ಶ್ರೀ ಸತ್ಯಾತ್ಮವಾಣಿ- 10: ಧನಕನಕಾದಿಗಳ ಹಿಂದೆ ಬೀಳದೆ ಜ್ಞಾನ ಮಾರ್ಗದಲ್ಲಿರುವವರು ಪೂಜ್ಯರು

Upayuktha
0


ಗವಂತನಿಗೆ ಪ್ರಧಾನವಾಗಿ ಸರ್ವೋತ್ತಮನಾಗಿದ್ದಾನೆ ಎಂದು ತಿಳಿದು ನಮಸ್ಕಾರ ಮಾಡುವವರು ಅಂತರ್ಯಾಮಿ ಪರಮಾತ್ಮನಿಗೆ ಎರಗಬೇಕು. ತಲೆ ಬಾಗುವುದು ಕೈ ಜೋಡಿಸುವುದು ದಂಡವತ್‌ ನಮಸ್ಕಾರ ಮಾಡುವುದು. ಶರೀರವೇ ನಾವಿರುವ ಮನೆಯ ಈ ಶರೀರ ಆತ್ಮನ ಮನೆ ಮನೆಯನ್ನು ದೇವರಿಗೆ ಒಪ್ಪಿಸಬಹುದು ಈ ಅನುಕೂಲತೆಯನ್ನು ದೇವರು ನಮಗೆ ಕೊಟ್ಟಿದ್ದಾನೆ. ಉಪನಿಷತ್ತು ಹೇಳುತ್ತದೆ, ನಮ್ಮ ಶರೀರ ರಥ ಇದ್ದಂತೆ ದೇವರ ಮುಂದೆ ಅರ್ಪಿಸುತ್ತೇನೆ ಎಂಬ ಭಾವ ನಮಸ್ಕಾರ ಮಾಡುವಾಗ ಇರಬೇಕು.  ಅಷ್ಟಾಂಗವನ್ನು ಅರ್ಪಿಸಿ ನಮಸ್ಕಾರ ಮಾಡಬೇಕು. ಬಾಯಿಯಿಂದ ಪ್ರಾರ್ಥನೆ ಮಾಡುತ್ತಿರಬೇಕು ಅಹಂಕಾರ ನನ್ನ ಹತ್ತಿರ ಸುಳಿಯದಂತೆ ಅವನ ಗುಣಗಳ ಕಥನ ಮಾಡುತ್ತಿರಬೇಕು ಜೋರಾಗಿ ಹೇಳಬೇಕು ಅದು ಕಿವಿಗೆ ಕೇಳುವಂತಿರಬೇಕು.  ಕಾಲುಗಳು ಕೈಗಳು ಎದೆ ನೆಲಗಳಿಗೆ ಸ್ಪರ್ಶಿಸಬೇಕು ಮನಸ್ಸು ಸಂಪೂರ್ಣವಾಗಿ ನಮಸ್ಕಾರ  ಮಾಡುವುದು ಸಾಷ್ಟಾಂಗ ನಮಸ್ಕಾರ. ಈ ಸಾಷ್ಟಾಂಗ ನಮಸ್ಕಾರ ಮಾಡುವಾಗ ಮೊದಲು ತಲೆಬಾಗಬೇಕು ನಂತರ ಕ್ರಮದಂತೆ ನಮಸ್ಕಾರ ಮಾಡಬೇಕು. 


ದೇವರು ಗುರುಗಳು ಜ್ಞಾನಿಗಳಿಗೆ ನಮಸ್ಕಾರ ಮಾಡುವುದು ಅಂದರೆ ಶಿರಸಾ ಸಾಷ್ಟಾಂಗ ನಮಸ್ಕಾರ ಮಾಡಬೇಕು. ನಮಸ್ಕಾರ ಮಾಡುವಾಗ ಮನಸು ದೇವರ ಚರಣದಲ್ಲಿ ಬೀಳ ಬೇಕು. ಮನಸ್‌ ದೇವರ ಪಾದಕ್ಕೆ ಬಿದ್ದಾಗ ನಮಸ್ಕಾರ.  ಅದಕ್ಕೆ ನಮಸ್ಕಾರ ಮಾಡುವಾಗ ಮೊದಲು ಮನಸ್ ಪೂರ್ವಕವಾಗಿ ಇರಬೇಕು. ಹೀಗೆ ನಮಸ್ಕಾರದ ಬಗೆಗೆ ಹೇಳುತ್ತಾ ಇಂದ್ರದೇವರು ನಾವು ಹೇಗೆ ಇರಬೇಕು ಎಂಬುದನ್ನು ಹೇಳಿದ್ದಾರೆ, ನಮಸ್ಕಾರ ಮಾಡಿಸಿಕೊಳ್ಳುವ ಯೋಗ್ಯತೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು ತಿಳಿಸುತ್ತಾರೆ. ಸಾಕಷ್ಟು ಧನ ಸಂಪತ್ತು ಇದ್ದಾರೆ ಎಂದು ಇದ್ದರೂ ಬಹಳ ಸರಳವಾದ ಜೀವನ ನಡೆಸುವವರಿಗೆ ನಮಸ್ಕಾರ ಮಾಡುತ್ತೇನೆ, ಒಂದು ವಿದ್ಯೆ ಇರುವವರಿಗೆ ಅಹಂಕಾರ ಬರುತ್ತದೆ. ವಿದ್ಯೆ ಇದ್ದರೂ ಅಹಂಕಾರ ಇರುವವರಿಗೆ ನಮಸ್ಕಾರ ಮಾಡುವುದಿಲ್ಲ ವಿನಯವಂತರಿಗೆ ನಮಸ್ಕಾರ ಮಾಡುತ್ತೇನೆ ಎನ್ನುತ್ತಾರೆ. 



