ಬ್ರಹ್ಮಾವರ: ಜಯಂಟ್ಸ್ ಮಲ್ಟಿ ಯುನಿಟ್ ಸಮ್ಮೇಳನ

Upayuktha
0

ಬ್ರಹ್ಮಾವರ: ಜಯಂಟ್ಸ್ ಸಂಸ್ಥೆ ಭಾರತೀಯ. ಮೂಲದ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಭಾರತೀಯ ಸಂಸ್ಕೃತಿಯ ಪ್ರಚಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಯಂಟ್ಸ್ ವೆಲ್ಫೇರ್ ಪೌoಡೇಶನ್ ಸಂಸ್ಥೆಯ ಅಂತರಾಷ್ಟ್ರೀಯ ಉಪಾಧ್ಯಕ್ಷ ಎಂ.ಲಕ್ಷ್ಮಣನ್ ಹೇಳಿದರು.


ಅವರು ಆ.18ರಂದು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ನ ಆತಿಥ್ಯದಲ್ಲಿ ಸಿಟಿ ಸೆಂಟರ್ ನಲ್ಲಿ ನಡೆದ ಮಲ್ಟಿಯುನಿಟ್ ಸಮ್ಮೇಳನದಲ್ಲಿ ಮಾತನಾಡಿದರು.

ಕಾಯ೯ಕ್ರಮವನ್ನು ಶಂಕರಪುರ ಶ್ರೀ ಸಾಯಿ ಮುಖ್ಯ ಪ್ರಾಣ ಮಂದಿರದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿ ಉದ್ಘಾಟಿಸಿ, ಸಂಘ ಸಂಸ್ಥೆಗಳಲ್ಲಿ ಮಾನವೀಯತೆ ಮತ್ತು ಸೇವೆ ಅತ್ಯಂತ ಮುಖ್ಯವಾದದ್ದು, ಸಮಾಜದ ಸೇವೆಯಲ್ಲಿ ಸಿಗುವ ಸಂತೋಷ ಅನನ್ಯವಾದದ್ದು ಎಂದರು.


ಮುಖ್ಯ ಭಾಷಣ ಮಾಡಿದ ತರಬೇತುದಾರ, ಶಿಕ್ಷಕ ರಾಜೇಂದ್ರ ಭಟ್ ಯಾವುದು ಕೂಡ ಅಸಾಧ್ಯವಲ್ಲ, ಅನೇಕ ಉದಾಹರಣೆಗಳು ನಮ್ಮ ಸಮಾಜದ ಮುಂದೆ ಇವೆ. ದೃಢ ಸಂಕಲ್ಪ ಮತ್ತು ಕಠಿಣ ದುಡಿಮೆ ನಮ್ಮ ಜೀವನದ ಯಶಸ್ಸಿನ ಗುಣವಾಗಿದೆ ಮಾದರಿ ವ್ಯಕ್ತಿತ್ವ ಬೆಳೆಸಬೇಕು ಎಂದರು.


ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ.ಅಮೀನ್, ವಿಶೇಷ ಕಮಿಟಿ ಸದಸ್ಯರಾದ ಮೋಹನ್ ಕರೇಕರ್, ಗಜಾನನ ನಿಲೆಕರಿ, ಫೆಡರೇಶನ್ 6 ಅಧ್ಯಕ್ಷ ಲಗಮಣ್ಣ ದೊಡ್ಡಮನಿ, ಪೂವ೯ ಅಧ್ಯಕ್ಷ, ಕಾಯ೯ಕ್ರಮ ನಿದೇ೯ಶಕ ಮಧುಸೂಧನ್ ಹೇರೂರು, ಯುನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮಿಲ್ಟನ್ ಒಲಿವರ್ ಮುಂತಾದವರಿದ್ದರು.


ಈ ಸಂದರ್ಭದಲ್ಲಿ ಅನೇಕ ಅಧಿವೇಶನಗಳು ನಡೆದವು, ಪೂರ್ವ ಫೆಡರೇಶನ್ ಅಧ್ಯಕ್ಷರುಗಳನ್ನು ಮತ್ತು ಸಾಧಕರನ್ನು ಗೌರವಿಸಲಾಯಿತು.

ಲಗಮಣ್ಣ ದೊಡ್ಮನಿ ಸ್ವಾಗತಿಸಿದರು. ಸುಂದರ ಪೂಜಾರಿ ಮೂಡುಕುಕ್ಕುಡೆ ವಂದಿಸಿದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top