"ಸ್ವರ ಸಿಂಚನ"- ವಿಟ್ಲ ಪಡಿಬಾಗಿಲಿನಲ್ಲಿ ಸ್ವರ ಮಾಧುರ್ಯ

Upayuktha
0

ವಿಟ್ಲ: Music ಸಂಗೀತಮಯ Mu ತೆಗೆದರೆ sick ಕಾಯಿಲೆ ಆದ್ದರಿಂದ ನಮ್ಮೆಲ್ಲ ನೋವು, ರುಜಿನ, ಕಾಯಿಲೆ ಕಸಾಲೆ ದೂರವಾಗಬೇಕಾದರೆ ಸಂಗೀತ ಹಾಡು ಕೇಳಬೇಕು. ಸಂಗೀತವೆಂದರೆ ಹಾಡುವವರು ಮತ್ತು ಕೇಳುವವರು ಸಮಾನವಾಗಿ ಸುಖಿಸುವ ಸ್ವರ ಪ್ರಪಂಚವು ವಿಟ್ಲ ಪಡಿಬಾಗಿಲು ಮುವಾಜೆ ಸಭಾಂಗಣದಲ್ಲಿ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮದಲ್ಲಿ ಸ್ವರಮಾಧುರ್ಯ ಗಾಯನ ಕಾರ್ಯಕ್ರಮ ನಡೆಯಿತು.


ಮೊದಲಿಗೆ ಶ್ರೀ ಗಣನಾಥ ಸಿಂಧೂರ ವರ್ಣ ಹಾಡಿನೊಂದಿಗೆ ಶ್ರೀ ವರಲಕ್ಷ್ಮಿ ಶ್ರೀ ರಾಗ ಹಾಡಿನೊಂದಿಗೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕಾಮಾಕ್ಷಿ ವರಲಕ್ಷ್ಮಿರಾಗ ವಸಂತ, ಪಾಹಿಶಿವೆ ಶಿವರಂಜಿನಿ ರಾಗ, ಎಂದರೋ ಮಹಾನುಭಾವುಲು ಶ್ರೀರಾಗ, ಪಂಚರತ್ನ ತ್ಯಾಗರಾಜರ ಕೃತಿ, ಸಾದರ ಮವ ನಿರುಪಮ ಸರಸ್ವತಿ ರಾಗ, ತಿಲ್ಲಾನ ಬೃಂದಾವನಿ ಸಾರಂಗ ಹಾಡಿನೊಂದಿಗೆ ಸಮಾಪ್ತಿಯಾಯಿತು.

 


ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ನಿರ್ದೇಶನದಲ್ಲಿ ಸಿಂಚನಲಕ್ಷ್ಮಿ ಕೋಡಂದೂರ್ ಭಾಗ್ಯಶ್ರೀ ಪಡಿಬಾಗಿಲು, ವಾಣಿ, ಪ್ರತಿಭಾ, ಆದರ್ಶಿನಿ, ಸಾತ್ವಿಕ ಮುಂತಾದವರು ಭಕ್ತಿಗೀತೆ, ಭಾವಗೀತೆ ಜಾನಪದಗೀತೆ, ದಾಸರ ಗೀತೆಗಳನ್ನು ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಎಲ್ಲರ ಮನ ಸೆಳೆದು ರಂಜಿಸಿದರು. ಗೋಪಾಲಕೃಷ್ಣ ನಾಯಕ್, ಎಂಆರ್ ಪಿಕ್ಚರ್ಸ್ ಬಾಯಾರು ಸಹಕರಿಸಿದರು.


ಬರಹ: ಕುಮಾರ್ ಪೆರ್ನಾಜೆ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top