ಆ.18: ತುಳು ಕೂಟದ 'ಕೂಟ ಚಾವಡಿ' ಉದ್ಘಾಟನೆ

Upayuktha
0


ಮಂಗಳೂರು: ಜನತಾ ಬಜಾರ್ ನ ಕಟ್ಟಡದ ಹಿಂಬದಿಯಲ್ಲಿ ನೂತನವಾಗಿ ನಿರ್ಮಿಸಿದ ಕೂಟ ಚಾವಡಿ ಉದ್ಘಾಟನೆ ಆಗಸ್ಟ್ 18 ರಂದು ಭಾನುವಾರ ಬೆಳಿಗ್ಗೆ 9-00ಕ್ಕೆ ನಡೆಯಲಿದೆ. ಜನತಾ ಬಜಾರ್ ನ ಅಧ್ಯಕ್ಷರು ಪುರುಷೋತ್ತಮ್ ಭಟ್ ಮತ್ತು ಶ್ರೀಮತಿ ನಳಿನಿ (M D ಜನತಾ ಬಜಾರ್) ಇವರು ಉದ್ಘಾಟಿಸಲಿದ್ದಾರೆ.


ತುಳು ಪ್ರತಿಭಾ ಪುರಸ್ಕಾರ ಪ್ರದಾನ:

ಈ ಬಾರಿ ಕುಡ್ಲದ ತುಳುಕೂಟದ ಪ್ರತಿಭಾ ಪುರಸ್ಕಾರದ ಪ್ರಶಸ್ತಿಯು ಎಸ್.ಎಸ್.ಎಲ್.ಸಿ. ಮಟ್ಟದಲ್ಲಿ ಕು|| ವಿದ್ಯಾಲಕ್ಷೀ ರಾವ್ ಹಾಗೂ ಪ.ಪೂರ್ವ ವಿಭಾಗದಲ್ಲಿ ಕು.ಭೂಮಿಕಾ ಬಿ.ಎಸ್.ರವರಿಗೆ ಪ್ರದಾನಿಸ ಲಾಗುತ್ತದೆ. ಕಾರ್ಯಕ್ರಮವನ್ನು ಆತ್ಮಶಕ್ತಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಚಿತ್ತರಂಜನ್ ಬಿ.ಯವರು ದೀಪಪ್ರಜ್ವಲಿಸಿ ಉದ್ಘಾಟಿಸುವರು.


ಮರೋಳಿ ಬಿ. ದಾಮೋದರ ನಿಸರ್ಗರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಹರಿಕೃಷ್ಣ ಪುನರೂರು, ಕೆ.ಎ.ರೋಹಿಣಿ, ಕರುಣಾಕರ ಶೆಟ್ಟಿ, ಮುಂಬಯಿ ಪುಷ್ಪರಾಜ್ ಶೆಟ್ಟಿ ಮದ್ಯ, ಪ್ರಭಾರ ಮುಖ್ಯೋಪಾಧ್ಯಾಯಿನಿ ಕುಸುಮ, ಪ್ರಫುಲ್ಲಾ ಅಮೀನ್, ಪೆಲತ್ತಡಿ ಪದ್ಮನಾಭ ಕೋಟ್ಯಾನ್  ಉದ್ಯಮಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.


ತುಳು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಖ್ಯಾತ ಸಂಘಟಕ, ನಾಟಕಕಾರ ಭಗವಾನ್ ಮಧ್ಯರವರ ಸಂಯೋಜನೆಯಲ್ಲಿ ನಡೆಸಿಕೊಡಲಿದ್ದಾರೆ ಎಂದು ಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top