ವನಿತಾ ಕಥನ-10: ಪಂಚ ಕನ್ಯೆಯರಲ್ಲಿ ಒಬ್ಬಳು "ಮಂಡೋದರಿ"

Upayuktha
0


ರಾಮಾಯಣದಲ್ಲಿ ರಾವಣ ಪತ್ನಿ ಮಂಡೋದರಿಯದ್ದು ವಿಶೇಷ ಸ್ಥಾನ. ಮಹಾ ಸುಂದರಿಯಾಗಿದ್ದು, ಪತಿವ್ರತೆಯಾಗಿದ್ದು, ಪತಿಗೆ ಅನುಕೂಲೆಯಾಗಿದ್ದು ಪತಿಯ ಅಹಂಕಾರದಿಂದ ಒಂಟಿಯಾದವಳು ಮಂಡೋದರಿ. 


ರಾಕ್ಷಸ ಶಿಲ್ಪಿ ಮಯಾಸುರ ಮತ್ತು ಅವನ ಪತ್ನಿ  ಅಪ್ಸರೆ ಹೇಮಾ ಇವರ ಮಗಳು ಮಂಡೋದರೀ, ಮಾಯಾವಿ, ದುಂಧುಬಿ ಮತ್ತು ವ್ಯೋಮಾಸುರರು  ಮಂಡೋದರಿ. ರಾಕ್ಷಸ ಕುಲದಲ್ಲಿ ಜನಿಸಿದರೂ ಮಂಡೋದರಿ ಅಪ್ರತಿಮ ಸುಂದರಿ ಹಾಗೂ ಪರಮ ಸಾತ್ವಿಕಗಳು. ಮಂಡೋದರಿ ಕೇವಲ ಸೌಂದರ್ಯವತಿ ಅಲ್ಲದೇ  ಸಂಸಾರ ನಿರ್ವಹಣಾ ಶಕ್ತಿ, ಪತಿ ಭಕ್ತಿ ಮತ್ತು ಶಾಂತಿ ಪ್ರಿಯತೆಯ ಪ್ರತೀಕವಾಗಿ ಕಾಣುತ್ತಾಳೇ. ತಂದೆಯೊಂದಿಗೆ ವರನ ಹುಡುಕಾಟದಲ್ಲಿ ಹೊರಟ ಮಂಡೋದರಿಗೆ ರಾವಣನು ಮೆಚ್ಚುಗೆಯಾಗುತ್ತಾನೆ. ಮಗಳ ಇಚ್ಛೆಯಂತೆ ಮಯಾಸುರನು ರಾಕ್ಷಸ ರಾಜನಾದ ಲಂಕೇಶ ರಾವಣನಿಗೆ ಮಗಳನ್ನು ಧಾರೆಯೆರೆದುಕೊಡುತ್ತಾನೆ. ಗಂಡನನ್ನು ಪ್ರೀತಿಸುತ್ತಿದ್ದ ಹಾಗೂ ಅವನೇ ದೈವವೆಂದು ಭಕ್ತಿ ಮಾಡುತ್ತಿದ್ದ ಮಂಡೋದರಿ ಅವಲ ಸ್ತ್ರೀಲೋಲುಪತೆಯನ್ನು  ಸೌಮ್ಯವಾದ ವಿರೋಧ ಮಾಡಿ ಅವನ ನಡೆಯನ್ನು ಸಹಿಸುತ್ತಾ ಬರುತ್ತಾಳೆ. ಆದರೆ ಸೀತಾಪರಣದ ಸಮಯದಲ್ಲಿ ಮಂಡೋದರಿ ರಾಮನ ಪರಾಕ್ರಮದ ಬಗೆಗೆ ಕೇಳಿದ್ದ ಕಾರಣ ಪತಿಗೆ ಸೀತೆಯನ್ನು ಬಿಟ್ಟುಬಿಡು ಎಂದು ಉಪದೇಶ ಮಾಡುತ್ತಾಳೆ. 


