ಶ್ರೀ ಸತ್ಯಾತ್ಮವಾಣಿ- 13: ಮಕ್ಕಳನ್ನು ಯಾವ ರೀತಿ ಪೋಷಿಸಬೇಕು

Upayuktha
0


ಹಾಲಕ್ಷ್ಮಿ ಕಟಾಕ್ಷಕ್ಕೆ ನಾರಾಯಣನ ಕಟಾಕ್ಷಕ್ಕೆ ಗುರಿಯಾಗಬೇಕಾದರೆ ಯಾವೆಲ್ಲ ಕೆಲಸಗಳನ್ನು ಮಾಡಬೇಕೆಂದು ಮಹಾಲಕ್ಷ್ಮಿಯು ತಿಳಿಸಿದಂತೆ. ಮನೆಯಲ್ಲಿ ತಂದೆ ತಾಯಿ ಮಕ್ಕಳಿಗೆ ಉಪವಾಸದಿಂದ ಇಟ್ಟು ತಾನು ಕೇವಲ ಬೇರೆ ಧರ್ಮಗಳನ್ನು ಮಾಡಬೇಕು ಎಂದು ತಿಳಿಯಬಾರದು, ಎಲ್ಲರೂ ನಿನ್ನವರೇ ನಿನ್ನವರೂ ಪರರೇ ಪರೋಪಕಾರ ಮಾಡಬೇಕೆಂದು ಹೊರಟಾಗ ಎಲ್ಲರಿಗೂ ಮಾಡಬೇಕು ಎಂಬಂತಿರಬೇಕು. ನಿನ್ನವರಿಗೆ ಮಾಡಬೇಕು ಎಂದು ಕೊಂಡರೆ ವಸುಧೈವ ಕುಟುಂಬಕ್ಕೆ ಎಂಬ ಅನುಸಂಧಾನ ಮಾಡಬೇಡ ಎಂದು ಮಹಾಲಕ್ಷ್ಮಿ ದೇವಿ ತಿಳಿಸಿಕೊಡುತ್ತಾಳೆ. 


ಪಾಲನೆ ಪೋಷಣೆ ಮಾಡುವುದು ಎಂದರೆ ಊಟಕ್ಕೆ ಹಾಕುವುದು ಆಶ್ರಯವನ್ನು ನೀಡುವುದು ಮಾತ್ರವಲ್ಲ ಜ್ಷಾನವನ್ನು ಕೊಡುವುದು ಕೂಡ ಪಾಲನೆ ಎನ್ನುತ್ತಾಳೆ. ಜ್ಞಾನವನ್ನು ವಿದ್ಯೆ, ಅದರಲ್ಲೂ ಬ್ರಹ್ಮ ವಿದ್ಯೆಯನ್ನು ಕೊಟ್ಟರೆ ಅವನು ಪ್ರತಿ ಜನ್ಮದಲ್ಲಿಯೂ ಮೋಕ್ಷದಲ್ಲೂ ಸುಖವಾಗಿ ಇರುವಂತೆ ಮಾಡುವ ಪಾಲನೆ ಪೋಷಣೆ, ಹೀಗೆ ಪಾಲನೆ ಮಾಡಬೇಕು ಎಂದು ಉಪನಿಷತ್ತಿನಲ್ಲಿ ಹೇಳುತ್ತಾರೆ. ಮಕ್ಕಳಿಗೆ ಸದಾಕಾಲ ಉಪವಾಸ ಇರಬಾರದು ಎಂಬ ವಿಚಾರ ಇರಬಾರದು ಮಹಾಭಾರದ ಆದೇಶ ಆದರೂ ಊಟ ಎಲ್ಲವೂ ವಿಹಿತವಾದ ನಿತ್ಯ ಕರ್ಮಗಳನ್ನು ಮಾಡಿದ ಮೇಲೆ ಮಾತ್ರ ಕೊಡಬೇಕು  ಸ್ನಾನ ಪೂಜಾದಿಗಳನ್ನು ಮಾಡದೇ ಆಹಾರ ಸ್ವೀಕರಿಸಬಾರದು ದೇವತೆಗಳು ಕೊಟ್ಟದ್ದು ಅವನಿಗೆ ಅರ್ಪಿಸಿ ನಾವು ಸ್ವೀಕರಿಸಿದಾಗ ಅದು ಕೃತಜ್ಞತೆ ಈ ಸಂಸ್ಕಾರ ಕಲಿಸುವುದು ಪೋಷಣೆ, ಭಿಕ್ಷುಕರು ಅತಿಥಿಗಳು ಬಂದಾಗ ಕಡಿಮೆ ತಿಂದು ದಾನ ಮಾಡುವ ಬುದ್ಧಿಯನ್ನು ಮಕ್ಕಳಲ್ಲಿ ಕಲಿಸಿದರೆ ಅದು ಪೋಷಣೆ. 


