ಉಜಿರೆ:ಬೋಧನಾ ತಂತ್ರಜ್ಞಾನ ವಿಸ್ತರಣೆಗೆ ಎಸ್.ಡಿ.ಎಂ ಆದ್ಯತೆ: ಡಾ.ವಿಶ್ವನಾಥ್ ಪಿ

Upayuktha
0


ಉಜಿರೆ:
ಜ್ಞಾನಾರ್ಜನೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಸಮಗ್ರವಾಗಿ ತೊಡಗಿಸಿಕೊಳ್ಳುವ ಉದ್ದೇಶದೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬೋಧನಾ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ಹೇಳಿದರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಮತ್ತು ಮಾನವಿಕ ನಿಕಾಯಗಳ ವಿವಿಧ ವಿಭಾಗಗಳ ಬೋಧಕರಿಗಾಗಿ ಇಂರ‍್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್ನ ತಾಂತ್ರಿಕ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲು ಲೈಬ್ರರಿ ಆ್ಯಂಡ್ ಲರ್ನಿಂಗ್ ರಿಸೋರ್ಸಸ್ ಸಮಿತಿಯು ಇಂದು ಆಯೋಜಿಸಿದ ಎರಡನೇ ಹಂತದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರ ಮಹತ್ವಾಕಾಂಕ್ಷಿ ಸದಾಶಯದಂತೆ ಇಂಟರ‍್ಯಾಕ್ಟಿವ್ ಪ್ಯಾನಲ್ ಡಿಸ್‌ಪ್ಲೇ ಬೋರ್ಡ್‌  ಅಳವಡಿಸಿ ಯಶಸ್ವಿಯಾಗಿ ದೈನಂದಿನ ಬೋಧನೆಯಲ್ಲಿ ಪ್ರಯೋಗಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ದೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಬೋಧಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.


ಇಂಟರ‍್ಯಾಕ್ಟಿವ್ ಪ್ಯಾನಲ್ ಡಿಸ್‌ಪ್ಲೇ ಬೋರ್ಡ್ ಅಳವಡಿಕೆಯ ನಂತರ ಸ್ನಾತಕೋತ್ತರ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ತರಗತಿ ಬೋಧನೆಗಿಂತ ಭಿನ್ನ ಅನುಭವ ನೀಡುವ ಈ ತಂತ್ರಜ್ಞಾನವು ವಿದ್ಯಾರ್ಥಿಗಳನ್ನು ಸಮಗ್ರವಾಗಿ ತೊಡಗಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿಯೂ ಇದು ಪರಿಣಾಮಕಾರಿ ಎನ್ನಿಸಿದೆ ಎಂದು ತಿಳಿಸಿದರು.


ತರಗತಿ ಬೋಧನೆಯ ವೇಳೆ ನಿರ್ದಿಷ್ಟ ವಿಷಯದ ಕುರಿತು ಭಾಷೆ, ಅಕ್ಷರ, ದೃಶ್ಯ ಮತ್ತು ಶ್ರವ್ಯ ಸ್ವರೂಪದಲ್ಲಿ ಇಂಟರ್ ಆ್ಯಕ್ಟಿವ್ ಪ್ಯಾನಲ್ ಡಿಸ್‌ಪ್ಲೇ ಬೋರ್ಡ್ ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮನವರಿಕೆ ಮಾಡಿಕೊಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬೋಧಕರ ನಿರೀಕ್ಷೆಗಳಿಗೆ ತಕ್ಕಂತೆ ತರಬೇತಿ ನೀಡಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಮುಂಬೈನ ಸೆನ್ಸಸ್  ಇಲೆಕ್ಟ್ರಾನಿಕ್ಸ್‌ನ ಪ್ರಾಡಕ್ಟ್ ಟ್ರೇನರ್ ಕಾರ್ತಿಕ್ ಅವರು ನೂತನ ತಾಂತ್ರಿಕ ಬೋರ್ಡ್ ಅನ್ನು ಆಯಾ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಬೋಧನೆಯ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಪ್ರಾಯೋಗಿಕ ಮಾಹಿತಿ ನೀಡಿದರು. ವಿಜ್ಞಾನ ಮತ್ತು ಮಾನವಿಕ ಜ್ಞಾನಶಿಸ್ತುಗಳ ಬೋಧಕರು ಬೋರ್ಡ್ ಬಳಕೆಯ ಸಂದರ್ಭದಲ್ಲಿ ಎದುರಿಸುವ ತಾಂತ್ರಿಕ ಬಿಕ್ಕಟ್ಟು ಗಳನ್ನು ಪರಿಹರಿಸಿಕೊಳ್ಳುವ ವಿಧಾನಗಳನ್ನು ಪರಿಚಯಿಸಿದರು. ಲೈಬ್ರರಿ ಆ್ಯಂಡ್ ಲರ್ನಿಂಗ್ ರಿಸೋರ್ಸಸ್ ಸಮಿತಿಯ ಸಂಯೋಜಕರಾದ ಡಾ.ರಾಘವೇಂದ್ರ ಬೋಧಕರೊಂದಿಗಿನ ಸಂವಾದವನ್ನು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


 


 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top