ಈ ಕುರಿತ ಪತ್ರಿಕಾ ವರದಿಯ ಕೊನೆಯಲ್ಲಿ ಹೆಸರು ಹೇಳಲಿಚ್ಚಿಸದ ಅಡಿಕೆ ವರ್ತಕರೇ ಹೇಳಿದ ಮಾತು ಸತ್ಯಕ್ಕೆ ಹೆಚ್ಚು ಹತ್ತಿರವಾಗಿದೆ ಅನಿಸುತ್ತೆ.
"ಇಲ್ಲಿಂದ ಕಳುಹಿಸಿದ ಅಡಿಕೆ ಗುಣಮಟ್ಟ ಸರಿಯಿಲ್ಲ ಎಂಬ ಕಾರಣಕ್ಕೆ ಗುಟ್ಕಾ ಕಂಪನಿಗಳು ತಿರಸ್ಕರಿಸಿವೆ. ಕೆಲ ದೊಡ್ಡ ಬೆಳೆಗಾರರು ಹಾಗೂ ದುರಾಸೆ ವರ್ತಕರು ಮಾಡುವ ಕೆಲಸಕ್ಕೆ ಇಡೀ ಮಾರುಕಟ್ಟೆ ಪೆಟ್ಟು ತಿನ್ನಬೇಕಿದೆ"
ಇದೇ ರೀತಿ ಹೆಸರು ಬಹಿರಂಗಪಡಿಸಲು ಇಚ್ಚಿಸದ ಅನೇಕ ಸಣ್ಣ ಮಂಡಿ ವರ್ತಕರು, ನೇರವಾಗಿ ಗಮನಿಸಿದ ಕೆಲವು ವ್ಯಕ್ತಿಗಳು ಹೇಳುವಂತೆ, ಮತ್ತು ಅದು ಈಗ ಸಾಮನ್ಯ ಜನರ, ರೈತರ ಬಾಯಿಯಲ್ಲಿ ಹರಿದಾಡುತ್ತಿರುವಂತೆ, ಶಿವಮೊಗ್ಗ ಮತ್ತು ಸುತ್ತಮುತ್ತ ಮಂಡಿ ಇಟ್ಟುಕೊಂಡಿರುವ, ಹತ್ತಾರು ಎಕರೆ ಅಡಿಕೆ ತೋಟವನ್ನೂ ಹೊಂದಿರುವ ಅನೇಕ ದೊಡ್ಡ ವರ್ತಕರು ಕಮ್ ಬೆಳೆಗಾರರು ತಮ್ಮ ಫಾರಂ ಹೌಸ್ ಶೆಡ್‌ನಲ್ಲಿ ಎರಡನೆ ದರ್ಜೆಯ ಗಟ್ಟಿ ಅಡಿಕೆಯನ್ನು ಖರೀದಿ ಮಾಡಿ (ಅದರಲ್ಲಿ ವಿದೇಶಿ ಕಳಪೆ ಅಡಿಕೆಯೂ ಇರಬಹುದು!?) ಮೇಲ್ನೋಟಕ್ಕೆ ರಾಶಿ ಇಡಿಯಂತೆ ಕಾಣುವ ಹಾಗೆ ಮಾಡಿ, ಗುಣಮಟ್ಟದ ರಾಶಿ ಇಡಿ ಅಡಿಕೆಗೆ ಮಿಶ್ರಣ ಮಾಡುವ ದೊಡ್ಡ ದಂಧೆ ನಡೆಯುತ್ತಿದೆಯಂತೆ.
ಅಡಿಕೆ ಕ್ವಾಲಿಟಿ ನಿಯಂತ್ರಣ ನಿಯಮಗಳು, ಅದಕ್ಕೊಂದು ಸ್ಟಾಂಡರ್ಡ್ ಮಾನದಂಡ, ಕಾನೂನು, ಕಾನೂನು ಮಂಡಳಿ, ಅಡಿಕೆ ಕ್ವಾಲಿಟಿಯ ಮೇಲೆ ನಿಗಾ ವಹಿಸುವ ವ್ಯವಸ್ಥೆ, ನಿಯಂತ್ರಣ ಯಾವುದೂ ಇಲ್ಲ. ಇದ್ದರೂ, ಖಾಸಗಿ ಫಾರಂ ಹೌಸ್‌ಗಳಲ್ಲಿ ನೆಡೆಯುವ ಆ ಅಕ್ರಮ ದಂಧೆಯನ್ನು ನಿಲ್ಲಿಸಲು ಸಾಧ್ಯವಾ? ಈ ಅಕ್ರಮ ವ್ಯವಹಾರ ತಡೆಯಲು ಯಾವುದೇ ಕಾನೂನಿನ ನಿಯಮಾವಳಿಗಳೂ ಇಲ್ಲ. ಕ್ವಾಲಿಟಿ ಇಲ್ಲದ ಅಡಿಕೆ ಅಥವಾ ಕಳಪೆ ಮಿಶ್ರಿತ ಅಡಿಕೆ ಅಂತ ಗೊತ್ತಾಗುವುದು ಬಹುಶಃ ಗುಟ್ಕಾ ಕಂಪನಿಯವರು ಹೇಳಿದ ಮೇಲೆ.
