ಕನ್ನಡ ಭಾಷೆ ಉಳಿವಿಗೆ ಯಕ್ಷಗಾನ ಬಹುಮುಖ್ಯ: ನಾ. ಕಾರಂತ ಪೆರಾಜೆ

Upayuktha
0


ಪುತ್ತೂರು:
ದೀಕ್ಷೆ ಪಡೆದು ಭಾಗವತಿಕೆ ಮಾಡಿದರೆ ಯಕ್ಷಗಾನ ಮುಂದುವರಿಯುತ್ತದೆ. ಆದರೆ ಪ್ರೇಕ್ಷಕರಿಗೆ ಯಕ್ಷಗಾನದ ಭಾವಗಳೆಲ್ಲವನ್ನೂ ಅರ್ಥ ಮಾಡಿಕೊಂಡು ಯಕ್ಷಗಾನ ನೋಡುವುದು ಹೇಗೆ ಎಂದು ತಿಳಿಸಿ ಕೊಡುವುದಕ್ಕೆ ಒಂದು ಪ್ರತ್ಯೇಕ ಕಮ್ಮಟ ನಡೆಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಯಕ್ಷಗಾನದ ಅಲೆ ಹಬ್ಬುವುದಕ್ಕೆ ಮಹಿಳಾ ಹಾಗೂ ಮಕ್ಕಳ ತಂಡ ಮುಖ್ಯ ಪಾತ್ರ ವಹಿಸಿದ್ದಾರೆ. ಯಾವುದೇ ಕಲೆಯು ನಮ್ಮ ಬದುಕಿನ ಅಂಗವಾಗಿ ಬಂದಾಗ ಅದುವೇ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತದೆ. ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನ ಬಹುದೊಡ್ಡ ಕೊಡುಗೆ ನೀಡಿದೆ. 


ಯಕ್ಷಗಾನವನ್ನು ಉಳಿಸುವುದೇ ಯಕ್ಷಗಾನಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎಂದು ಪುತ್ತೂರಿನ ಅಡಿಕೆ ಪತ್ರಿಕೆಯ ಉಪಸಂಪಾದಕರು ಹಾಗೂ ಯಕ್ಷಗಾನ ಕಲಾವಿದ ನಾ.ಕಾರಂತ ಪೆರಾಜೆ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಆಯೋಜಿಸಲಾದ ಯಕ್ಷದೀಕ್ಷೆ ಪ್ರದಾನ ಮತ್ತು ವಾರ್ಷಿಕ ಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಹಿರಿಯ ಮದ್ದಳೆ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಉದ್ಘಾಟಿಸಿದರು. 


ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಕಾಲೇಜಿನ ವಿಶೇಷಾಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಧರ್ ನಾಯ್ಕ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಯಕ್ಷ ರಂಜಿನಿ ಸಂಯೋಜಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಗೋವಿಂದರಾಜ ಶರ್ಮ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ. ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಶಾಂಭವಿ ಸ್ವಾಗತಿಸಿ, ದ್ವಿತೀಯ ವರ್ಷದ ಬಿ.ಎಸ್ಸಿ ಭಾಗ್ಯ ವಂದಿಸಿ, ತೃತೀಯ ಬಿ.ಎ ವಿದ್ಯಾರ್ಥಿನಿ ಶ್ರೇಯಾ.ಜೆ ಆಚಾರ್ಯ ನಿರೂಪಿಸಿದರು. ಸಭಾ ಕರ‍್ಯಕ್ರಮದ ನಂತರ ಕಾಲೇಜಿನ ಯಕ್ಷ ರಂಜಿನಿಯ ವಿದ್ಯಾರ್ಥಿಗಳು ಯಕ್ಷಗಾನ ತಾಳಮದ್ದಳೆ ‘ಕದಂಬ ಕೌಶಿಕೆ’ ಎನ್ನುವ ಪ್ರಸಂಗವನ್ನು ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top