ಸೆಪ್ಟೆಂಬರ್ 1ರಂದು ಪುತ್ತೂರಿನಲ್ಲಿ ಕೃಷಿ ವಿಜ್ಞಾನ ಸಮಾವೇಶ

Upayuktha
0





ಪುತ್ತೂರು: 
ಪುತ್ತೂರಿನ ಗಿಡಗೆಳೆತನ ಸಂಘ ‘ಸಮೃದ್ಧಿ’ಯು 2024 ಸೆಪ್ಟೆಂಬರ್ 1, ರವಿವಾರದಂದು ದಿನಪೂರ್ತಿ ಪುತ್ತೂರು ತೆಂಕಿಲ ಬೈಪಾಸ್ ರಸ್ತೆಯಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ‘ಕೃಷಿ ವಿಜ್ಞಾನ ಸಮಾವೇಶ’ವನ್ನು ಆಯೋಜಿಸಿದೆ. ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮಕ್ಕೆ ಪುತ್ತೂರಿನ ಕಾಮಧೇನು ಆಗ್ರೋ ಸೇಲ್ಸ್  ಪ್ರಾಯೋಜಕತ್ವ ನೀಡಿದ್ದಾರೆ. ಕೃಷಿಕರೊಂದಿಗೆ ಮಾತು- ಮಂಥನ ಸಮಾವೇಶದ ಹೈಲೈಟ್ಸ್. ಪೂರ್ವಾಹ್ನ ಗಂ.9-30ಕ್ಕೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. 


ಇಂದೋರಿನ ಶ್ರೀ ಸಿದ್ಧಿ ಎಗ್ರಿ ಕೆಂ. ಪ್ರೈ  ಲಿ., ಇದರ ಪೆರುವೋಡಿ ನಾರಾಯಣ ಭಟ್ಟರು ‘ಸಮಗ್ರ ಬೆಳೆ ನಿರ್ವಹಣೆ’ಯ ಮಾಹಿತಿ ನೀಡಲಿದ್ದಾರೆ. ‘ನೀರಿನ ನಿರ್ವಹಣೆಯಲ್ಲಿ ಯಾಂತ್ರೀಕರಣ’ ವಿಷಯದ ಕುರಿತು ಕೃಷಿಕರಾದ ಅನಂತರಾಮ್‌ಕೃಷ್ಣ ಪಳ್ಳತಡ್ಕ, ಪುತ್ತೂರಿನ ಕಿಸಾನ್ ಆಗ್ರೋದ ಅಭಿಜಿತ್ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.


‘ಅಡಿಕೆಯಲ್ಲಿ ಪೋಷಕಾಂಶ ನಿರ್ವಹಣೆ’ ಕುರಿತು ವಿಟ್ಲ ಸಿ.ಪಿ.ಸಿ.ಆರ್.ಐ.ಯ ತೋಟಗಾರಿಕಾ ವಿಜ್ಞಾನಿ ಡಾ.ಭವಿಷ್ಯ ಮಾತನಾಡಲಿದ್ದಾರೆ. ಅಪರಾಹ್ನ ಅನುಭವಿ ಕೃಷಿಕರೊಂದಿಗೆ ಸಂವಾದವಿದೆ. ಯಶಸ್ವಿ ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿಕರಾದ ಟಿ.ಆರ್.ಸುರೇಶ್ಚಂದ್ರ ತೊಟ್ಟೆತ್ತೋಡಿ, ಬಾಳೆ ಕೃಷಿಕರಾದ ವಿಷ್ಣು ಭಟ್ ಸಾಂದೀಪನಿ, ಕಾಳುಮೆಣಸು ಕೃಷಿಕರಾದ ಅರವಿಂದ ಭಟ್ ಮುಳ್ಳಂಕೊಚ್ಚಿ, ಟ್ರೀ ಬೈಕ್ ಸಂಶೋಧಕರಾದ ಗಣಪತಿ ಭಟ್ ಕೋಮಳೆ, ಕಾಳುಮೆಣಸು ಕೃಷಿಕರಾದ ಅಜಿತ್  ಪ್ರಸಾದ್ ರೈ.. ಈ ಎಲ್ಲಾ ವಿಷಯ ತಜ್ಞರು ಮಾಹಿತಿಗಳನ್ನು ನೀಡಲಿದ್ದಾರೆ. ಈ ಸಮಾವೇಶಕ್ಕೆ ಕೃಷಿಕರೆಲ್ಲರಿಗೂ ಮುಕ್ತ ಪ್ರವೇಶವಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top