ರಂತಿದೇವನ ಕಥೆಯಲ್ಲಿ, ಅವನು ರಾಜನಾಗಿದ್ದ ಸರ್ವಸ್ವ ದಾನ ಮಾಡಿ 48 ದಿನ ಉಪವಾಸ ಮಾಡಿ ನಂತರ 48ನೇ ದಿನಕ್ಕೆ ಸಿಕ್ಕ ಆಹಾರ ನೈವೇದ್ಯ ಮಾಡಿದ್ದ ಆಹಾರವನ್ನು ಬೇಡಲು ಬಂದ ಎಲ್ಲರಿಗೂ ದಾನ ಮಾಡಿದ, ಉಳಿದ ನೀರನ್ನು ಕೂಡ ಕುಡಿಯದೆ ಬೇಡಿ ಬಂದ ಸ್ವಪಚನಿಗೆ ಕೊಟ್ಟ ರಂತಿದೇವ ಹೆಂಡತಿ ಮಕ್ಕಳಿಗೂ ಕೊಡಲು ಹೇಳಿದ, ಹೀಗೆ ತ್ಯಾಗ ದಾನ ಹೇಗೆ ಮಾಡಬೇಕು ಎಂಬುದನ್ನು ಕಲಿಸಿದ್ದ ತಾನು ಉಪವಾಸ ಇದ್ದು ಇತರರಿಗೆ ದಾನ ಮಡಬೇಕು ಎಂಬ ಭಾವನೆಯನ್ನು ಕಲಿಸಿದ್ದಾನೆ ಇದು ಪೋಷಣೆ, ಇಂತಹ ಮಹಾನುಭಾವರ ಸಜ್ಜನರ ಇತಿಹಾಸ ಕೇಳುತ್ತೇವೆ, ಜ್ಞಾನವನ್ನು ಕೊಡುವುದು, ದಾನ ಕೊಡುವುದು, ಎಲ್ಲರಿಗೂ ಪೋಷಣೆ ಮಾಡುತ್ತಾರೆಯೋ ಅವರ ಮೇಲೆ ತನ್ನ ಕೃಪಾಕಟಾಕ್ಷ ಇರುತ್ತದೆ ಎಂದು ಲಕ್ಷ್ಮಿ ದೇವಿ ಹೇಳುತ್ತಾಳೆ. ಇನ್ನೊಬ್ಬರ ಸಮೃದ್ಧಿ, ಬುದ್ದಿ, ಸಿದ್ಧಿಗಳನ್ನು ನೋಡಿ ಸಂತಸ ಪಡಬೇಕು ಅದರಿಂದ ಉನ್ನತಿ ಆಗುತ್ತದೆ.


ಅನುಶಾಸನ ಪರ್ವದಲ್ಲಿ ಕೇಳುತ್ತೇವೆ ಇನ್ನೊಬ್ಬರ ಮಕ್ಕಳನ್ನು ನೋಡಿ ಅಸೂಯೆ ಪಡುವವರಿಗೆ ಮಕ್ಕಳಾಗುವುದಿಲ್ಲ ಎಂದು ರುದ್ರ ದೇವರು ಹೇಳಿದ್ದಾರೆ. ಬೇರೆಯವರ ಸಂತೋಷ ಸಮೃದ್ಧಿಯನ್ನು ಕಂಡು ಸಂತಸ ಪಡಬೇಕು ನೈತಿಕ ಬೆಂಬಲ ಕೊಡಬೇಕು ಆದರೆ ಅಸೂಯೆ ಪಡಬಾರದು ಎಂದು ಮಹಾಭಾರತ ಹೇಳುತ್ತದೆ. ಶಕ್ತಿಯಿದ್ದಷ್ಟು ದಾನ ಮಾಡಬೇಕು ದಾನ ಮಾಡುವದಕ್ಕೆ ಸಂಗ್ರಹ ಮಾಡಬೇಕು. ದಾನವನ್ನು ಮಾಡಬೇಕು ಎಂದು ನ್ಯಾಯದಿಂದ ದುಡಿದು ಅದರಲ್ಲಿ ದಾನ ಮಾಡಬೇಕು, ಮಾಡುವ ದಾನ ಯೋಗ್ಯರಿಗೆ ಮಾಡಬೇಕು.


