ವೇಟ್‌ಲಿಫ್ಟಿಂಗ್ ಚಾಂಪಿಯನ್ಶಿಪ್: ಸತತ ಮೂರನೇ ವರ್ಷ ಆಳ್ವಾಸ್ ಸಮಗ್ರ ಚಾಂಪಿಯನ್ಸ್

Upayuktha
0


ಮೂಡುಬಿದಿರೆ:
ಕರ್ನಾಟಕ ರಾಜ್ಯ ವೇಟ್ ಲಿಪ್ಪ್ಸ್ ಸಂಸ್ಥೆ (ರಿ.) ಹಾಗೂ ಮೈಸೂರು ಜಿಲ್ಲಾ ವೇಟ್ ಲಿಫ್ರ‍್ಸ ಸಂಸ್ಥೆ (ರಿ.) ಇವರ ಜಂಟಿ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ- ಯೂತ್, ಜೂನಿಯರ್, ಸೀನಿಯರ್  ಸೇರಿದಂತೆ ಇರುವ ಒಟ್ಟು ಆರು ವಿಭಾಗಳಲ್ಲೂ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.


ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಒಟ್ಟು 9 ಚಿನ್ನ, 10 ಬೆಳ್ಳಿ, 6 ಕಂಚಿನೊಂದಿಗೆ 25 ಪದಕ ಪಡೆದರೆ, ಮಹಿಳೆಯರ ವಿಭಾಗದಲ್ಲಿ 9 ಚಿನ್ನ 14 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಒಟ್ಟು 28 ಪದಕ ಪಡದು, ಎರಡು ವಿಭಾಗದಲ್ಲಿ ಭರ್ಜರಿ 53 ಪದಕ ಪಡೆದು ಪಾರಮ್ಯ ಮೆರೆದರು. ಪುರುಷರ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು -2 ಚಿನ್ನ, 1 ಬೆಳ್ಳಿ, 3 ಕಂಚು, ಜೂನಿಯರ್ ವಿಭಾಗದಲ್ಲಿ- 3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್ ವಿಭಾಗದಲ್ಲಿ -4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕಕ್ಕೆ ಪಾತ್ರವಾಯಿತು.


ಮಹಿಳೆಯರ ಯೂತ್ ವಿಭಾಗದಲ್ಲಿ- 2 ಚಿನ್ನ, 5 ಬೆಳ್ಳಿ, 2 ಕಂಚು, ಜೂನಿಯರ್ ವಿಭಾಗದಲ್ಲಿ –3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್  ವಿಭಾಗದಲ್ಲಿ- 4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕದೊಂದಿಗೆ ಎಲ್ಲಾ ಆರು ವಿಭಾಗದಲ್ಲೂ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಹಿಳಾ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಒಟ್ಟು 247 ಅಂಕ ಪಡೆದರೆ, ಜೂನಿಯರ್ ವಿಭಾಗದಲ್ಲಿ -246 ಅಂಕ ಸೀನಿಯರ್  ವಿಭಾಗದಲ್ಲಿ 232 ಅಂಕ ಪಡೆಯಿತು. ಪುರುಷರ ಯೂತ್ ವಿಭಾಗದಲ್ಲಿ- 149 ಅಂಕ, ಜೂನಿಯರ್ ವಿಭಾಗದಲ್ಲಿ-174 ಅಂಕ, ಸೀನಿಯರ್ ವಿಭಾಗದಲ್ಲಿ -260 ಅಂಕ ಪಡೆಯಿತು. ಪುರುಷರ ಹಾಗೂ ಮಹಿಳೆಯರ ಆರು ವಿಭಾಗಗಳಲ್ಲಿ ಕ್ರಮವಾಗಿ 583 ಹಾಗೂ 725 ಅಂಕಗಳೊಂದಿಗೆ ಒಟ್ಟು 1308 ಅಂಕ ಹಾಗೂ 53 ಪದಕಗಳನ್ನು ಪಡೆದು ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್  ಚಾಂಪಿಯನ್ಷಿಪ್ ಪಟ್ಟವನ್ನು ನೂತನ ದಾಖಲೆಯೊಂದಿಗೆ ಆಳ್ವಾಸ್ ಸತತ ಮೂರನೇ ವರ್ಷ ತನ್ನದಾಗಿಸಿಕೊಂಡಿತು.


ಸ್ಪರ್ಧೆಯಲ್ಲಿ ಭಾಗವಹಿಸಿದ 58 ವಿದ್ಯಾರ್ಥಿಗಳು ಆಳ್ವಾಸ್‌ನ ಕ್ರೀಡಾ ದತ್ತು ಯೋಜನೆಯಲ್ಲಿ ಉಚಿತ ವಸತಿ ಹಾಗೂ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಅಳ್ವ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top