ ನಿಯುಕ್ತಿ ಮಾಡುವ ಕೆಟ್ಟ ಜಾತ್ಯಾತೀತತೆಯನ್ನು ಕೈ ಬಿಟ್ಟರೆ ಉತ್ತಮ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top