ಕಷ್ಟದಲ್ಲಿದ್ದವರನ್ನು ನೋಡಿ ಕರುಣೆ ಮಾಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಕೋಡುತ್ತಾನೆ ಎಂಬ ಭಯವಿರಬೇಕು. ಸಜ್ಜನರನ್ನು ಸನ್ಮಾರ್ಗದಲ್ಲಿ ತರಲು ಪ್ರಯತ್ನಿಸುತ್ತಿದ್ದರೆ ಅವನೇ ನನ್ನ ಭಕ್ತ. ಮನಸ್ಸು ಮಾತು ಕೃತಿ ಎಲ್ಲದರಲ್ಲೂ ಏಕ ರೂಪತೆ ಮಹಾತ್ಮರಲ್ಲಿ ಇರುತ್ತದೆ ಅವರನ್ನು ಕೊಂಡರೆ ನನಗೆ ಪ್ರೀತಿ ಎಂದು ಭಗವಂತ ಹೇಳುತ್ತಾನೆ. ಎಲ್ಲ ಸಜ್ಜನರು ಉತ್ತಮ ಗುಣವಿರುವವರಲ್ಲಿ ಒಳ್ಳೆಯದನ್ನು ಮಾಡುವ ಗುಣವಿರುತ್ತದೆ, ಶಾಸ್ತ್ರ ವಿಹಿತವಾಗಿ ಉತ್ತಮ ಗುಣಗಳಿಗೆ ನನ್ನ ಪ್ರೀತಿ ಎಂದು ಭಗವಂತನ ಮಾತು ಇದು ಮಹಾಭಾರತದ ಅಭಿಪ್ರಾಯ.



ಲಕ್ಷ್ಮಿ ದೇವಿ ಕೆಲವು ಆಚರಣೆಯನ್ನು ಹೇಳುತ್ತಾಳೆ. ನಿತ್ಯವೂ ಸ್ನಾನ ಮಡುವುದು ತೀರ್ಥ ಯಾತ್ರೆ ಭಗವಂತನ ತಿಲಕ ಧಾರಣೆ ಮಾಡುವುದ ಇವೆಲ್ಲವೂ ಪಾಪ ವಿಮೋಚನೆಯ ಕಾರಣಗಳು ಹಾಗೂ ಪ್ರಾಯಶ್ಚಿತ್ತದ ಪ್ರತೀಕ ನಮ್ಮ ಹಣೆಬರಹ ಕೆಟ್ಟದ್ದು ಇದ್ದರೆ ಗೋಪಿಚಂದನ ಅದನ್ನು ಬದಲಿಸುತ್ತದೆ ಎಂದು ವಾದಿರಾಜರು ಹೇಳುತ್ತಾರೆ. ಅಲಂಕಾರಗಳು ಶಾಸ್ತ್ರ ಸಮ್ಮತವಾದ ಭಗವಂತನಿಗೆ ಅರ್ಪಿತವಾದ ಗಂಧ ಪುಷ್ಟಗಳನ್ನು, ನೈವೇದ್ಯವನ್ನು ಕೂಡ ಸ್ವೀಕರಿಸಬೇಕು. ನಾನು ನನ್ನದು ಎಂದು ಮಾಡಿಕೊಳ್ಳುವ ಅಲಂಕಾರ ದುರಲಂಕಾರ, ಹೀಗಾಗಿ ಭಗವಂತನಿಗೆ ಅರ್ಪಿತವಾದದನ್ನು ಅಲಂಕಾರ ಮಾಡಿ ಕೊಳ್ಳಬೇಕು ಎಂದು ಭಾಗವತ ಹೇಳುತ್ತದೆ. ಅದನ್ನೆ ಮಹಾಲಕ್ಷ್ಮಿ ದೇವಿ ಹೇಳುತ್ತಾಳೆ ಇಂತಹ ಸದ್ಗುಣಗಳನ್ನು ಸದಾಚಾರ ನಮ್ಮಲ್ಲಿ ಬೆಳೆಸಿಕೊಳ್ಳ ಬೇಕು ಎಂದು ಲಕ್ಷ್ಮಿ ದೇವಿಯು ಹೇಳಿದ ಮಾತಿನಂತೆ ನಡೆಯಬೇಕು.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top