ಸದ್ಗುಣಗಳ ಸದಾಚಾರಗಳ ಪರಿಪಾಲನೆಯನ್ನು ಮಾಡುವವರು ಉತ್ತಮವಾದ ದೇವತಾನುಗ್ರಹಕ್ಕೆ ಲಕ್ಷ್ಮಿ ನಾರಾಯಣರ ಕೃಪೆಗೆ ಪಾತ್ರರಾಗುತ್ತಾರೆ. ದುರಾಚಾರ ಮಾಡುವವರು ಲಕ್ಷ್ಮಿನಾರಾಯಣ ಕೋಪಕ್ಕೆ ಗುರಿಯಾಗುತ್ತಾರೆ ಎಂದು ಹೇಳುತ್ತಾಳೆ. ಇರಬೇಕಾದ ಗುಣ ಇರಬಾರದ ದೋಷಗಳನ್ನು ಹೇಳುತ್ತಾ ಮುಂದೆ ಹೇಳುತ್ತಾಳೆ, ಎಲ್ಲರಿಗೂ ಆಕಳನ್ನು ಕೊಡುವ ಹಾಲನ್ನು ಎಲ್ಲ ದೇವತೆಗಳ ಸನ್ನಿಧಾನ ಎಂದು ತಿಳಿದು ಪೂಜಿಸಬೇಕು. ಆಕಳನ್ನು ಹಾಲನ್ನು ತೆಗೆದುಕೊಳ್ಳುವ ಕ್ರಮವಿದೆ. ಆಕಳಿಗೆ ಹುಲ್ಲು ಹೊಟ್ಟು ಆಕಳನ್ನು ಹೊಟ್ಟೆ ತುಂಬುವಂತೆ ಇಡಬೇಕು. ಒಂದೇ ಆಕಳನ್ನು ತೊಂದರೆ ಕೊಟ್ಟು ಹಾಲನ್ನು ತೆಗೆದುಕೊಳ್ಳಬಾರದು, ಗೋವನ್ನು ತಿರಸ್ಕಾರ ಮಾಡಬಾರದು ಗೋವಿಗೆ ನೋವು ಮಾಡುವವರಿಗೆ ಶಾಪ ಕೊಡುತ್ತೇನೆ ಎಂದು ಲಕ್ಷ್ಮಿದೇವಿ ಹೇಳುತ್ತಾಳೆ. ಮಹಾಭಾರತದಲ್ಲಿ ಹೇಳುತ್ತಾರೆ, ಕರುವಿನ ಉಚ್ಛಿಷ್ಟದ ಹಾಲು ದೇವರಿಗೆ ಪ್ರೀತಿ ಎಂದು ಹೇಳುತ್ತಾರೆ. ಇನ್ನೊಬ್ಬರಿಗೆ ಸೇರಬೇಕಾದ ಆಹಾರ, ಹಣ, ಸ್ಥಾನ, ಭೂಮಿ ನ್ಯಾಯವಾಗಿ ದೊರಕಬೇಕಾದ್ದು ಕಸಿದು ಕೊಂಡರೆ ಅದನ್ನು ನಾನು ಸಹಿಸುವುದಿಲ್ಲ ಎಂದು ಲಕ್ಷ್ಮೀ ದೇವಿ ಹೇಳುತ್ತಾಳೆ. ಸಂಸಾರದಲ್ಲಿ ಮನುಷ್ಯ ಹೇಗೆ ಇರಬೇಕೆಂದು ಮಹಾಭಾರತದಲ್ಲಿ ಬೇಜವಾಬ್ದಾರನಾಗಬಾರದು, ವೈರಾಗ್ಯ ಇದ್ದರೂ ಕೂಡ ಹೆಂಡತಿ ಮಕ್ಕಳಿಗೆ ಬೇಕಾದ್ದನ್ನು ಉದಗಿಸಬೇಕು. ಶಾಸ್ತ್ರದಲ್ಲಿ ಹೇಳಿದ ಶಾಸ್ತ್ರ ಸಮ್ಮತವಾದ ಆಸೆಗಳನ್ನು ತಂದೆ ತಾಯಿ ಹೆಂಡತಿ ಮಕ್ಕಳು ಬೇಡಿದ್ದನ್ನು ಪೂರೈಸಬೇಕು ಎಂದು ಹೇಳುತ್ತದೆ.
