ಬಳ್ಳಾರಿ:ಮುಖ್ಯಮಂತ್ರಿರವರ ಪತ್ನಿ ಭೂಮಿ ಕಿತ್ತುಕೊಂಡಿದ್ದು ಬಿಜೆಪಿ ಸರ್ಕಾರ, ಅದನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರ, ಪರ್ಯಾಯ ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರ, ಕಿತಾಪತಿ ಮಾಡಿದ್ದೆಲ್ಲಾ ಬಿಜೆಪಿ, ಆದರೆ, ಹೊಣೆ ಹೊರಿಸುವುದು ಇಂದಿನ ಮುಖ್ಯಮಂತ್ರಿ ಮೇಲೆ! ಇದೆಂತಹ ವಿಪರ್ಯಾಸ ಅಲ್ಲವೇ. ಇದು ಸದ್ಯ ರಾಜ್ಯದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ. ಹರಿಯಾಣ, ಜಮ್ಮು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆ ನಿನ್ನೆಯಷ್ಟೇ ಘೋಷಣೆ ಆಗಿದೆ.
ಇದರ ಬೆನ್ನಲ್ಲೇ ಇಂದು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಅನುಮತಿ ನೀಡಿರುವುದು ಬಿಜೆಪಿಯ ಹೀನ ರಾಜಕೀಯ ಪಟ್ಟುಗಳನ್ನು ತೋರುತ್ತದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ವೆಂಕಟೇಶ್ ಹೆಗಡೆ ಬಳ್ಳಾರಿ ಆಗ್ರಹಿಸಿದರು. ಸಮಾಜವಾದದ ಮೂಲಕ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ ಬಡವರ ಪರ ಎಂಬುದನ್ನು ತೋರಿದ್ದಾರೆ. ಭ್ರಷ್ಟ ಮುಕ್ತ ಆಡಳಿತ ನೀಡಿದ್ದಾರೆ. ಇದೆ ಮುಖ್ಯಮಂತ್ರಿಯ ಸಾಧನೆ ಮುಂದಿನ ನಾಲ್ಕು ರಾಜ್ಯಗಳ ಚುನಾವಣೆ ವಿಷಯ ವಸ್ತು ಆಗಲಿದೆ ಎಂದರು.
ಮಾದರಿ ಕರ್ನಾಟಕ ಸರ್ಕಾರದ ಉದಾಹರಣೆ ಕೊಟ್ಟು ಚುನಾವಣೆ ಎದುರಿಸಿದ್ದೆ ಅದಲ್ಲಿ ನಮ್ಮ ಸೋಲು ಖಚಿತ ಎಂದು ಅರಿತ ಕುಯುಕ್ತಿ ಬಿಜೆಪಿ ನಾಯಕರು ಇಂದು ರಾಜ್ಯಪಾಲರ ಮೂಲಕ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸೇಡಿನ ರಾಜಕಾರಣ ಅಲ್ಲದೆ ಬೇರೆ ಏನೂ ಅಲ್ಲ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿ ಆಗಿದ್ದಾರೆ. ದೆಹಲಿಯಲ್ಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಇದೀಗ 40 ವರ್ಷ ರಾಜಕಾರಣದಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜರಕಾರಣ ಮಾಡಿ ಕೊಂಡು ಬಂದ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರು.
ಅಂತಹ ಒಬ್ಬ ಪ್ರಾಮಾಣಿಕ ರಾಜಕಾರಣಿ ಮೇಲೆ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಳಕೆ ಮಾಡಿಕೊಂಡರೆ ಸಿದ್ದರಾಮಯ್ಯ ಬಳಿ ಏನೂ ಸಿಗಲ್ಲ ಎಂಬುದು ಖಚಿತ ಅದ ಮೇಲೆ ಈ ರೀತಿಯ ವಾಮ ಮಾರ್ಗದ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆಗೆ ಬಿಜೆಪಿ ಮುಂದಾಗಿದೆ. ಇದು ಕೇವಲ ಸೇಡಿನ ರಾಜಕಾರಣ. ಕರ್ನಾಟಕದ ಜನ ಮೆಚ್ಚಿ ಬಹುಮತ ನೀಡಿ ಅಧಿಕಾರ ಕೊಟ್ಟ ನಾಯಕನನ್ನು ಕೆಳಗೆ ಇಳಿಸಲು ಪ್ರಜಾಪ್ರಭುತ್ವ ಹರಣ ಮಾಡಿ ನೀತಿ ನಿಯಮ ಗಾಳಿಗೆ ತೂರಿ ನಡೆದುಕೊಳ್ಳುತ್ತಿದೆ ಕೇಂದ್ರ ಸರ್ಕಾರ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