ಸೀತೆಯನ್ನು ಒಲಿಸಿಕೊಳ್ಳಲು ರಾವಣ ಸಾಮಭೇದ ದಂಡ ಮೊದಲಾದ ಉಪಾಯಗಳನ್ನು ಅನುಸರಿಸುವಾಗ ಮಂಡೋದರಿಯು ಪತಿಗೆ ನಿನ್ನ ಮಾಯಾ ವಿದ್ಯೆಯಿಂದ ರಾಮನ ವೇಷದಲ್ಲಿ ಸೀತೆಯ ಬಳಿ ಹೋಗು ಎಂದು ಸಲಹೆಯನ್ನು ನೀಡಿತ್ತಾಳೆ ಆಗ ರಾವಣನು ನಾನು ಅದನ್ನು ಪ್ರಯತ್ನ ಮಾಡಿದ್ದೇನೆ, ರಾಮನ ವೇಷ ಧರಿಸಿದಾಗ ನನಗೆ ನಿನ್ನ ಹೊರತು ಬೇರೆ ಯಾರ ಬಳಿಯು ಹೋಗುವ ಮನಸ್ಸು ಆಗುವುದಿಲ್ಲ ಎಂದು ಮಂಡೋದರಿಗೆ ಹೇಳುತ್ತಾನೆ.

ಜಗತ್ತಿನಲ್ಲಿ ಅತೀ ಪರಾಕ್ರಮಿ ಎನಿಸಿಕೊಂಡ ರಾವನಂತಹ ಪತಿ ಅಕ್ಷಯಕುಮಾರ, ಅತಿಕಾಯ ಮತ್ತು ಮೇಘನಾದನಂತಹ ಪರಾಕ್ರಮಿ ಮಕ್ಕಳು ಇದ್ದರೂ ಪತಿಯ ಸ್ತ್ರೀ ಲೋಲುಪತೆಗೆ ತನ್ನ ಸಮಸ್ತ ಕುಟುಂಬವನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಮಂಡೋದರಿಗೆ ಬರುತ್ತದೆ. ಪತಿಯ ಭಕ್ತಿಯನ್ನು ಮಾಡಿ ಅವಳ ಪ್ರೇಮವೂ ಇದ್ದರೂ ರಾವಣನು ಅಧರ್ಮ ಹಾಗೂ ತಪ್ಪುಗಳನ್ನು ತಿದ್ದಿ ಹೇಳುತ್ತಾ ನಡೆದ ಅನುರೂಪಳಾದ ಪತ್ನಿ ಮಂಡೋದರಿ. ವಾಲ್ಮೀಕಿ ಮಹರ್ಷಿಗಳು ಬಹಳ ಸೊಗಸಾಗಿ ಮಂಡೋದರಿಯ ಚಾರಿತ್ರ್ಯವನ್ನು ಚಿತ್ರಿಸಿದ್ದಾರೆ.


ರಾಮಾಯಣದಲ್ಲಿ ಅನಸೂಯಾದೇವಿ ಹೇಗೆ ಸೀತೆಗೆ ಪತಿಯೊಂದಿಗೆ ಹೇಗಿರಬೇಕು ಎಂದು ಉಪದೇಶಿಸುತ್ತಾಳೆಯೋ ಅದರಂತೆಯೇ ಮಂಡೋದರಿ ರಾಕ್ಷಸ ಸ್ತ್ರೀಯರಿಗೆ ಪತ್ನಿ ಧರ್ಮವನ್ನು ಉಪದೇಶ ಮಾಡುತ್ತಾಳೆ.


ರಾವಣನು ಕೊನೆಯ ಯುದ್ಧಕ್ಕೆ ಹೋಗುವಾಗ ಮಂಡೋದರಿ ನಿನ್ನೊಬ್ಬನ ಪ್ರತಿಷ್ಠೆಗೆ ಇಡೀ ರಾಕ್ಷಸ ಕುಲ ನಾಶಕ್ಕೆ ಕಾರಣನಾಗಬೇಡ ಎಂಬ ಉಪದೇಶವನ್ನು ಕೂಡ ಮಾಡುತ್ತಾಳೆ. ಅವಳಿಗೆ ರಾಣಿಯಾಗಿ ಕುಲನಾಶವಾಗಬಾರದೆಂಬ ಯೋಚನೆ ಕೂಡ ಇದ್ದ ಕಾರಣ ಅವಳ ಗುಣ ಮತ್ತು ಸಾಮರ್ಥ್ಯವನ್ನು ಕಾಣಬಹುದಾಗಿದೆ.


