ಬಳ್ಳಾರಿ: ನೇಕಾರ ಕಾರ್ಮಿಕರಿಗೆ ಸರ್ಕಾರ ಸಹಕಾರ ನೀಡಬೇಕೆಂದು ಕಾವೇರಿ ಹಂಡ್ಲುಮ್ಸ್ ಮಾಜೀ ಅಧ್ಯಕ್ಷರು ನೇಕಾರ ವಿರೂಪಾಕ್ಷಪ್ಪ ಕೋರಿದರು. ಬುಧವಾರ ಕೈಮಗ್ಗ ನೇಕಾರ ದಿನಾಚರಣೆ ಅಂಗವಾಗಿ ತಿಪ್ಪೇರುದ್ರ ಸ್ವಾಮಿ ಕೈಮಗ್ಗ ಸಹಕಾರ ಸಂಘದ ವತಿಯಿಂದ ಗೋನಾಳ ಸಹಕಾರ ಸಂಘದ ಕಚೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ನೇಕಾರ ಕಾರ್ಮಿಕರಿಗೆ ಪ್ರೋತ್ಸಾಹ ನೀಡಿ, ನಮ್ಮ ದೇಶದ ಖಾದಿ ಸಂಪತ್ತನ್ನು ಉಳಿಸ ಬೇಕೆಂದರು. ಜೇಡರ ದಾಸಿಮಯ್ಯ ಗುರುಗಳಿಗೆ, ಮಹಾತ್ಮಗಾಂಧಿ ಅವರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೈಮಗ್ಗ ಕಾರ್ಮಿಕರು ಫಾತಿಮಾ, ಜ್ಯೋತಿ, ಕೋಮಲ, ಲಕ್ಷ್ಮಿ, ಶ್ರೀರಂಗಮ್ಮ, ಸುನೀತ, ಸತ್ಯವತಿ, ಲಕ್ಷ್ಮೀದೇವಿ ಮುಂತಾದವರಿಗೆ ಬಟ್ಟೆಗಳು ನೀಡಿ ಸನ್ಮಾನಸಲಾಯಿತು. ಕೈಮಗ್ಗ ಸಂಘದ ವತಿಯಿಂದ ವಿರೂಪಾಕ್ಷಪ್ಪ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧಯಕ್ಷರು ಕಿರಣ್ ಕುಮಾರ್, ಉಪಾಧ್ಯಕ್ಷರು ವಿನೋದ್ ಕುಮಾರ್, ಕಾರ್ಯದರ್ಶಿ ಗುರುಸ್ವಾಮಿ, ನಿರ್ದೇಶಕರು ಸೋಮಶೇಖರ್, ತೇಜುಬಾಬು ರಂಗಭೂಮಿ ಕಲಾವಿದ ನಾಗಭೂಷಣ, ಸದಸ್ಯರು, ಕಾರ್ಮಿಕರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