ಲಂಗು ಲಗಾಮಿಲ್ಲದ ಜೀವನದಿಂದ ಅನರ್ಥ: ಪ್ರೊ. ಹೊನ್ನಶೆಟ್ಟಿಹಳ್ಳಿ

Upayuktha
0




ಹಾಸನ: ಲಂಗು ಲಗಾಮಿಲ್ಲದ ಜೀವನವನ್ನು ನಡೆಸಿದರೆ ಅನರ್ಥಕ್ಕೆ ತುತ್ತಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಪ್ರೊ.ಹೊನ್ನಶೆಟ್ಟಿಹಳ್ಳಿ ಅವರ ಸುರಸ್ವೈರ  ಕಾದಂಬರಿ ತಿಳಿಸುತ್ತದೆ ಎಂದು ಪ್ರಾಧ್ಯಾಪಕ ರಂಗೇಗೌಡ ಡಿ.ಬಿ. ತಿಳಿಸಿದರು.


ಹಾಸನದ ಮನೆ ಮನೆ ಕವಿಗೋಷ್ಟಿ ವತಿಯಿಂದ ಸಾಹಿತಿ ಕಲಾವಿದ ಗ್ಯಾರಂಟ ರಾಮಣ್ಣ ಅವರ ಪ್ರಾಯೋಜನೆಯಲ್ಲಿ ನಡೆದ 320ನೇ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ ನಾಲ್ಕು ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳನ್ನು ಗಳಿಸಿ ಸಾರ್ಥಕ ಬದುಕನ್ನ ಬದುಕಬೇಕೆಂದು ಧರ್ಮ ಬೋಧಿಸುತ್ತದೆ ಮನುಷ್ಯ ಜೀವಿಯ ಪರಮಗುರಿ ಈ ನಾಲ್ಕನ್ನು ಆರ್ಜಿಸುವುದು ಎಂದು ಕಾದಂಬರಿ ಯನ್ನು ಹಲವು ಜೀವನದ ಉದಾಹರಣೆಗಳಿಂದ ಕೃತಿಯನ್ನು ವಿಮರ್ಶಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎನ್.ಎಲ್.ಚನ್ನೇಗೌಡ, ಗೊರೂರು ಅನಂತರಾಜು, ಕಮಲಮ್ಮ, ದಿಬ್ಬೂರು ರಮೇಶ್, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ರುಮಾನ ಜಬೀರ್, ಎಂ.ಬಿ.ಪರಮೇಶ್ ಮಡಬಲು, ಎ.ನಂಜಪ್ಪ, ಹೆಚ್.ಬಿ. ಚೂಡಾಮಣಿ, ಪದ್ಮಾವತಿ ವೆಂಕಟೇಶ್, ಜಿ.ಆರ್.ರವಿಕುಮಾರ್ ಜನಿವಾರ, ಗ್ಯಾರಂಟಿ ರಾಮಣ್ಣ, ಆರ್. ವೆಂಕಟೇಶ್, ಕಾಮಕ್ಷಿ ಕೃಷ್ಣಮೂರ್ತಿ ಸ್ವರಚಿತ ಕವಿತೆ ವಾಚಿಸಿದರು. 


ವಾಚಿಸಲ್ಪಟ್ಟ ಕವಿತೆಗಳ ಕುರಿತು ಡಾ. ಬರಾಳು ಶಿವರಾಮ ವಿಮರ್ಶಿಸಿದರು. ಧನಲಕ್ಷ್ಮೀ ಹಾಸನ, ಎ. ನಂಜಪ್ಪ, ರಮೇಶ್ ದಿಬ್ಬೂರು, ಗ್ಯಾರಂಟಿ ರಾಮಣ್ಣ ಭಾವಗೀತೆಗಳನ್ನು, ಲಕ್ಶ್ಮಣ ತಟ್ಟೇಕೆರೆ ತತ್ವಪದ ವನ್ನು, ಅಪ್ಪಾಜಿಗೌಡ ಆರ್. ಹಲಸಿನಹಳ್ಳಿ, ರಾಮಲಿಂಗೇಗೌಡರವರು ರಂಗಗೀತೆಗಳಿಂದ ರಂಜಿಸಿದರು. ಸಂಚಾಲಕರು ಹಾಗೂ ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top