ರಾವಣನ ವಧೆಯ ನಂತರ ರಾಮನನ್ನು ನೋಡಲು ಮಂಡೋದರಿ ಬರುತ್ತಾಳೇ. ತ್ರಿಲೋಕ ವಿಜೇತನದ ರಾವಣನನ್ನು ಸಂಹಾರ ಮಾಡಿದ ರಾಮನಲ್ಲಿ ಏನು ವಿಶೇಷ ಎಂದು ನೋಡಲು ಬಂದ ಮಂಡೋದರಿಯ ನೆರಳು ರಾಮನ ಹತ್ತಿರ ಬರುತ್ತಿದ್ದಂತೆಯೇ ರಾಮನು ಎದ್ದು ಅವಳ ನೆರಳಿಗೆ ವಂದಿಸಿ ನಿಲ್ಲುತ್ತಾನೆ, ಆಗ ಮಂಡೋದರಿ ಹೇಳುತ್ತಾಳೆ. ನನ್ನ ಪತಿಯ ಶೌರ್ಯ ಪರಾಕ್ರಮ ಎಲ್ಲವೂ ಇದ್ದರೂ ಪರ ಸ್ತ್ರೀ ಲೋಲುಪತೆ ಅವನನ್ನು ಈ ಪರಿಸ್ಥಿತಿಗೆ ತಂದಿತು, ನೀನು ಪೂಜನೀಯ ಎಂದು ನಮಿಸುತ್ತಾಳೆ.


ಮಂಡೋದರಿಯು ಎಷ್ಟು ಪೂಜ್ಯಳು ಎಂಬುದಕ್ಕೆ ಪಂಚಕನ್ಯೆಯರಲ್ಲಿ ಅವಳನ್ನು ಸ್ಮರಿಸಲಾಗುತ್ತದೆ. ಬ್ರಹ್ಮ ಪುರಾಣದಲ್ಲಿ ಯಾವ ಪಂಚ ಕನ್ಯೆಯರ ಸ್ಮರಣೆಯಿಂದ ಮಹಾ ಪಾತಕ ನಾಶವಾಗುವವು ಎಂದು ಹೇಳುತ್ತಾರೆಯೋ ಆ ಐದು ಮಹಾನ್ ಸ್ತ್ರೀಯರಲ್ಲಿ ಮಂಡೋದರಿ ಇರುವುದು ಅವಳ ಶ್ರೇಷ್ಠತೆ ಪಾವಿತ್ರ್ಯತೆಗೆ ಸಾಕ್ಷಿಯಾಗಿದೆ. ರಾವಣನ ಅನೇಕ ದುಶ್ಕೃತ್ಯಗಳು ಮಂಡೋದರಿಯ ಪಾತಿವ್ರತ್ಯದ ಬಲದಿಂದ ನಾಶವಾಗಿದ್ದರೂ ಸೀತೆಯಂತಹ ಸಾಧ್ವಿಯ ಹರಣ ಅವನನ್ನು ಸಾವಿನೆಡೆಗೆ ಕರೆದೋಯುತ್ತದೆ. 


ಮಂಡೋದರಿಯ ಪಾತ್ರದಿಂದ ನಾವು ಎಷ್ಟೇ ಸಾತ್ವಿಕರು ಬುದ್ಧಿವಂತರು ಆಗಿದ್ದರೂ ನಮ್ಮ ಸಂಗಾತಿ ಹಾಗೂ ಮಕ್ಕಳನ್ನು ತಿದ್ದದೇ ಹೋದಾಗ ದೊಡ್ಡ ಹಾನಿಯಾಗುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. 


- ಮಾಧುರಿ ದೇಶಪಾಂಡೆ, ಬೆಂಗಳೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top