"ಹಣ ಎಂದರೆ ಹೆಣ ಕೂಡ ಬಾಯಿ ತೆರೆಯುತ್ತದೆ" ಎಂಬ ಮಾತು ಹಣದ ಮಹತ್ವವನ್ನು ಎತ್ತಿ ತೋರಿಸುತ್ತದೆ. ವಿಟಮಿನ್ A,B,C,D ಹೇಗೆ ಮುಖ್ಯವೋ. ಹಾಗೆ ವಿಟಮಿನ್ M ಎಂಬುದು ಹಣದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
'ಹಣವೇ ನಿನ್ನ ಗುಣವೆಂತು ವರ್ಣಿಸಲಿ' ಎಂದು ವಾದಿರಾಜರು ಹಣದ ಮಹಿಮೆಯನ್ನು ವರ್ಣಿಸಿದ್ದಾರೆ. ಚತುರ್ವಿಧ ಪುರುಷಾರ್ಥಗಳಾದ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಅರ್ಥವೂ ಕೂಡ ಒಂದು.
ಹಣವು ನಮ್ಮ ಜೀವನಕ್ಕೆ ಅವಶ್ಯಕವಾಗಿದ್ದು, ಆದರೆ ಹಣ ಗಳಿಸುವುದೇ ನಮ್ಮ ಜೀವನದ ಮುಖ್ಯ ಗುರಿಯಾಗಬಾರದು. ಹಣವು ನಮ್ಮ ಜೀವನದ ಸಾಧನವಾಗ ಬೇಕೆ ಹೊರತು ಹಣವು ಸಾಧನವಾಗಬಾರದು.
ನಮ್ಮ ಜೀವನಕ್ಕೆ ಹಣವೇ ಮುಖ್ಯ ಆಧಾರವಾಗಿದೆ ನಿಜ. ಆದರೆ ಅದು ಸರಿಯಾದ ಮಾರ್ಗದಿಂದ ಬರಬೇಕೆ ಹೊರತು ಅಡ್ಡ ಮಾರ್ಗದಿಂದ ಹಣ ಗಳಿಸುವುದೇ ನಮ್ಮ ಜೀವನದ ಮುಖ್ಯ ಗುರಿಯಾಗ ಬಾರದು.
ನಮ್ಮ ಪ್ರತಿಭೆಯಿಂದ ಹಣ ಗಳಿಸಿ ಒಳ್ಳೆಯ ರೀತಿಯಲ್ಲಿ ವಿನಿಯೋಗ ಮಾಡಬೇಕೆ ಹೊರತು ದುಡ್ಡಿನ ದರ್ಪದಿಂದ ಸಮಾಜಕ್ಕೆ ಕಂಟಕವಾಗಬಾರದು.
ಪ್ರಾಮಾಣಿಕ ರೀತಿಯಿಂದ ಹಣ ಗಳಿಸಿ ಸಮಾಜಕ್ಕೆ ವಿನಿಯೋಗ ಮಾಡಿದ ಟಾಟಾ, ಬಿರ್ಲಾ, ನಾರಾಯಣಮೂರ್ತಿ, ಅಜೀಂ ಪ್ರೇಮ್ ಜಿ ಮುಂತಾದವರು ನಮಗೆ ಆದರ್ಶವಾಗಿದ್ದಾರೆ. ಈ ದಿಕ್ಕಿನಲ್ಲಿ ಸಾಗೋಣ.
-ಗಾಯತ್ರಿ ಸುಂಕದ, ಬಾಗಲಕೋಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