ಬಳ್ಳಾರಿ:ಬಿಸಿಯಾದ ಆಹಾರ ಸೇವನೆ, ಮಕ್ಕಳು ಮನೆಗೆ ಬಂದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕೈತೊಳೆಯುವ ಪದ್ದತಿಯನ್ನು ರೂಡಿಯಾಗಿಸುವ ಮೂಲಕ ವಾಂತಿಭೇದಿ ಪ್ರಕರಣಗಳ ತಡೆಗೆ ಕೈಜೊಡಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ ಯಲ್ಲಾ ರಮೇಶಬಾಬು ತಿಳಿಸಿದರು.
ಸಂಡೂರು ತಾಲೂಕಿನ ಉಬ್ಬಲಗುಂಡಿ ಗ್ರಾಮದಲ್ಲಿ ಶಂಕೀತ ವಾಂತಿ-ಬೇಧಿ ಪ್ರಕರಣ ಹಿನ್ನಲೆ ಬೇಟಿ ನೀಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಮೇಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದ್ದು, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಮರಿಯಂಬಿ ವಿ.ಕೆ, ನೇತೃತ್ವದಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಮೂಲಕ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು,
ವೈದ್ಯಕೀಯ ತಂಡ ರಚಿಸಿ ಮನೆ ಮನೆ ಬೇಟಿ ಮೂಲಕ ಜನತೆಗೆ ಕುಡಿಯುವ ನೀರನ್ನು ಕನಿಷ್ಟ 20 ನಿಮಿಷ ಕುದಿಸಿ ಆರಿದ ನಂತರ ಸೋಸಿ ಕುಡಿಯಲು, ಬಿಸಿಯಾದ ಆಹಾರ ಸೇವನೆಗೆ, ತಯಾರಿಸಿದ ಆಹಾರ ಮುಚ್ಚಿಡಲು, ಊಟದ ಮೊದಲು ಹಾಗೂ ಶೌಚದ ನಂತರ ಸೋಪು ಮತ್ತು ನೀರಿನಿಂದ ಕೈತೊಳೆಯುವ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ, ಮುಂಜಾಗ್ರತೆಗಾಗಿ ಸ್ಥಳೀಯ ಗ್ರಾಮ ಪಂಚಾಯತ ಸಹಕಾರದೊಂದಿಗೆ ನೀರಿನ ಪೈಪ್‌ಲೈನ್ ಪರಿಶೀಲಿಸಿ ನಿಯಮಾನುಸಾರ ಕ್ಲೋರಿನೆಷನ್ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಯಾವುದೆ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗೇಶ, ತಾಲೂಕಾ ಆರೋಗ್ಯಾಧಿಕಾರಿ ಡಾ ಭಾರತ, ವೈದ್ಯಾಧಿಕಾರಿ ಡಾ ಹರೀಶ್, ಯು, ರಾಜಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಮು, ಕಾಲರಾ ನಿಯಂತ್ರಣ ತಂಡದ ಶಿವಕುಮಾರ್, ಮಹಮ್ಮದ, ಖಾಸಿಂ, ಉಮಾದೇವಿ, ಹಾಗೂ ಆರೋಗ್ಯ ಸಿಬ್ಬಂದಿಯರಾದ ಯರ್ರಿಸ್ವಾಮಿ, ರತ್ನಮ್ಮ, ಮೇಘನಾ, ತುಕಾರಾಂ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