ಪುತ್ತೂರಿನಲ್ಲಿ ಕ್ಯಾನ್ಸರ್ ಗೆ ಟ್ರೀಟ್‌ಮೆಂಟ್: ಪ್ರಸಾದಿನೀ ಆಸ್ಪತ್ರೆಯಲ್ಲಿನ್ನು ಪಂಚಗವ್ಯ ಚಿಕಿತ್ಸೆ ಲಭ್ಯ

Upayuktha
0


ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಭಾನುವಾರ (ಆ.11) ಪಂಚಗವ್ಯ ಚಿಕಿತ್ಸಾ ಶಿಬಿರ ಜರುಗಿತು. 


ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಗತಿ ವಿಧಿ, ಹಾಗೂ ಅರೋಗ್ಯ ಭಾರತಿ ಸಹಯೋಗದಲ್ಲಿ ಶಿಬಿರ ನಡೆಯಿತು. ಬೆಂಗಳೂರಿನ "Answer for cancer" ಖ್ಯಾತಿಯ ಆಯುರ್ವೇದ ತಜ್ಞ ವೈದ್ಯ ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞ ಡಾ. ಡಿ.ಪಿ. ರಮೇಶ್ ಶಿಬಿರ ಹಾಗೂ ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಗೋಸೇವಾ ಗತಿವಿಧಿ ಮಂಗಳೂರು ವಿಭಾಗದ ಸಂಯೋಜಕ ಗಂಗಾಧರ ಪೆರ್ಮಂಕಿ ಉದ್ಘಾಟಿಸಿದರು. ಅರೋಗ್ಯ ಭಾರತಿ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಜೆ ಅಧ್ಯಕ್ಷತೆ ವಹಿಸಿದ್ದರು.


ಗೋಷ್ಠಿಯಲ್ಲಿ ಡಾ. ಡಿ.ಪಿ. ರಮೇಶ್ ಇವರು "ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ"ದ ಬಗ್ಗೆ, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ "ಪಂಚಗವ್ಯ ಚಿಕಿತ್ಸೆ- ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ  ಪ್ರಾಸ್ತಾವಿಕವಾಗಿ ಮಾತನಾಡಿದರು.


ಯಾವುದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಈಗ ಗುಣ ಹೊಂದಿದವರು ಅದು ಮರುಕಳಿಸದಂತೆ, ಕ್ಯಾನ್ಸರ್ ಎಂದು ಈಗ ತಾನೇ ಪತ್ತೆಯಾದ ಹಂತದಲ್ಲಿ ಇರುವವರು, ಚಿಕಿತ್ಸೆ ಪಡೆಯುತ್ತಾ ಇರುವವರು ಸಂದರ್ಶಿಸಿ ಚಿಕಿತ್ಸೆ ಪಡೆದುಕೊಂಡರು. ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮತ್ತು ಡಾ. ಡಿ.ಪಿ. ರಮೇಶ್ ಸ್ತನ ಕ್ಯಾನ್ಸರ್, ವೃಷಣ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಇತ್ಯಾದಿ ಕ್ಯಾನ್ಸರ್ ರೋಗಿಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದರು.


ಡಾ. ಶ್ರುತಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಎಂ.ಎಸ್. ಭಟ್ ಸ್ವಾಗತಿಸಿದರು. ಕ್ಯಾನ್ಸರ್ ಗೆ ಈ ಪಂಚಗವ್ಯ ಚಿಕಿತ್ಸಾ ಘಟಕ ಇನ್ನು ಪ್ರಸಾದಿನೀ ಆಸ್ಪತ್ರೆಯಲ್ಲಿ ನಿರಂತರ ಚಾಲನೆಯಲ್ಲಿರುವುದು. ಮಾಹಿತಿಗೆ 9740545979 ದೂರವಾಣಿಗೆ ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ, ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ  ವಿನಂತಿಸಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top