ಮಹಾಲಕ್ಷ್ಮಿದೇವಿಯು ಸ್ತ್ರೀ ಪುರುಷರು ಇಬ್ಬರಲ್ಲೂ ತಾನು ಸನ್ನಿಹಿತಳಾಗಿರುತ್ತೇನೆ, ಅದರಲ್ಲೂ ಸ್ತ್ರೀಯರಲ್ಲಿ ವಿಶೇಷವಾಗಿ ಇರುತ್ತೇನೆ, ಹೀಗಾಗಿ ಹೆಣ್ಣುಮಗಳು ಹೆಂಡತಿಗೆ ನೋವು ಮಾಡಿದರೆ ಮಹಾಲಕ್ಷ್ಮಿ ದೇವಿ ಅವರಿಗೆ ಶಾಪ ನೀಡುತ್ತಾಳೆ ಎಂದು ಮಹಾಭಾರತದಲ್ಲಿ ಹೇಳುತ್ತಾರೆ.
ಶುದ್ಧ ಆಹಾರ ಸೇವನೆ ಮಾಡದೇ ಇದ್ದರೆ ಬುದ್ಧಿ ಹೇಗೆ ಭ್ರಷ್ಟವಾಗುತ್ತದೆ ಎನ್ನುವುದಕ್ಕೆ ಭೀಷ್ಮಾಚಾರ್ಯರ ಜೀವನ ಸಾಕ್ಷಿ. ಅವರು ಯುಧಿಷ್ಠಿರನಿಗೆ ಧರ್ಮ ಮಾರ್ಗವನ್ನು ಶರಶಯ್ಯೆಯಲ್ಲಿ ಹೇಳುತ್ತಾರೆ ಆದರೆ ಎಲ್ಲಿಯವರೆಗೂ ದುರ್ಯೋಧನನ ಅನ್ನದ ಪರಿಣಾಮ ಇತ್ತೋ ಅಲ್ಲಿಯವರೆಗೂ ಅವರು ಅಧರ್ಮದ ವಿರೋಧ ಮಾಡಲಿಲ್ಲ. ಅಧರ್ಮದ ಅನ್ನದ ಪ್ರಭಾವ ಹೋದಮೇಲೆ ಶಾಂತಿ ಪರ್ವ ಅನುಶಾಸನ ಪರ್ವವನ್ನು ಉಪದೇಶ ಮಾಡುತ್ತಾರೆ. ದೊಡ್ಡ ಧರ್ಮ ಸಾಧನದ ಬಗ್ಗೆ ಉಪದೇಶ ಮಾಡುತ್ತಾರೆ.
ಅನ್ನ ಧಾನ್ಯಗಳನ್ನು ತಿರಸ್ಕಾರ ಮಾಡಿದವರಲ್ಲಿ ಲಕ್ಷ್ಮಿದೇವಿ ಸಿಟ್ಟಾಗುತ್ತಾಳೆ. ಸಮಯವನ್ನು ವ್ಯರ್ಥವನ್ನು ಮಾಡಿಕೊಳ್ಳಬಾರದು. ವ್ಯರ್ಥ ಆಟ ಪಾಠಗಳಲ್ಲಿ ಸಮಯ ಕಳೆಯದೆ ಶಾಸ್ತ್ರ ಪಾಠ ಅನುಸಂಧಾನ ಜ್ಞಾನಾರ್ಜನೆಯನ್ನು ಮಾಡಬೇಕು. ಪ್ರಾಣಿ ಪಕ್ಷಿಗಳನ್ನು ಸಾಕಬೇಕು ಆದರೆ ಅವುಗಳ ಲಾಲನೆ ಪಾಲನೆಯಲ್ಲಿ ಮುಳಗದೇ ಅವಕ್ಕೆ ಕೊಡಬೇಕಾದಷ್ಟು ಸಮಯ ಮಾತ್ರ ಕೊಡಬೇಕು ಎಂದು ಹೇಳುತ್ತಾರೆ.
ಜಿಂಕೆಯನ್ನೇ ಸ್ಮರಣೆ ಮಾಡುತ್ತಾ ಸತ್ತ ಭರತ ಜಿಂಕೆಯಾದಂತೆ ಅವುಗಳ ಜೊತೆಗೆ ಕಾಲ ಕಳೆಯುತ್ತಾ ಜೀವನ ವ್ಯರ್ಥ ಮಾಡಬಾರದು ಎಂದು ಹೇಳುತ್ತಾಳೆ. ಮುಳ್ಳು ಮೊದಲಾದ ಕೆಟ್ಟದ್ದನ್ನು ಮನೆಯಲ್ಲಿ ಬೆಳೆಸಬಾರದು ತುಳಸಿ ಮೊದಲಾದ ಪವಿತ್ರ ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳುತ್ತಾಳೆ.
