ಸುರತ್ಕಲ್:ರೋರ‍್ಯಾಕ್ಟ್ ಕ್ಲಬ್‌ನ 2024-25- ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Upayuktha
0


ಸುರತ್ಕಲ್:
ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾರ್ಥಿಗಳು ಯೋಜಿತ ಕಾರ‍್ಯವನ್ನು ನಿರ್ವಹಿಸಬೇಕು. ರೋರ‍್ಯಾಕ್ಟ್ ಕ್ಲಬ್  ಅಂತರ್ ರಾಷ್ಟ್ರೀಯ  ಮಟ್ಟದಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ರೋಟರಿ ಜಿಲ್ಲೆ 3181 ರ ಸ್ವಚ್ಛ ಕುಡಿಯುವ ನೀರು ಯೋಜನೆಯ ಅಧ್ಯಕ್ಷ ಹಾಗೂ ದ.ಕ ನಿರ್ಮಿತಿ ಕೇಂದ್ರದ ನಿರ್ದೇಶಕ ರೊ.ರಾಜೇಂದ್ರ ಕಲ್ಬಾವಿ ನುಡಿದರು. 


ಅವರು ಹಿಂದು ವಿದ್ಯಾದಾಯಿನೀ ಸಂಘ(ರಿ) ದ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ರೋಟರಿ ಕ್ಲಬ್ ಸುರತ್ಕಲ್ ಪ್ರಾಯೋಜಕತ್ವದ ರೋರ‍್ಯಾಕ್ಟ್  ಕ್ಲಬ್‌ನ 2024-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೂತನ ಅಧ್ಯಕ್ಷೆಯಾಗಿ ಹಿತಾ ಉಮೇಶ್,  ಕಾರ್ಯದರ್ಶಿಯಾಗಿ ಭೂಷಣ್ ಹಾಗೂ ಪದಾಧಿಕಾರಿಗಳು ಸೇವಾ ಕರ್ತವ್ಯ ಸ್ವೀಕರಿಸಿದರು.


ನಿಕಟಪೂರ್ವ ಅಧ್ಯಕ್ಷೆ ದಿಶಾ ರೋರ‍್ಯಾಕ್ಟ್ ಕ್ಲಬ್‌ನ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗಿದೆ ಎಂದರು. ಹಿತಾ ಉಮೇಶ್ ಮಾತನಾಡಿ ಕಲಿಕೆಯೊಂದಿಗೆ ಸಾಮಾಜಿಕ ಸೇವೆಗಳನ್ನು ಗುರಿಯಾಗಿಸಿಕೊಂಡು ನಾಯಕತ್ವ ಗುರಿ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು. ಸುರತ್ಕಲ್ ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಸಂದೀಪ್ ರಾವ್  ಇಡ್ಯಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಲ ಸಾಕ್ಷರತೆ ಮೂಡಿಸುವುದರೊಂದಿಗೆ ನಾಯಕತ್ವ ತರಬೇತಿಗಳನ್ನು ನೀಡಲಾಗುವುದೆಂದರು.


ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ ವಿದ್ಯಾರ್ಥಿಗಳ ಪ್ರತಿಭಾಭಿವ್ಯಕ್ತಿಗೆ ಕಾಲೇಜು ವಿವಿಧ ವೇದಿಕೆಗಳನ್ನು ಕಲ್ಪಿಸಿದ್ದು ಇದರ ಸದುಪಯೋಗ ಪಡಿಸಿ ಕೊಳ್ಳ ಬೇಕೆಂದರು. ರೋರ‍್ಯಾಕ್ಟ್ ಕ್ಲಬ್‌ನ ಅಧ್ಯಾಪಕಸಂಯೋಜಕಿ ಡಾ.ಶಿಲ್ಪಾರಾಣಿ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ. ಹಾಗೂ ರೋರ‍್ಯಾಕ್ಟ್ ಕ್ಲಬ್‌ನ ಅಧ್ಯಾಪಕಸಂಯೋಜಕಿ ರಮಿತ ಉಪಸ್ಥಿತರಿದ್ದರು.


ಸುರತ್ಕಲ್ ರೋಟರಿ ಕ್ಲಬ್‌ನ ರೋರ‍್ಯಾಕ್ಟ್ ಕ್ಲಬ್  ವಿಭಾಗದ ಅಧ್ಯಕ್ಷ ರೊ.ರಮೇಶ್ ರಾವ್ ಎಂ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಅನಿತಾ ವರದಿ ಮಂಡಿಸಿದರು. ನೂತನ ಕಾರ‍್ಯದರ್ಶಿ ಭೂಷಣ್ ವಂದಿಸಿದರು. ತನುಶ್ರೀ ಕಾರ‍್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top