ಬಳ್ಳಾರಿ: ಕೈಗಾರಿಕೆ ವಿಸ್ತರಣೆ ಬೇಡ- ಪ.ಜಾತಿ ಸಮಿತಿಯಿಂದ ಮನವಿ

Upayuktha
0


ಬಳ್ಳಾರಿ: 
ತಾಲೂಕಿನ ಸಿಡಿಗಿನ ಮೊಳ ಗ್ರಾಮದಲ್ಲಿ ಜಾನಕಿ ಕಾರ್ಪೊರೇಷನ್  ಲಿಮಿಟೆಡ್ ಹಾಗೂ ಬಸಯ್ಯ ಸ್ಟೀಲ್ ಲಿಮಿಟೆಡ್ ಮತ್ತು ಎ ಒನ್ ಗೋಲ್ಡ್ ಲಿಮಿಟೆಡ್ ಉದ್ದಿಮೆಯ ಕೈಗಾರಿಕೆ ಈಗಾಗಲೇ ನಡೆಯುತ್ತಿದ್ದು, ಇದರಲ್ಲಿ ಐರನ್, ಪವರ್ ಪ್ಲಾಂಟ್ ಉತ್ಪತ್ತಿಯಾಗುತ್ತಿದ್ದು ಇದರಿಂದ ಬರುವ ಹೊಗೆಯಿಂದ ಗ್ರಾಮದ ಜನರಿಗೆ ವಾಸ ಮಾಡುವುದಕ್ಕೆ ಬಹಳ ತೊಂದರೆಯಾಗುತ್ತಿದೆ. ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮತ್ತು ಈ ಕೈಗಾರಿಕೆಯಲ್ಲಿ ಐರನ್ ಪವರ್ ಪ್ಲಾಂಟ್ ಇವುಗಳನ್ನು ಪುನಃ ಹೆಚ್ಚಿನ ಪ್ಲಾಂಟ್ ಗಳನ್ನು ಸ್ಥಾಪಿಸಲು ಕೈಗಾರಿಕೆಯ ಮಾಲೀಕರು ಹೊರಟಿದ್ದಾರೆ. 


ಈ ಕೈಗಾರಿಕೆಯು ವಿಸ್ತರಣೆಯಾದರೆ ಅಲ್ಲಿ ವಾಸ ಮಾಡುವ ಜನರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ವ್ಯವಸಾಯ ಮಾಡುವುದಕ್ಕೆ ತುಂಬಾ ತೊಂದರೆಯಾಗುತ್ತದೆ. ರೈತರು ಬೆಳೆದಂತಹ ಬೆಳೆಗಳು ಕೂಡ ಸಂಪೂರ್ಣವಾಗಿ ನಾಶವಾಗುತ್ತದೆ, ಈ ಕೈಗಾರಿಕೆಯಿಂದ ಬರುವ ಹೊಗೆಯಿಂದ ಜನರಿಗೆ ಉಸಿರಾಟದ ತೊಂದರೆ, ಶ್ವಾಸಕೋಶಗಳು ಹಾಳಾಗಿ ಹೋಗುತ್ತವೆ, ಮತ್ತು ಗಂಭೀರವಾದ ಕ್ಯಾನ್ಸರ್ ಕಾಯಿಲೆಗಳು ಬರುತ್ತವೆ ಅಲ್ಲದೆ ಚಿಕ್ಕ ಮಕ್ಕಳಿಗೆ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ ಸಂಪೂರ್ಣವಾಗಿ ಪರಿಸರವು ಕೂಡ ನಾಶವಾಗುತ್ತದೆ.


ಆದ್ದರಿಂದ ಈ ಕೈಗಾರಿಕೆಯನ್ನು ವಿಸ್ತೀರ್ಣ ಮಾಡಬಾರದೆಂದು ಮತ್ತು ಈ ಕೈಗಾರಿಕೆಯಲ್ಲಿ ಹೊಸ ಪ್ಲಾಂಟ್ ಗಳನ್ನಾಗಲಿ ಹಾಕುವುದಕ್ಕೆ ಅನುಮತಿ ಕೊಡಬಾರದೆಂದು ಬಳ್ಳಾರಿ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ ಚೆನ್ನ ದಾಸರ/ ಹೊಲೆಯದಾಸರ/ ಮಾಲದಾಸರ/ ಜನ ಸೇವಾ ಸಮಿತಿ ವತಿಯಿಂದ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಡಿ ರಾಮಯ್ಯ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಡಿ ರಂಗಯ್ಯ, ರೈತ ಮುಖಂಡರಾದ ಬಸವನಗೌಡ ಮೀನಳ್ಳಿ, ಎಪಿ ಗಾದಿಲಿಂಗನಗೌಡ ಕೆ.ವೀರಪುರ, ರಾಜಶೇಖರ, ಸಿಡಿಗಿನಮೊಳ ರಾಮಯ್ಯ, ಮಹಾಬಲೇಶಗೌಡ ಬ್ಯಾಲಚಿಂತೆ, ಸಿದ್ದಪ್ಪ ಕೆ, ಲಕ್ಷ್ಮಣಗೌಡ ಕಾರೇಕಲ್ಲು ಸೇರಿದಂತೆ ಮುಂತಾದವರು ಹಾಜರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top