ಬೆಳ್ತಂಗಡಿ: ಆ.31ರಂದು 'ಮಧುಮಕ್ಷಿಕಾ'ದಿಂದ ನೂತನ ಉತ್ಪನ್ನಗಳ ಬಿಡುಗಡೆ

Upayuktha
0


ಬೆಳ್ತಂಗಡಿ: ಕೃಷಿ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ನೂತನ ಮಾರಾಟ ಸಂಸ್ಥೆ 'ಮಧುಮಕ್ಷಿಕಾ'ದಿಂದ ನೂತನ ಉತ್ಪನ್ನಗಳನ್ನು ಆಗಸ್ಟ್ 31ರಂದು ಬೆಳ್ತಂಗಡಿಯ ಸುವರ್ಣ ಆರ್ಕೇಡ್‌ನಲ್ಲಿ ಬಿಡುಗಡೆ ಮಾಡಲಿದೆ.



ಮಧುಮಕ್ಷಿಕಾದಿಂದ ಹಲಸಿನ ಬೇರೆ ಬೇರೆ ವಿಧದ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ಹಲಸಿನ ಮೌಲ್ಯವರ್ಧಿತ ಉತ್ಪನ್ನ JAFI (Jack fruit coffee) ಯನ್ನು ಶನಿವಾರ ಬಿಡುಗಡೆ ಮಾಡಲಿದೆ.



ಉತ್ಪನ್ನದ ಬಿಡುಗಡೆಯನ್ನು Bhat'nBhat ಖ್ಯಾತಿಯ ಯೂಟ್ಯೂಬರ್ ಸುದರ್ಶನ ಭಟ್ ಬೆದ್ರಡಿಯವವರು ನೆರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ ವೆಂಕಟಕೃಷ್ಣ ಶರ್ಮ ಶುಭಾಶಂಸನೆಗೈಯಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷರಾಗಿ ಉದ್ಯಮಿ ಸಂಪತ್ ಸುವರ್ಣ, ಅತಿಥಿಗಳಾಗಿ ಹೆಸರಾಂತ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಕೃಷಿ ಅಧಿಕಾರಿ ಗಣೇಶ ಅಡಿಗ, ಉತ್ಪನ್ನದ ರೂಪದರ್ಶಿ ಅವನೀ ಭಟ್ ಭಾಗವಹಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಕೆ. ಶ್ಯಾಮ ಸುಂದರ ಭಟ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top