ಯಜ್ಞಕ್ಕೆ ಉಪಯೋಗಕ್ಕಾಗಿ ಬೆಳೆಸಿದ ವೃಕ್ಷದ ದುರುಪಯೋಗ ಮಾಡಿಕೊಳ್ಳಬಾರದು ವೃಕ್ಷಗಳನ್ನು ಕಾರಣ ಇಲ್ಲದೇ ಛೇದನ ಮಾಡಬಾರದು ಹಾಗೆ ಮಾಡಿದಲ್ಲಿ ಆ ಅಪರಾಧಕ್ಕೆ ದಂಡ ವಿಧಿಸಬೇಕು ಎಂದು ಸ್ಮೃತಿ ಹೇಳುತ್ತದೆ, ವಿಷ್ಣು ಸ್ಮೃತಿಯಲ್ಲಿ ವರಾಹ ದೇವರು ಹೇಳುತ್ತಾರೆ.
ನದೀ ಸ್ನಾನವನ್ನು ಅವಕಾಶ ಆದಾಗಲೆಲ್ಲ ಮಾಡಬೇಕು. ಕೇವಲ ಬಾವಿಯ ಸ್ನಾನ ಮಾಡಬಾರದು, ಹನ್ನೆರಡು ವರ್ಷಕಾಲ ನದೀ ಸ್ನಾನ ಮಾಡದೇ ಇದ್ದರೆ ಪಾಪ ಎಂದು ಮಹಾಭಾರತ ಹೇಳುತ್ತದೆ. ಯೋಗ್ಯವಾದ ಕಾಲದಲ್ಲಿ ಗೃಹಸ್ಥ ಸುಖವನ್ನು ಅನುಭವಿಸಬಾರದು. ಅಂದರೆ ಪವಿತ್ರ ಸಮಯದಲ್ಲಿ ಸಂಸಾರ ಸುಖದ ಬೆನ್ನುಹತ್ತಬಾರದು, ರಾತ್ರಿಯಲ್ಲಿ ಎಳ್ಳು ತಿನ್ನಬಾರದು ಹೊಂಗೆ ಮರದ ನೆರಳಿನಲ್ಲಿ ಕೂಡ ಬಾರದು ಎಂದು ಹೇಳುತ್ತಾರೆ. ಪದ್ಮಗಳ ಬೀಜವನ್ನು ತಿನ್ನಬಾರದು ಎಂದು ಲಕ್ಷ್ಮಿದೇವಿ ಹೇಳುತ್ತಾಳೆ. ಇದೆಲ್ಲರ ಮೂಲ ವಿಷ್ಣು ಭಕ್ತಿಯು ಬರದೇ ಇರುವುದನ್ನು ತ್ಯಜಿಸಿ, ಸದಾಚಾರವನ್ನು ಮಾಡಿದಾಗ ಭಗವಂತನ ಅನುಗ್ರಹವಾಗುತ್ತದೆ ಎಂದು ಹೇಳುತ್ತಾಳೆ. ನಿತ್ಯದಲ್ಲಿಯೂ ವಿಷ್ಣುಸಹಸ್ರನಾಮ ಪಠಣ ಮಾಡಬೇಕು ಕನಿಷ್ಠ ಪಕ್ಷ ವಿಷ್ಣು ಸ್ತೋತ್ರ, ಭಗವಂತನ ನಾಮ ಸಂಕೀರ್ತನ ಮಾಡುವವರನ್ನು ನಿಂದನೆ ಮಾಡಿದರೆ ಕೂಡ ಪಾಪ ಎಂದು ಹೇಳುತ್ತಾರೆ. ಗುರು ಹಿರಿಯರಿಗೆ ಗೌರವ ಕೊಟ್ಟು ಅವರ ಸೇವೆಯನ್ನು ಮಾಡಿದರೆ ಲಕ್ಷ್ಮಿದೇವಿ ಅನುಗ್ರಹ ಮಾಡುತ್ತಾಳೆ.
