ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯಗೆ ವಿಶೇಷ ಸನ್ಮಾನ
ಕಲ್ಬುರ್ಗಿ: ಯಕ್ಷಗಾನದ ಬಡಗುತಿಟ್ಟು ಪ್ರಕಾರದಲ್ಲಿ ಗಮನಾರ್ಹ ಸಾಧನೆ ಮಾಡಿ ಯಕ್ಷಗಾನವನ್ನು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಜನಪ್ರಿಯಗೊಳಿಸಿದ ಕುಂದಾಪುರ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಖ್ಯಾತ ಭಾಗವತರಾದ ರಾಘವೇಂದ್ರ ಮಯ್ಯ ಅವರನ್ನು ಕಲ್ಬುರ್ಗಿಯಲ್ಲಿ ಆಗಸ್ಟ್ 10ರಂದು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಖ್ಯಾತ ಉದ್ಯಮಿಗಳಾದ ಮಹಾದೇವ ಗುತ್ತೇದಾರ್ ಶಾಲು ಹಾರ ಕಾಣಿಕೆ ನೀಡಿ ಗೌರವಿಸಿ ನಾಡಿನ ಮಹೋನ್ನತ ಸಂಸ್ಕೃತಿಯ ಭಾಗ ಯಕ್ಷಗಾನದ ಪ್ರಸಾರ ಪ್ರಚಾರ ಕಾರ್ಯವನ್ನು ಮಾಡುತ್ತಿರುವ ರಾಘವೇಂದ್ರ ಮಯ್ಯರಿಗೆ ಶುಭಕೋರಿ ಕಲ್ಬುರ್ಗಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಆಗಮಿಸಿದ ರಾಘವೇಂದ್ರ ಮಯ್ಯ ಮತ್ತು ಅವರ ಕಲಾವಿದರ ಬಳಗವು ಆಗಮಿಸಿರುವುದು ಸಂತಸದ ಹಾಗೂ ಸ್ತುತ್ಯಾರ್ಹ ಸಂಗತಿ ಎಂದರು.
ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ, ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡವು ತನ್ನ 31ನೇ ವರ್ಷದ ಯಕ್ಷ ಪ್ರಸಾರವನ್ನು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಮಾಡಿ ಮಹಾರಾಷ್ಟ್ರ ಗೋವಾ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಕರಾವಳಿಯ ಅಪೂರ್ವ ಕಲಾ ವೈಭವವನ್ನು ಜನಪ್ರಿಯಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ಮತ್ತು ಸಾಯಿನಾಥ ಎಂ ಗುತ್ತೇದಾರ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