ಕುಳಾಯಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಸರಯೂ ಬಾಲ ಯಕ್ಷವೃಂದ ಕೋಡಿಕಲ್, ಮಕ್ಕಳ ಮೇಳ ಮಂಗಳೂರು ಇದರ ವತಿಯಿಂದ ಯಕ್ಷಗಾನ ಬಯಲಾಟ, ಸಭಾ ಕಾರ್ಯಕ್ರಮ ಕುಳಾಯಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸೋಮವಾರ ಜರಗಿತು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತಸರ ಕೆ. ಕೃಷ್ಣಹೆಬ್ಬಾರ್ ಅವರು ದೀಪ ಬೆಳಗಿಸಿ ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಯಕ್ಷಶಿಕ್ಷಣ ನೀಡಿ ಬೆಳೆಸುವಲ್ಲಿ ಸರಯೂ ಬಾಲ ಯಕ್ಷವೃಂದದ ರವಿ ಅಲೆವೂರಾಯ ಕೊಡುಗೆಯನ್ನು ಶ್ಲಾಘಿಸಿದರು.
ಯಕ್ಷಗಾನ ಸಂಘಟಕ, ಕಲಾವಿದೆ ಮಧುಕರ ಭಾಗವತ್ ಅವರು ಮಾತನಾಡಿ, ಯಕ್ಷಗಾನ ಕಲೆ ನಿಧಾನವಾಗಿ ನಶಿಸುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಸರಯೂ, ಪಟ್ಲ ಟ್ರಸ್ಟ್ ಸೇರಿದಂತೆ ವಿವಿಧ ಯಕ್ಷಗಾನ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಪ್ರತಿಭಾವಂತರು ಈ ಕಲೆಗೆ ಆಕರ್ಷಿತರಾಗುತ್ತಿದ್ದಾರೆ.ಈ ಕಲೆ ಬೆಳೆಯುತ್ತಲೇ ಹೋಗುತ್ತದೆ ಎಂದರು.
ಕುಳಾಯಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಸದಾಶಿವ ಎಂ. ಮಾತನಾಡಿ ಯಕ್ಷಗಾನವು ನೃತ್ಯ, ಸಂಭಾಷಣೆ, ವೇಷಭೂಷಣ, ಹಿಮ್ಮೆಳ ಹೀಗೆ ಎಲ್ಲಾ ರಸವನ್ನು ಒಳಗೊಂಡ ಗಂಡು ಕಲೆಯಾಗಿದೆ ಎಂದರು.
ಯಕ್ಷಗಾನ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ರಾಜೇಶ್ ಕುಳಾಯಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕಲಾವಿದರಾದ ಗೋಪಾಲಕೃಷ್ಣಗುತ್ತಿಗಾರ್, ವೇಣು ಮಾಂಬಾಡಿ ಉಪಸ್ಥಿತರಿದ್ದರು.
ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ವಾಸುದೇವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸರಯೂ ಬಾಲ ಯಕ್ಷವೃಂದದ ರವಿ ಅಲೆವೂರಾಯ ಅವರು ಸ್ವಾಗತಿಸಿದರು. ಬಳಿಕ ಭೂಮಿಪುತ್ರ ಭೌಮಾಸುರ ಯಕ್ಷಗಾನ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