ಬೆಂಗಳೂರು: ಸುಧೀಂದ್ರನಗರದಲ್ಲಿ "ರಾಯರ ಆರಾಧನೆ" , "ಶ್ರೀಕೃಷ್ಣ ಜನ್ಮಾಷ್ಟಮಿ"

Upayuktha
0


ಬೆಂಗಳೂರು :
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 11 ರಿಂದ 27ರ ವರೆಗೆ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಹಾಗೂ "ಶ್ರೀಕೃಷ್ಣ ಜನ್ಮಾಷ್ಟಮಿ"ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) : ಆಗಸ್ಟ್ 11 - ಕಾಣಿಯೂರು ಮಠಾಧೀಶರಾದ ಶ್ರೀ 1008 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿಂದ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಆಶೀರ್ವಚನ. ಆಗಸ್ಟ್ 12 - ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದವರಿಂದ "ನೃತ್ಯ ರೂಪಕ", ಆಗಸ್ಟ್ 13 - ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ", ಆಗಸ್ಟ್ 14 - ವಿದುಷಿ ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ", ಆಗಸ್ಟ್ 15 - ವಿದುಷಿ ಶ್ರೀಮತಿ ಅರ್ಚನಾ ಕುಲಕರ್ಣಿ ಮತ್ತು ಸಂಗಡಿಗರಿಂದ "ದಾಸವಾಣಿ", ಆಗಸ್ಟ್ 16 - ಶ್ರೀ ರಾಘವೇಂದ್ರರಾವ್ ಮತ್ತು ಸಂಗಡಿಗರಿಂದ "ಹರಿ ಭಜನೆ", ಆಗಸ್ಟ್ 17 - ರಾಯಚೂರಿನ 'ಯುವ ಗಾಯಕ' ಶ್ರೀ ವರದೇಂದ್ರ ಗಂಗಾಖೇಡ್ ಇವರಿಂದ "ದಾಸರ ಪದಗಳ ಗಾಯನ" ಮತ್ತು ಮ||ಶಾ||ಸಂ|| ಡಾ|| ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಇವರಿಂದ "ವ್ಯಾಖ್ಯಾನ", ಆಗಸ್ಟ್ 18 - ಶ್ರೀ ನಾರಾಯಣನ್ ಮತ್ತು ಸಂಗಡಿಗರಿಂದ "ಹಾಡುಗಾರಿಕೆ", ಆಗಸ್ಟ್ 19 - ಕು|| ರಚನಾ ಶರ್ಮಾ ಮತ್ತು ಸಂಗಡಿಗರಿಂದ "ದೇವರ ನಾಮಗಳು".


ಪ್ರವಚನ ಕಾರ್ಯಕ್ರಮಗಳು  (ಪ್ರತಿದಿನ ಸಂಜೆ 6-30ಕ್ಕೆ) : ಆಗಸ್ಟ್ 20 - ಶ್ರೀ ಚಂದ್ರಶೇಖರಾಚಾರ್ಯ, ಆಗಸ್ಟ್ 21 - ಡಾ|| ಆನಂದತೀರ್ಥಾಚಾರ್ಯ ಮಾಳಗಿ, ಆಗಸ್ಟ್ 22 - ಶ್ರೀ ಕಲ್ಯಾ ಶ್ರೀಕಾಂತಾಚಾರ್ಯ, ಆಗಸ್ಟ್  23 - ಶ್ರೀ ಶ್ರೀನಿಧಿ ಆಚಾರ್ಯ.


ಶ್ರೀಕೃಷ್ಣ ಜನ್ಮಾಷ್ಟಮಿ : ಆಗಸ್ಟ್ 24 ರಿಂದ 26ರ ವರೆಗೆ ಶ್ರೀ ಕಲ್ಲಾಪುರ ಪವಮಾನಾಚಾರ್ಯರಿಂದ "ಹರಿದಾಸರು ಕಂಡ ಶ್ರೀಕೃಷ್ಣ" ವಿಷಯವಾಗಿ ಪ್ರವಚನ. ಆಗಸ್ಟ್ 27 - ಮಧ್ಯಾಹ್ನ 3-30ಕ್ಕೆ : ಚಿಕ್ಕಮಕ್ಕಳಿಂದ "ಶ್ರೀಕೃಷ್ಣ ವೇಷ ಸ್ಪರ್ಧೆ", ರಾತ್ರಿ 9-00ಕ್ಕೆ ಸಮಾರೋಪ ಸಮಾರಂಭ, ಸರ್ವಸಮರ್ಪಣ, ಸ್ವಸ್ತಿ ವಾಚನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ.


ಮೇಲ್ಕಂಡ ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಎಚ್. ನರಹರಿ ರಾವ್ ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top