ತಂದೆ, ಮಕ್ಕಳು ತಾತ ಮುತ್ತಾತ ಎಲ್ಲರಿಗೂ ಸೇವೆಯನ್ನು ಮಾಡಬೇಕು. ಹಿರಿಯರಿಗೆ ಹೆದರಿಸಿದರೆ ದೊಡ್ಡ ಅಪರಾಧ ಎಂದು ತಿಳಿಯಬೇಕು. ದೇವತೆಗಳ ಕ್ರೋಧಕ್ಕೆ ಗುರಿಯಾಗುತ್ತೇವೆ ಎಂದು ತಿಳುವಳಿಕೆ ಇರಬೇಕು ಎಂದು ಮಹಾಭಾರತ ಹೇಳುತ್ತದೆ. ಎಲ್ಲ ಇಷ್ಟಾರ್ಥಗಳನ್ನು ಕೊಡುವ ಭಗವಂತನ ಮೂಲಕವೇ ದೇವತೆಗಳು ಕೊಡುವುದು ಅವನನ್ನು ಮರೆಯಬಾರದು
ಸಣ್ಣ ಮಕ್ಕಳು ತಾವು ಕುಳಿತು ತಂದೆ ತಾಯಿಗಳ ಹತ್ತಿರ ಕೆಲಸ ಮಾಡಿಸಿದರೆ ಅವರ ಅಧೋಗತಿ ಆರಂಭ ಎಂದು ಮಹಾಭಾರತ ಹೇಳುತ್ತದೆ. ವೈಪರೀತ್ಯ ಕಾರ್ಯಗಳನ್ನು ಮಾಡಿದಾಗ ಮಹಾಲಕ್ಷ್ಮಿ ಕಟಾಕ್ಷ ತಪ್ಪುತ್ತದೆ. ವಿಶೇಷವಾಗಿ ಘೃತದಲ್ಲಿ ಮಹಾಲಕ್ಷ್ಮಿ ಸನ್ನಿಧಾನವಿರುತ್ತದೆ. ತುಪ್ಪದಲ್ಲಿ ನಿತ್ಯ ಸನ್ನಿಧಾನದಿಂದ ಲಕ್ಷ್ಮೀ ಇರುತ್ತಾಳೆ, ಪವಿತ್ರವಾದ ಕೈಯಿಂದ ಮುಟ್ಟಬೇಕು ಎಂದು ಹೇಳಿದ್ದಾಳೆ.
ಶುದ್ದ ಆಹಾರ, ಮನೆ, ಮನ ಪರಿಸರ ಸ್ವಚ್ಛವಾಗಬೇಕು ಮನೆಯಲ್ಲಿ ಎಲ್ಲಿಂದರಲ್ಲಿ ಏನೆಂದರೆ ಅದು ಬಿದ್ದಿರಬಾರದು ಪಾಠ ಪ್ರವಚನಗಳು ನಡೆದಾಗ ಆಯುಧಗಳು ಅಪವಿತ್ರ ವಸ್ತುಗಳು ಇರಬಾರದು ಎಂದು ಹೇಳುತ್ತಾರೆ. ಯಾವ ಸಮಯದಲ್ಲಿ ಹೇಗೆ ವೇಷ ಧರಿಸಬೇಕು ಎಂದು ಮಹಾಭಾರತ ಹೇಳುತ್ತದೆ. ಮಹಾಲಕ್ಷ್ಮೀ ಹೇಳುತ್ತಾಳೆ, ಹೆಣ್ಣು ಮಕ್ಕಳು ಪುರುಷ ವೇಷ, ಪುರುಷರು ಸ್ತ್ರೀ ವೇಷ ಧರಿಸಿದರೆ ಅವರ ಬಳಿ ಲಕ್ಷ್ಮಿ ಇರುವುದಿಲ್ಲವೆಂದು ಹೇಳುತ್ತಾಳೆ. ಭಾಗವತವು ಹೇಳುವಂತೆ ಶಾಸ್ತ್ರದಲ್ಲಿ ಹೇಳಿದ ವೇಷವನ್ನು ಧರಿಸಬೇಕು ಎಂದು ಹೇಳುತ್ತಾರೆ. ಮಹಾಲಕ್ಷ್ಮಿ ಹೇಳುತ್ತಾಳೆ ಸದಾಚಾರ ಸದ್ಗುಣಗಳನ್ನು ಇದ್ದಲ್ಲಿ ಮಾತ್ರ ತಾನು ಇರುತ್ತೇನೆ ಎಂದು ಹೇಳುತ್ತಾಳೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