ಬಾಗಲಕೋಟೆಯಲ್ಲಿ ಸೆ.22ಕ್ಕೆ ರಾಜೇಂದ್ರ ಪರ್ವತೀಕರ ‘ಬದರಿಧಾಮದ ತಪೋನಿಧಿ’ ಕೃತಿ ಬಿಡುಗಡೆ

Upayuktha
0

ಬಾಗಲಕೋಟೆ: ನಾದಯೋಗಿ ದಿ.ದತ್ತಾತ್ರೇಯ ಪರ್ವತೀಕರ ಅವರು ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆಸಿ ‘ಬದರಿಧಾಮದ ತಪೋನಿಧಿ’ ಎಂಬ ಕೃತಿ ರಚಿಸಲಾಗಿದ್ದು, ಬಾಗಲಕೋಟೆ ನಗರದಲ್ಲೇ ಈ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಲೇಖಕ ರಾಜೇಂದ್ರ ಪರ್ವತೀಕರ ಹೇಳಿದರು.


ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಬದರಿಧಾಮದ ತಪೋನಿಧಿ’ ಕೃತಿಯ ಮುಖಪುಟ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.


ವೀಣಾ ವಾದನದ ಮೂಲಕ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ ಪರ್ವತೀಕರ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮೂಲದವರು. ಇವರು ನಾದಯೋಗಿ ಎಂದೇ ಹೆಸರಾಗಿ ಬಾಗಲಕೋಟೆಯ ಕೀರ್ತಿಯನ್ನು ಭಾರತದಾದ್ಯಂತ ಬೆಳಗಿದ್ದಾರೆ. ಇಂಥ ಸಂಗೀತ ಸಾಧಕರ ಕುರಿತು ಅಪರೂಪದ ಕೃತಿ ರಚಿಸಲಾಗಿದೆ. ಪರ್ವತೀಕರ ಅವರ ತವರು ಜಿಲ್ಲೆ ಎನಿಸಿದ ಬಾಗಲಕೋಟೆಯಲ್ಲೇ ಸೆ22ರಂದು ಈ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ಇದರೊಂದಿಗೆ ಸಂಗೀತ ಕಾರ್ಯಕ್ರಮ, ಹಕ್ಕಿಯ ಹೆಗಲೇರಿ ನಾಟಕ ಪ್ರದರ್ಶನ ಕೂಡ ನಡೆಯಲಿದೆ ಎಂದರು.


ಪರ್ವತೀಕರ ಮನೆತನದ ನಿವೃತ್ತ ಉಪನ್ಯಾಸಕ ಸುರೇಶ ಪರ್ವತೀಕರ ಮಾತನಾಡಿ, ಗುಳೇದಗುಡ್ಡದಲ್ಲಿ ಮುವತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ವರ್ಷ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಾದಯೋಗಿ ಪರ್ವತೀಕರ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಅವರ ಬಗ್ಗೆ ರಚಿಸಲಾದ ಕೃತಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ಈ ಕೃತಿ ಬಿಡುಗಡೆ ಸಮಾರಂಭದ ಯಶಸ್ಸಿಗೆ ಬಾಗಲಕೋಟೆ ಹಿರಿಯರು, ಸಂಗೀತಾಸಕ್ತರು ಕೈಜೋಡಿಸಬೇಕು ಎಂದು ವಿನಂತಿಸಿದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ್, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ನಾದಯೋಗಿ ಪರ್ವತೀಕರ ಅವರು ಬಾಗಲಕೋಟೆಯ ಹೆಮ್ಮೆಯ ಸಂಗೀತ ಸಾಧಕರು. ಅವರ ಕೃತಿ ಬಿಡುಗಡೆ ಸಮಾರಂಭಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. 


ಉದ್ಯಮಿ ಇಂದ್ರಜೀತ್ ದರ್ಬಾರ, ವಾಸುದೇವ ಢಾಣಕಶಿರೂರ, ವಾಸುದೇವ ವಿನೋದಿನಿ ನಾಟ್ಯ ಸಭೆ ಕಾರ್ಯದರ್ಶಿ ಲಕ್ಷ್ಮೀ  ನಾರಾಯಣಾಚಾರ್ ಗುಡಿ ಮಾತನಾಡಿದರು. ವಿ.ಗಿರಿಯಾಚಾರ್, ಪರಿಮಳಾ ಅವಧಾನಿ, ಶ್ರೀ ಹರಿ ಪಾಟೀಲ, ಕೆ.ಬಿ.ದೇಸಾಯಿ, ವಿನಯ ಪರ್ವತೀಕರ, ರಮೇಶ ಚಿಲ್ಲಾಪೂರ, ಶಶಿ ದೇಶಪಾಂಡೆ, ಪವನ ಸೀಮಿಕೇರಿ, ಪ್ರವೀಣ ಮಂಕಣಿ, ಸಂಕಲ್ಪ ದೇಸಾಯಿ, ಕಿರಣ ಕುಲಕರ್ಣಿ ಇತರರಿದ್ದರು. ಸಚಿನ್ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ರಂಗಕರ್ಮಿ ಅನಂತ ಪುರೋಹಿತ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top