ಮಂಗಳಮುಖಿಯರ ದೈವಾಂಶವನ್ನು ಎತ್ತಿಹಿಡಿಯಲಿರುವ ಚಿತ್ರ
ಬಳ್ಳಾರಿ: ಬಳ್ಳಾರಿ ನಗರದ ಮೋಕ ರಸ್ತೆಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ ಶಿಖಂಡಿ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಪ್ರೊಡ್ಯೂಸರ್ ಪೋಲಾ ಪ್ರವೀಣ್ ದಂಪತಿಗಳು ಚಾಲನೆ ನೀಡಿದರು. ಇದೆ ಮೊದಲಬಾರಿ ಚಲನಚಿತ್ರಕ್ಕೆ ಪ್ರೊಡ್ಯೂಸರ್ ಆಗಿ ನಿರ್ವಹಿಸಿದ ಪೋಲಾ ಪ್ರವೀಣ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಸಿನಿಮಾ ಬಹಳ ಅಚ್ಚುಕಟ್ಟಾಗಿ ಮೂಡಿ ಬರಲಿದೆ, ಈ ಚಲನಚಿತ್ರದ ಸಾರಾಂಶ ಮಂಗಳ ಮುಖಿಯರ ದೈವಾಂಶ ಏನು ಎನ್ನುವುದು ಎತ್ತಿ ಹಿಡಿಯಲು ಪ್ರಯತ್ನ ಮಾಡುತಿದ್ದೇವೆ ಎಂದರು.
ಮಂಗಳಮುಖಿಯರಿಗೆ ಕೂಡ ಕಷ್ಟ ಸುಖ, ನೋವು, ನಲಿವು ನಮ್ಮ ತರಹ ಫೀಲಿಂಗ್ಸ್ ಇರುತ್ತಾವೆ, ಆದರೆ ಅವರನ್ನು ಯಾರು ಕೂಡಾ ಹತ್ತಿರ ಸೇರಿಸಿಕೊಳ್ಳುವುದಿಲ್ಲ, ಯಾಕೆ ಹಾಗೆ...? ಅವರು ಕೂಡಾ ಮನುಷ್ಯರಲ್ಲವೇ, ಅವರಿಗೆ ಕೂಡಾ ನಮ್ಮತರ ಫೀಲಿಂಗ್ಸ್ ಇರಲ್ಲವೇ, ಅವರನ್ನು ಕೆಲಸದಲ್ಲಿ ಇಟ್ಟು ಕೊಳ್ಳಲು ಯಾಕೆ ಹಿಂಜರಿಯುತ್ತಾರೆ, ಅವರನ್ನು ಕೂಡಾ ನಮ್ಮಲ್ಲಿ ಒಬ್ಬರು ಎಂದು ಕಾಣಬೇಕು ಎನ್ನುವುದು ಈ ಚಿತ್ರದ ಮುಖ್ಯಾಂಶವಾಗಿದೆ ಎಂದರು.
ಡೈರೆಕ್ಟರ್ ಗುರುಮೂರ್ತಿ ಸುನಾಮಿ ಮಾತನಾಡುತ್ತಾ ಈ ಚಿತ್ರದ ನಾಯಕ ಯುವರಾಜ್ ಮೊದಲ ಸಿನಿಮಾ ಆಗಿದೆ, ಈ ಸಿನಿಮಾದಲ್ಲಿ ಸ್ಟಾರ್ ಕಾಸ್ಟಿಂಗ್ ಇರುತ್ತದೆ ಎಂದು ತಿಳಿಸಿದರು. ಚಲನಚಿತ್ರ ನೋಡಿದರೇ ಮತ್ತೆ ಮತ್ತೆ ನೋಡಬೇಕೆನ್ನುವಂತೆ ನಿರ್ಮಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪೋಲಾ ಶ್ರೀನಿವಾಸ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