ಈ ಫಾರ್ಮ್ ಹೌಸ್ ದಂಧೆಯು ವಿಶಾಲವಾದ ವ್ಯಾಪ್ತಿಯಲ್ಲಿ ನೆಡೆಯುತ್ತಿರುವುದರ ಹಿಂದೆ ಕೆಲವು ಜನ ಪ್ರತಿನಿಧಿಗಳು, ಅಧಿಕಾರಿಗಳು ಶಾಮೀಲಾಗಿದ್ದರೆ ಅದನ್ನು ತಡೆಯಲು ಸದ್ಯಕ್ಕೆ ಭಗವಂತ ಬಂದ್ರೂ ಸಾಧ್ಯ ಇಲ್ಲ!!
ರಾಜಾರೋಷವಾಗಿ ನೆಡೆಯುವ ಸ್ಥಳೀಯ ಮರಳು ದಂಧೆ, ಪಂಚಾಯತಿ, ತಾಲೂಕು ಕಛೇರಿ- ಉಪ ನೊಂದಣಿ ಕಛೇರಿಗಳಲ್ಲಿನ ಭ್ರಷ್ಟತೆಗಳನ್ನೇ ತಡೆಯಲಾಗದ ಪರಿಸ್ಥಿತಿಯಿಂದ ಹಿಡಿದು, ಅಕ್ರಮ ವಿದೇಶಿ ಕಳಪೆ ಅಡಿಕೆ ಆಮದಿನವರೆಗೆ ಯಾವುದನ್ನೂ ತಡೆಯಲಾಗದ ಪರಿಸ್ಥಿತಿ ಇರುವಾಗ, ಫಾರ್ಮ ಹೌಸ್ ಅಕ್ರಮ ಅಡಿಕೆ ದಂದೆಗೆ ಕಡಿವಾಣ ಸಾಧ್ಯವಾ!!?
ಇದನ್ನೆಲ್ಲ ಸರಿ ಮಾಡಿ, ದಾರಿಗೆ ತರಲು ಯೋಚಿಸಬೇಕಾದ್ದು ನಾವು, ನೀವು, ಇರಬಹುದಾದ ಇಚ್ಛಾಶಕ್ತಿಯ ಜನ ಪ್ರತಿನಿಧಿಗಳು, ಇರಬಹುದಾದ ಸಭ್ಯ ಅಧಿಕಾರಿಗಳು.. ಉಹೂಂ ಯಾರೂ ಅಲ್ಲ. ಯಾರಿಂದಲೂ ಆಗುವುದೂ ಇಲ್ಲ. ಯೋಚಿಸಬೇಕಾದ್ದು ಅಡಿಕೆ ಮರದಲ್ಲಿ ಅಡಿಕೆ ಸೃಷ್ಟಿ ಮಾಡಿದ ಭಗವಂತ. ಮತ್ತು ಆತ ಮಾತ್ರ. ಅವನೇ ಬಂದು ಸರಿ ಮಾಡಬೇಕು!!.
ಅಲ್ಲಿಯವರೆಗೆ ಸಮಸ್ಯೆಯನ್ನು ಅನುಭವಿಸುತ್ತ...
"ಅಡಿಕೆ ಕಾಯಿ ಮರದಲ್ಲಿಟ್ಟನೋss ನಮ್ಮ ಶಿವ ಮೋಸ ಮಾಡೋ ಮನಸು ಕೊಟ್ಟನೋsss ನಡುವೆ ಈ 'ಶೆಡ್ಡಿನಲ್ಲಿ' ದಂಧೆ ಮಾಡುವಂತೆ ಮಾಡಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನೂsss
ಅಂತ ಹಾಡುತ್ತಿರುವುದು!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