ಟೀಕಾಕೃತ್ಪಾದರು ನಮ್ಮ ಮೇಲೆ ಆನಂದತೀರ್ಥರ ಕಾರುಣ್ಯ ಇದೆ ಎನಿಸಿದರೆ ಈ ಗ್ರಂಥ ಓದಿ ಎಂದು ಹೇಳುತ್ತಾರೆ. ಇಂತಹ ವಿನಯವಂತರಿಗೆ ನಮಸ್ಕಾರ ಮಾಡಬೇಕು. ಹೀಗೆ ಎಲ್ಲ ಜ್ಞಾನಿಗಳು ಇದ್ದಾರೆ ಅವರ ಗ್ರಂಥಗಳ ಅಧ್ಯಯನ ಮಾಡಿ ಪಾಠ ಪ್ರಚವನ ಮಾಡಿ ಜ್ಞಾನ ಪಡೆಯಬೇಕು. ಯಾರಿಗೆ ಅಹಂಕಾರ ಬರುವುದಿಲ್ಲ ಅವರು ಪೂಜ್ಯರು. ತಮ್ಮ ಶಿಷ್ಯರಲ್ಲಿ ಬಂದ ಅಹಂಕಾರವನ್ನು ನಿಗ್ರಹವನ್ನು ಮಾಡುವ ಜ್ಞಾನಿಗಳಿಗೆ ನಾನು ನಮಿಸುತ್ತೇನೆ ಎನ್ನುತ್ತಾರೆ. ಈ ಸಂಭಾಷಣೆಯ ಮೂಲಕ ಲೋಕ ಶಿಕ್ಷಣಕ್ಕಾಗಿ ಹೇಳುತ್ತಾರೆ. ದೊಡ್ಡ ಅಧಿಕಾರ ಬರುವಾಗಲೂ ಅದನ್ನು ಬೇಡವೆನ್ನುವ ಗುಣ ದೊಡ್ಡದು ಸಾಧನೆ ಮಾಡುವುದು ಪಾಠ ಪ್ರವಚನ ಮಾಡಲು ತಮ್ಮ ಜೀವನವನ್ನು ಮುಡುಪಾಗಿಟ್ಟವರು ಶ್ರೀ ವೇದೇಶ ತೀರ್ಥರು. 


