ಪುತ್ತೂರು: ಫಿಲೋಮಿನಾ ಕಾಲೇಜಿಗೆ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರಶಸ್ತಿ

Upayuktha
0



ಪುತ್ತೂರು:
ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಆಶ್ರಯದಲ್ಲಿ  ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 3 ಮತ್ತು 4 ರಂದು ನಡೆದ '3ನೇ ನ್ಯಾಷನಲ್ ಜಾವಲಿನ್ ಡೇ ಕಾಂಪಿಟೇಶನ್ಸ್ & ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ-2024' ರಾಜ್ಯಮಟ್ಟದ  ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ  ಕಾಲೇಜಿನ ದ್ವಿತೀಯ ಕಲಾ ವಿಭಾಗದ ಅಹಿಜಿತ್ ಕೆ.ಎಂ ಜಾವಲಿನ್ ಥ್ರೋ ದಲ್ಲಿ  52.67 ಮೀ  ಎಸೆಯುವ ಮೂಲಕ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಣಿಯೂರು ನಿವಾಸಿ ಮಾಧವ ಕೆ ಹಾಗೂ ಜ್ಯೋತಿ ಕೆ ವಿ ದಂಪತಿಗಳ ಪುತ್ರನಾದ ಇವರು ದೈಹಿಕ ಶಿಕ್ಷಕ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ತರಬೇತಿಯನ್ನು ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top