ಸಾಧನೆ, ಅವಕಾಶಗಳಿಗೆ ಆಕಾಶವೇ ಮಿತಿ

Upayuktha
0


ದನ್ನು ಕೇಳಿದರೆ ಆಶ್ಚರ್ಯವಾಗಬಹುದು. ಆದರೆ ಸಾಧನೆ ಮಾಡಲು ಬಯಸಿದ. ಸಾಧಕನಿಗೆ ಇದು ಅರ್ಥವಾಗುತ್ತದೆ. ನಮಗೆ ಸಾಧಿಸುವ ಛಲ ಇದ್ದರೆ ಎಲ್ಲವನ್ನೂ ದಾಟಿ ಬಲ್ಲೆವು.


ಕೆಲವೊಂದು ಸಾರೆ ನಮ್ಮ ಸಾಮರ್ಥ್ಯಕ್ಕೆ ನಾವೇ ಪರಿಧಿಯನ್ನು ಹಾಕಿ ಕೊಂದಿರುತ್ತೇವೆ. ಆಗೆಲ್ಲ "It is. not my cup of tea" ಎಂದುಕೊಳ್ಳುತ್ತೇವೆ. ನಾವು ಪ್ರತಿ ಸಾರೆ ಹೀಗೆ  ಅಂದುಕೊಳ್ಳುತ್ತಾ ಎಂದು ಹೋದರೆ ನಮ್ಮ ಜೀವನವು "Not our cup of tea" ಆಗಿ ಬಿಡುತ್ತದೆ.


ಜೀವನದಲ್ಲಿ ಸಾಧಿಸಬೇಕೆಂಬ ಛಲ ಇದ್ದು comfort zone ದಿಂದ ಹೊರಗೆ ಬಂದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ.


ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ವಿಧಿಯು ಕೂಡ ಸಹಾಯ ಮಾಡುತ್ತದೆ. ಕೇವಲ ಹಣೆ ಬರಹವನ್ನು ಹಳಿಯುತ್ತಾ ಇದ್ದರೆ ಸಾಧಿಸಲು ಸಾಧ್ಯವಿಲ್ಲ. ಇಲ್ಲಿ ಅಲೆಕ್ಸಾಂಡರನ ಕಥೆ ನೆನಪಾಗುತ್ತಿದೆ.


ಸಂಸ್ಕೃತದ ಮಹಾನ್ ವೈಯಾಕರಣಿ ಪಾಣಿನಿ ಬಾಲಕನಿದ್ದಾಗ ವಿದದ್ಯೆ ಕಲಿಯಲು ಗುರುಗಳ ಬಳಿಗೆ ಹೋಗುತ್ತಾನೆ. ಆದರೆ ಅವನ ಹಸ್ತದಲ್ಲಿ ವಿದ್ಯಾರೇಖೆ ಇಲ್ಲವೆಂದು ಗುರುಗಳು ವಿದ್ಯೆ ಕಲಿಸಲು ನಿರಾಕರಿಸಿದರು. ಆದರೆ ಛಲ ಬಿಡದ ಬಾಲಕ ಪಾಣಿನಿ ತನ್ನ ಹಸ್ತದ ಮೇಲೆ ಹರಿತವಾದ ಬೆಣಚು ಕಲ್ಲಿನಿಂದ ವಿದ್ಯಾರೇಖೆಯನ್ನು ಕೊರೆದು ಗುರುಗಳಿಗೆ ತೋರಿಸಿ, ಈಗ ವಿದ್ಯೆ ಕಲಿಸಿ ಎಂದು ಕೇಳಿಕೊಂಡನಂತೆ. ಅವನ ಅಪಾರ ಶ್ರದ್ಧೆಯನ್ನು ಗಮನಿಸಿದ ಗುರುಗಳು ಅವನಿಗೆ ವಿದ್ಯೆ ಕಲಿಸಿದರು. ನಂತರ ಆ ಬಾಲಕನೇ ಸಂಸ್ಕೃತದ ಮಹಾನ್‌ ವ್ಯಾಕರಣ ಪಂಡಿತನಾಗಿ ಜಗತ್ ಪ್ರಸಿದ್ಧನಾಗಿದ್ದು ನಮಗೆಲ್ಲ ತಿಳಿದಿದೆ.


ನಮ್ಮಲ್ಲಿ ಆತ್ಮವಿಶ್ವಾಸ ಇದ್ದರೆ ಹನುಮಂತನು ಲಂಕೆಗೆ ಹಾರಿದಂತೆ ಬಾನಿನೆತ್ತರ ಬೆಳೆಯಬಹುದು.


ಈ ದಿಕ್ಕಿನಲ್ಲಿ ಯತ್ನಿಸಿ ನೋಡಿ.


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top