ಸ್ಮಾರ್ಟ್ ಕ್ಲಾಸ್‌ಗಳಿಂದ ಉಪಯೋಗವಿಲ್ಲ,ಶಿಕ್ಷಕರು ಸರಿಯಾಗಿ ಪಾಠ ಮಾಡಿದರೆ ಸಾಕು: ಬಳ್ಳಾರಿ ಜಿಲ್ಲಾಧಿಕಾರಿ ದಿವಾಕರ್

Upayuktha
0

 


ಬಳ್ಳಾರಿ: ತೋರಣಗಲ್ಲಿನ ಜಿಂದಾಲ್‌ನಲ್ಲಿ ಆಯೋಜಿಸಿದ್ದ ಎಜುಕಾನ್ 2024 ಕಾರ್ಯಕ್ರಮವನ್ನು ಉದ್ದೇಶೀಸಿ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಅವರು ಮಾತನಾಡುತ್ತಾ ಶಿಕ್ಷಕರಿಗೆ  ಏನು ಭೋಧನೆ ಮಾಡಬೇಕು ಎನ್ನುವುದಕ್ಕಿಂತ, ಏನು ಮಾಡಬಾರದು ಎನ್ನುವ ನೈತಿಕತೆ ತುಂಬುವುದು ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.  ಜಿಲ್ಲೆಯ ಯೋಜನೆಗಳನ್ನು ರೂಪಿಸಿ ಎಂದರೆ ಹೊಸ ಕಟ್ಟಡಗಳನ್ನೇ ದುರಸ್ಥಿ ಮಾಡಿಸಿ ಎಂದು ಹೇಳುತ್ತಾರೆ. ಶೌಚಾಲಯ ಬಳಸಲ್ಲ. ರಾತ್ರಿ ಬಾರ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸಿಸಿ ಕೆಮೆರಾ ಅಳವಡಿಕೆ ಬೇಕಿದೆ. ಅನಾವಶ್ಯಕವಾಗಿ ಕೊಠಡಿಗಳ ನಿರ್ಮಾಣ ಆಗುತ್ತಿವೆ. ಇರುವ ಸೋರುವ ಕೊಠಡಿಗಳ ಮೇಲೆ ಕೇವಲ ಸ್ಟೀಲ್ ಶೀಟ್ ಹಾಕಿದರೆ 25 ವರ್ಷ ಬಾಳಿಕೆ ಬರಲಿದೆ ಆ ಕೆಲಸ ಆಗಬೇಕು. ಜೊತೆಗೆ ಎಲ್ಲ ಶಾಲೆಗಳಿಗೆ ಶಿಕ್ಷಕರ ಕೊರತೆ ಇಲ್ಲದಂತೆ ನೀಡಲಿ. ಸ್ಮಾರ್ಟ್ ಕ್ಲಾಸ್ಗ್ ಗಳಿಂದ ಉಪಯೋಗವಿಲ್ಲ. ಹೇಳುವ ಶಿಕ್ಷಕರು ಸರಿಯಾಗಿ ಪಾಠ ಮಾಡಿದರೆ ಸಾಕು ಎಂದರು. ಅವರು ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.


ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಜವಾಬ್ದಾರಿಯಿಂದ ಸರ್ಕಾರಕ್ಕೆ ಸಹಕಾರಿಯಾಗಿದೆ ಉನಗನತ ಶಿಕ್ಷಣ ಸರ್ಕಾರಿ ವ್ಯವಸ್ಥೆ ಉತ್ತಮವಾಗಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಡ, ಪಿಯು ಕಾಲೇಜುಗಳು ಮಾತ್ರ ಖಾಸಗಿ ವ್ಯವಸ್ಥೆ ಬೇಕು ಎನ್ನುವಂತಾಗಿದೆ ಇದು ಹೋಗಬೇಕಿದೆ.


ಕಲ್ಯಾಣ ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ಕಡಿಮೆ ಇದೆ. ಇಲ್ಲಿನ ಕೊರತೆಯನ್ನು ನೀಗಿಸಬೇಕಿದೆ. ನಮ್ಮ ಜಿಲ್ಲೆಯಲ್ಲಿ 1300 ಶಾಲೆಗಳು ಇವೆ  ಅವುಗಳಲ್ಲಿ ಖಾಸಗಿಯವೇ ಹೆಚ್ಚಾಗುತ್ತಿವೆಂದರು.ಇಲ್ಲಿನ ಮಕ್ಕಳಲ್ಲಿ ಬುದ್ದಿಶಕ್ತಿ ಕಡಿಮೆ ಇಲ್ಲ. ಆದರೆ ಇಂಗ್ಲೀಷ್ ಭಾಷೆಯದ್ದು ಸಮಸ್ಯೆ ಇದೆ. ಗಣಿತ ಮತ್ತು ಹಿಮನದಿ ಭಾಷೆ ಭೋಧನೆಗೆ ಉತ್ತಮ ಶಿಕ್ಷಕರು ತಾಲೂಕಿನ ಗಡಿ ಭಾಗದ ಶಾಲೆಗಳಿಗೆ ದೊರೆಯುತ್ತಿಲ್ಲ ಎಂದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


ಜೆಎಸ್ ಡಬ್ಲು ನ ಸಿಈಓ ಅಶ್ವಿನ್ ಸಕ್ಸೇನ ಮಾತನಾಡಿದರು. ಶಿಕ್ಷಣ ಇಲಾಖೆಯ ಉಪ ಆಯುಕ್ತ ಆಕಾಶ್ ಶಂಕರ್, ಬಳ್ಳಾರಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಎಸ್ಪಿ ಡಾ. ಶೋಭಾರಾಣಿ, ವಡ್ಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆ.ಎಂ.ನಿಂಗಮ್ಮ ಮೊದಲಾದವರು ಇದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top