ಕುತ್ತಾರ್: ಈ ದೇಶದ ಸಂವಿಧಾನಕ್ಕೆ ಈಗ 75ರ ಸಂಭ್ರಮ. ನಿಯಮಗಳು ಕಾನೂನು ರೀತ್ಯಾ ಜಾರಿಯಾಗಿ ದೇಶ ಸನ್ನಡತೆಯಲ್ಲಿ ಮುನ್ನಡೆಯುವಂತೆ ನಡೆಯುತ್ತಿದೆ. ಆದರೆ ಯಕ್ಷಗಾನವೂ ಅಲಿಖಿತ ಸಂವಿಧಾನವನ್ನು ಒಗ್ಗೂಡಿಸಿಕೊಂಡು ಸಂಸ್ಕೃತಿ-ಸಂಸ್ಕಾರಗಳನ್ನು ಪ್ರಚುರ ಪಡಿಸುತ್ತಾ ಧರ್ಮ ಜಾಗೃತಿ ಮಾಡಿಸುತ್ತಾ ಬರುತ್ತಿದೆ ಎಂದು ಸಂವಿಧಾನ ತಜ್ಞ, ಮಂಗಳ ಸೇವಾ ಟ್ರಸ್ಟ್ ನ ಸಂಚಾಲಕ ಡಾ| ಪಿ. ಅನಂತಕೃಷ್ಣ ಭಟ್ ಹೇಳಿದರು.
ಅವರು ಕುತ್ತಾರಿನ ಬಾಲಸಂಸ್ಕಾರ ಕೇಂದ್ರದಲ್ಲಿ ಉಮೇಶ ಕರ್ಕೇರ ಬಳಗದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗುರುದಕ್ಷಿಣೆ ಎಂಬ ಪ್ರಸಂಗದ ಸಭಾ ಕಾರ್ಯಕ್ರಮದಲ್ಲಿ ಸಂವಿಧಾನ- ಯಕ್ಷಗಾನದ ಬಗ್ಗೆ ಪ್ರವಚನ ನೀಡಿದರು.
''ಇದು ಈ ದೇಶದ ಹೆಗ್ಗಳಿಕೆಯೂ ಹೌದು. ಇದನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯುವಂತೆ ಮೂಡಿಸುವುದು ನಮ್ಮ ಕರ್ತವ್ಯ ಇದಕ್ಕೆ ಸರಕಾರ, ಸಂಘ ಸಂಸ್ಥೆಗಳು ಸಹಕಾರಿಯಾಗಿ ನಿಂತರೆ ಅದು ಇನ್ನೂ ಹೊಳಪಾಗಿ ಹೊಳೆಯತ್ತದೆ" ಎಂದು ನುಡಿದರು.
ಕು| ತೃಷಾ ಪ್ರಾರ್ಥನೆ ನಡೆಸಿಕೊಟ್ಟರು. ಅತಿಥಿಗಳಾಗಿ ಸೇವಾ ಟ್ರಸ್ಟ್ ನ ಬಿ.ಆರ್. ಪಂಡಿತ್, ಯಕ್ಷಕಲಾವಿದ ಕುತ್ತಾರುಗುತ್ತು 'ಪ್ರಭಾಕರ ಶೆಟ್ಟಿ, ಪ್ರಬಂಧಕಿ ಸರೂ, ಮಮತಾ, ಶಿಲ್ಪಾ ಅತಿಥಿಗಳಾಗಿದ್ದರು. ವಿಜಯಲಕ್ಮೀ ಧನ್ಯವಾದ ಅರ್ಪಿಸಿದರು. ಬಳಿಕ ಲಕ್ಮೀನಾರಾಯಣ ಹೊಳ್ಳರ ಹಿಮ್ಮೇಳದೊಂದಿಗೆ ಗುರುದಕ್ಷಿಣೆ ಎಂಬ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