ಶ್ರೀ ಯಾದವಾರ್ಯರಿಗೆ ಮೊಗಟ ಖಾನ ಹುಬ್ಬಳ್ಳಿಯಲ್ಲಿ ಬೕೆಕಾದಷ್ಟು ಧನ ಸಂಪತ್ತು ಸಿಗುತ್ತದೆ. ಒಂದು ಹೊತ್ತಿಗೆ ಇಲ್ಲದಷ್ಟು ದಾರಿದ್ರ್ಯ ಇದ್ದಾಗಲೂ ಶ್ರೀಯಾದವಾರ್ಯರು ವಿದ್ಯಾರ್ಥಿಗಳನ್ನು ಸಲಹುತ್ತಿದ್ದರು. ಶ್ರೀಯಾದವಾರ್ಯರು ಧೋತರ ಒಣಗಿ ಹಾಕುವಾಗ ಹಂಡೆಯಲ್ಲಿ ಬಂಗಾರದ ನಾಣ್ಯ ಸಿಗುತ್ತದೆ.   ಆಗ ಒಂದು ಸ್ವಲ್ಪವೂ ವಿಕಾರವಾಗಲಿಲ್ಲ. ಅವರು ಆ ಊರನ್ನು ಬಿಟ್ಟು ಮುಂದಿನ ಊರಿಗೆ ಹೊರಟರು. ಧನ ಸಂಪತ್ತು ಇದ್ದಲ್ಲಿ ವಾಸ ಇಲ್ಲ ಎಂದು ಹೊರಟರು ಇಂತಹವರು ಪೂಜ್ಯರಾಗುತ್ತಾರೆ. ಶ್ರೀಮುಷ್ಣದಲ್ಲಿ ರಾಜನಿಗೆ ಬಿಳಿಪಾಗಿತ್ತು. ಶ್ರೀಯಾದವಾರ್ಯರು ಅಲ್ಲಿ ಯಾತ್ರೆಗೆ ಹೋಗಿದ್ದರು. ಆ ರಾಜನ ಸ್ವಪ್ನದಲ್ಲಿ ಒಂದು ಸೂಚನೆ ಸಿಗುತ್ತದೆ. ಶ್ವೇತವರಾಹ ಬಂದು ಅವನ ಮೈಯನ್ನು ನೆಕ್ಕುತ್ತದೆ ಅವನ ರೋಗವು ಹೋಗಿರುತ್ತದೆ. ರಾಜನು ತನ್ನ ಕನಸಿನಲ್ಲಿ ಶ್ವೇತವರಾಹದ ಬೆನ್ನು ಹತ್ತಿ ಹೋಗುತ್ತಾನೆ. ಮುಂಜಾನೆ ಎದ್ದು ಆ ವರಾಹದೇವರು ಹೋದ ಸ್ಥಳಕ್ಕೆ ಹೋದರೆ ಅಲ್ಲಿ ಶ್ರೀಯಾದವಾರ್ಯರು ಕುಳಿತಿದ್ದರು.   ಆ ರಾಜ ಯಾದವಾರ್ಯರಿಗೆ ಭೂಮಿ ಸಂಪತ್ತು ಕೊಡಲು ಬಂದರೆ ಮನಸ್ಸು ವಿಕಾರ ಆಗಲಿಲ್ಲ ಅಲ್ಲಿ ಇರದೇ ಮುಂದೆ ಊರಿಗೆ ಹೊರಟರು. ಆರ್ಯಾಚಾರ್ಯರು ಇದ್ದಾರೆ ಅವರಿಗೆ ಕೊಡು ಎಂದು ರಾಜನಿಗೆ ಹೇಳಿ ಮುಂದೆ ಯಾತ್ರೆಗೆ ಹೊರಡುತ್ತಾರೆ.


ಭಗವಂತನ ಅನುಗ್ರಹ ಕೆಲವೇ ಜ್ಞಾನಿಗಳಲ್ಲಿ ಮಹನೀಯರಲ್ಲಿ ಇರುತ್ತದೆ ಎಂದು ಹೇಳುತ್ತಾರೆ. ಮಹಾಪಾಂಡಿತ್ಯ ಇರುವವರು ಹೆಂಡತಿಗೂ ಪ್ರಿಯರಾಗಿರಬೇಕು, ಹೆಂಡತಿಗೂ ಇವರು ಪ್ರಿಯರಾಗಿರಬೇಕು ಅಂತಹ ಅನುರೂಪ ದಾಂಪತ್ಯ ಇರುವ ಗೃಹಸ್ಥರಿಗೆ ಅವರು ನಿಜವಾದ ಗುಣವಂತರು  ಅವರು ಪೂಜ್ಯರು ಎಂದು ಇಂದ್ರದೇವರು ಹೇಳುತ್ತಾರೆ.


ಇಂದಿನ ಕಾಲಕ್ಕೆ ಮಹಾಭಾರತದ ಅತೀ ಮುಖ್ಯವಾದ ಸಂದೇಶ ಅನುರೂಪ ದಾಂಪತ್ಯ ಇರದೇ ಹೋದರೆ ಏನು ಪ್ರಯೋಜನವಿಲ್ಲ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಿಕೊಂಡರೆ ನಾವು ದೇವತೆಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಹೇಳಿದ್ದಾರೆ. ಶುದ್ದವಾಗಿ ಆಚಾರ ವಿಚಾರದಿಂದ ಇರಬೇಕು.


ಶುದ್ಧೀಯನ್ನು ಕಾಪಾಡಿಕೊಳ್ಳುವವರು ಶುದ್ಧರು ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗಿರಬೇಕು. ನಿತ್ಯ ಕರ್ಮ ವೈಶ್ವದೇವಾದಿಗಳನ್ನು ಮಾಡದೇ ಇರುವವರು ಕಳ್ಳರು ಆದರಿಂದ ಶ್ರೀಕೃಷ್ಣ ಪರಮಾತ್ಮನು ಯಜ್ಞ ಯಾಗಾದಿಗಳನ್ನು ಮಾಡಲೇಬೇಕು ಎಂದು ಹೇಳಿದ್ದಾನೆ. ಗೋವುಗಳನ್ನು ಇತರೆ ಪಶುಗಳನ್ನು ಸಾಕುತ್ತಾರೆಯೋ ಅಂತಹವರಿಗೂ ಗೌರವ ನೀಡುತ್ತೇವೆ ಎಂದು ಇಂದ್ರದೇವರು ಹೇಳುತ್ತಾರೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top