ಬಳ್ಳಾರಿ:17 ಎಕರೆ ಭೂ ಪ್ರದೇಶದಲ್ಲಿ ಆದಿತ್ಯ ಟೆಕ್ಸ್ಟೈಲ್ ಪಾರ್ಕ್ಗೆ ಚಾಲನೆ

Upayuktha
0


ಬಳ್ಳಾರಿ:
ಬಳ್ಳಾರಿಯ ಗಾರ್ಮೆಂಟ್ಸ್ ಉದ್ಯಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ನೀಡುವ ನಿಟ್ಟಿನಲ್ಲಿ ಭಾರತದ ಪ್ರಪ್ರಥಮ ಜೀನ್ಸ್ ಉತ್ಪಾದನೆ ಮತ್ತು ಟೆಕ್ಸ್ಟೈಲ್ ಮಾರ್ಕೆಟಿಂಗ್‍ಗಾಗಿ ಆದಿತ್ಯ ಟೆಕ್ಸ್‍ಟೈಲ್ ಪಾರ್ಕ್ಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು, ಯೋಜನೆಗೆ ಚಾಲನೆ ನೀಡಿ, ಆದಿತ್ಯ ಟೆಕ್ಸ್ಟೈಲ್ ಪಾರ್ಕ್ ರೂಪನಗುಡಿಯ ತಲಮಾಮಿಡಿ ಗ್ರಾಮದ ವ್ಯಾಪ್ತಿಯಲ್ಲಿ ಹದಿನೇಳು ಎಕರೆ ಭೂ ಪ್ರದೇಶದಲ್ಲಿ ಖಾಸಗಿ ವಲಯದಲ್ಲಿ ಪ್ರಾರಂಭವಾಗುತ್ತಿದೆ. ಈ ಯೋಜನೆಗೆ ಕರ್ನಾಟಕ ಸರ್ಕಾರ ಮಾನ್ಯತೆ ನೀಡಿದೆ ಎಂದರು. 


ಈ ಉದ್ಯಮವು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಾಗ ಭಾರತ ದೇಶದಲ್ಲಿಯೇ ವಿಶೇಷವಾಗಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ಸಿಗಲಿದೆ. 2022ರ ನವೆಂಬರ್‍ನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‍ನಲ್ಲಿ ಪಾಲ್ಗೊಂಡು ಕರ್ನಾಟಕದ ಕೈಮಗ್ಗ ಮತ್ತು ಜವಳಿ ಇಲಾಖೆಯ ಮಾನ್ಯತೆ ಪಡೆದಿರುವ ಈ ಯೋಜನೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಲಿವೆ. ಈ ಯೋಜನೆಯ ನಿರ್ದೇಶಕ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ `ನವ ಉದ್ಯಮಿ  ಪ್ರಶಸ್ತಿ ಪುರಸ್ಕೃತ ಜಿ. ಮಲ್ಲಿಕಾರ್ಜುನಗೌಡ ಮತ್ತು ವಿನಯ್ ಕುಮಾರ್ ಜೈನ್ ಅವರು, ಬಳ್ಳಾರಿಯಿಂದ ಕೇವಲ 10 ಕಿಲೋಮೀಟರ್ ದೂರದ ವಿಘ್ನೇಶ್ವರ ಕ್ಯಾಂಪ್‍ನಲ್ಲಿ 15 ಸಾವಿರ ಉದ್ಯೊಗ ಸೃಷ್ಠಿ, ದಿನಕ್ಕೆ 1 ಲಕ್ಷ ಜೀನ್ಸ್ ಉಡುಪುಗಳ ಉತ್ಪಾದನೆಯ ಜೊತೆಯಲ್ಲಿ 4  ಮೆಗಾವ್ಯಾಟ್ ಸೌರ ವಿದ್ಯುತ್  ಉತ್ಪಾದನೆಯ ಗುರಿಯೊಂದಿಗೆ ಯೋಜನೆ ಪ್ರಾರಂಭವಾಗಲಿದೆ ಎಂದರು. 


ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಯೋಜನೆಯ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಲ್ಲಿ ಬಳ್ಳಾರಿಯು ಭಾರತದಲ್ಲಿಯೇ ಅತಿ ದೊಡ್ಡದಾದ ಗಾರ್ಮೆಂಟ್ ಹಬ್ ಆಗಲಿದೆ ಎಂದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಆದಿತ್ಯ ಟೆಕ್ಸ್ಟೈಲ್ ಪಾರ್ಕ್ಯೋ ಜನೆಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ `ನವ ಉದ್ಯಮಿ ಪ್ರಶಸ್ತಿ ಬಂದಿದ್ದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಆಶಾಕಿರಣವಾಗಿದೆ ಎಂದು ಹೇಳಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top