ಶ್ರೀ ಸತ್ಯಾತ್ಮವಾಣಿ- 27: ಪಾಪಕ್ಕೆ ಉತ್ತಮ ಪ್ರಾಯಶ್ಚಿತ್ತ ಉಪವಾಸ

Upayuktha
0



ಶ್ರೀಮನ್‌ ಮಹಾಬಾರತ ಬಹಳ ದಿವ್ಯವಾದ ಸಂದೇಶಗಳನ್ನು ನೀಡುತ್ತಾ, ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ, ರೋಗಗಳು ಬಂದಾಗ ಅವುಗಳ ಉಪಚಾರ ಮಾಡಿ ಚಿಕಿತ್ಸೆ ಪಡೆಯಬೇಕೆಂದು, ಪಾಪಗಳು ನಮ್ಮಲ್ಲಿ ಗಟ್ಟಿಯಾಗಿ ಉಳಿದರೆ ಕಷ್ಟ ಪಾಪಗಳ ಫಲವಾದ ದುಃಖವನ್ನು ಪಡೆಯದೇ ಇರಲು ಉತ್ತಮವಾದ ಭಕ್ತಿಯನ್ನು ಮಾಡುತ್ತಾ ಸಾಧನೆಯನ್ನು ಮಾಡಬೇಕು. ಉಪವಾಸ ಎಂಬ ತಪಸ್ಸನ್ನು ಆಚರಣೆ ಮಾಡಿದರೆ ಸಾವಿರ-ಸಾವಿರ ಲಕ್ಷ -ಲಕ್ಷ ಪಾಪಗಳ ಆಹುತಿಯನ್ನು ಹಾಕಿದಂತೆ. ನಾವು ಉಪವಾಸ ಮಾಡಿದಾಗ ನಮ್ಮ ಜಠರದ ಆ ಅಗ್ನಿ ಅನ್ನವಲ್ಲದೆ ನಮ್ಮ ಪಾಪಗಳನ್ನು ಸುಡುತ್ತದೆ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ರುದ್ರ ದೇವರು ಪಾರ್ವತಿ ದೇವಿಗೆ ಹೇಳಿದ ಮಾತು ಅಹಿಂಸೆ ಪರಮೋಧರ್ಮ, ಸಸ್ಯ ಜೀವನ ಹಿಂಸೆ ಮಾಡಿ ಬದುಕುತ್ತವೆ ಅದೇ ದೊಡ್ಡ ಪಾಪ ಅಹಿಂಸೆ ಮಾಡುವುದು ಹೇಗೆಂದರೆ ಕೇವಲ ನೀರನ್ನೇ ಗಾಳಿಯನ್ನು ಸೇವೆ ಮಾಡಿ ಬದುಕವವರು ಇದ್ದಾರೆ. ಭಗವಂತನ ಸೇವೆಗಾಗಿ ಮತ್ತೂ ಅವರ ದೊಡ್ಡ ಉದ್ದೇಶ ಜೊತೆಗೆ ಪಾಪಗಳನ್ನು ಕಳೆದು ಕೊಳ್ಳಲು ಉಪವಾಸವನ್ನು ಮಾಡುತ್ತಾರೆ ಎಂದು ರುದ್ರದೇವರು ಹೇಳುತ್ತಾರೆ.


ಆಹಾರವನ್ನು ತ್ಯಾಗವನ್ನು ಮಾಡಿದವ ನಿಜವಾದ ಅಹಿಂಸಕ ಎಂದು ರುದ್ರದೇವರು ಹೇಳುತ್ತಾರೆ, ಉಪವಾಸ ವ್ರತಗಳ ದಿನದಲ್ಲಾದರೂ ಉಪವಾಸ ಮಾಡಿದರೆ ಅಹಿಂಸಕರು ಎಂದು ಭಾವಿಸುತ್ತೇನೆ ಎಂದು ಹೇಳುತ್ತಾರೆ. ಏಕಾದಶಿ, ಕೃಷ್ಣ ಅಷ್ಟಮಿ, ದೇವರ ಪೂಜೆಯಾಗುವವರೆಗೂ ಏನನ್ನು ತಿನ್ನದೇ ಇದ್ದರೆ ಅಹಿಂಸೆಯನ್ನು ಮಾಡಿದ ಸಜ್ಜನರು ಎಂದು ಶಾಸ್ತ್ರದಲ್ಲಿ ಪರಿಗಣನೆ ಮಾಡುತ್ತಾರೆ ಎಂದು ರುದ್ರದೇವರು ಹೇಳುತ್ತಾರೆ. ಇಂದ್ರಿಯ ಮತ್ತು ಮನೋನಿಗ್ರಹ ಮಾಡಲು ಉಪವಾಸ ಸಹಾಯಕವಾಗುತ್ತದೆ. ಶರೀರ ಎಂಬ ರಥದಲ್ಲಿ ಇಂದ್ರಿಯಗಳಿಗೆ ಮದ ಏರಿದಾಗ ಮಧ್ಯದಲ್ಲಿ ಉಪವಾಸ ಮಾಡಿದಾಗ, ಅವುಗಳನ್ನು ನಿಯಂತ್ರಿಸ ಬಹುದು, ಹೀಗಾಗಿ ಉಪವಾಸ ಮಾಡಬೇಕು ಎಂದು ಹೇಳುತ್ತಾರೆ.


ರಾಜರು ಸೇವರಕರನ್ನು ನಿಯಂತ್ರಣದಲ್ಲಿಟ್ಟುಕೊಂಡಂತೆ ಉಪವಾಸ ಮಾಡಿ ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕು, ಸಾವಿರಾರು ತಪಸ್ಸುಗಳಲ್ಲಿ ಉಪವಾಸವನ್ನು ಮಾಡಿ ಪಾಪಗಳನ್ನು ಕಳೆದುಕೊಳ್ಳಬೇಕು ಎಂದು ವೇದವ್ಯಾಸ ದೇವರು ಮತ್ತು ರುದ್ರದೇವರು ಮಹಾಭಾರತದಲ್ಲಿ ಹೇಳಿದ ಉಪವಾಸ ಮಾಡಬೇಕು. ನಾಳೆಯ ದಿನ ಶ್ರೀ ಕೃಷ್ಣಾಷ್ಟಮಿ ಉಪವಾಸ ಮಾಡಬೇಕು.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top