ಅಂಗನವಾಡಿ ಕಾರ್ಯಕರ್ತೆಯರ ಐದನೇ ಹಂತದ ತರಬೇತಿ ಕಾರ್ಯಾಗಾರ

Upayuktha
0


ಬಳ್ಳಾರಿ: ಅಂಗನವಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಬುನಾದಿ ಶಿಕ್ಷಣಕ್ಕೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಡಿ ತರಬೇತಿ ವಿಷಯಗಳು ಪೂರಕವಾಗಿದೆಮಹಾನಗರ ಪಾಲಿಕೆ  ಉಪಮೇಯರ್  ಸುಕುಮ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಬಳ್ಳಾರಿ, ಹಾಗೂ ಕಲಿಕೆ ಟಾಟಾ ಟ್ರಸ್ಟ್, ಬೆಂಗಳೂರು, ಇವರ ಸಹಯೋಗದ *ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಡಿ* ಈ ದಿನ ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಬ್ರೂಸ್ ಪೇಟೆ ಮತ್ತು ಕೌಲ್ ಬಜಾರ್ ವಲಯಗಳ ಅಂಗನವಾಡಿ ಕಾರ್ಯಕರ್ತೆಯರ ಐದನೇ ಹಂತದ ತರಬೇತಿ ಕಾರ್ಯಗಾರವನ್ನು ಬಿಜಾಪುರ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು. 


ಸದರಿ ಕಾರ್ಯಗಾರಕ್ಕೆ  ಸಸಿಗೆ ನೀರಿದೆಯುವುದರ ಮೂಲಕ  ಬಳ್ಳಾರಿ ಮಹಾನಗರ ಪಾಲಿಕೆಯ ಉಪಮೇಯರ್  ಸುಕುಂ ಮಾತನಾಡುತ್ತ ಇತ್ತೀಚಿಗೆ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಒಳಗೊಂಡಂತೆ ಪೌಷ್ಠಿಕ ಆಹಾರ ಮತ್ತು ಸ್ವಚ್ಛತೆ ಆರೋಗ್ಯದ ಅರಿವು ವಿವಿಧ ರೀತಿಯ ಸೇವೆಗಳು ಅನೇಕ ಫಲಾನುಭವಿಗಳಿಗೆ ಅವಶ್ಯಕವಾಗಿವೆ ಮತ್ತು ಈ ತರಬೇತಿ ಒದಗಿಸುವ ವಿಷಯಗಳು ಮಕ್ಕಳ ಬುನಾದಿ ಶಿಕ್ಷಣಕ್ಕೆ ದಾರಿದೀಪ ಆಗುತ್ತದೆ ಎಂದು ತಿಳಿಸುತ್ತಾ ತರಬೇತಿಗೆ ಶುಭ ಹಾರೈಸಿದರು.ಸದರಿ ತರಬೇತಿ  ಕಾರ್ಯಗಾರದ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವಾರ್ಡಿನ ಸದಸ್ಯರಾದ ಶಶಿಕಲಾ ಜಗನ್ನಾಥ್ ಮೇಡಂ ಅವರು ತರಬೇತಿಯ ವಿಷಯಗಳ ಮತ್ತು ವೇಳಾಪಟ್ಟಿ ಅನುಸಾರವಾಗಿ ಪ್ರತಿದಿನ ನಡೆಯುವ ಚಟುವಟಿಕೆಗಳು ನಮ್ಮ ವಾರ್ಡಿನ ವ್ಯಾಪ್ತಿಯ ಅಂಗನವಾಡಿ ಶಿಕ್ಷಕರು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇನೆ ಮತ್ತು ಸದರಿ ಕಲಿಕಾ ವಿಧಾನವು ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸುತ್ತಾ ತರಬೇತಿಯ ಬಾಗಾರ್ತಿಗಳಿಗೆ ತರಬೇತಿ ಕೈಪಿಡಿಗಳನ್ನು ವಿತರಿಸುವುದರೊಂದಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತಿ ಕಲಿಕೆ ಟಾಟಾ  ಟ್ರಸ್ಟಿನ ಜಿಲ್ಲಾ ವ್ಯವಸ್ಥಾಪಕರು ಜಗನ್ನಾಥ್ ಅವರು  ಪ್ರಾಸ್ತವಿಕ ನುಡಿಗಳನ್ನು ಮಾತನಾಡುತ್ತಾ ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಲ್ಲಿ ವಿವಿಧ ಹಂತದ ತರಬೇತಿ ವಿಷಯಗಳ ಕುರಿತಂತೆ ಮತ್ತು ಕಾರ್ಯಕ್ರಮದ ಪ್ರಸ್ತುತ ಬೆಳವಣಿಗೆ ತಿಳಿಸಿ  ಈ ತರಬೇತಿಯ ವಿಷಯಗಳಾಗಿ ಆರಂಭಿಕ ಸಾಕ್ಷರತೆ (ಮಾದರಿ ಓದುವುದು ಮತ್ತು ಬರೆಯುವುದು)  ಭೌತಿಕ ಚಟುವಟಿಕೆಗಳು ಮತ್ತು ದೈಹಿಕ ಆಟಗಳು ಸಂಬAಧಿಸಿದAತೆ ಈ ತರಬೇತಿ ನೀಡಲಿದೆ ಎಂದು ತಿಳಿಸಿ ತರಬೇತಿಗೆ ಆಗಮಿಸಿದಂತ ಗಣ್ಯರನ್ನು ಸ್ವಾಗತಿಸಿದರು.


ವಲಯದ ತರಬೇತುದಾರರಾದ ಶ್ರೀಮತಿ ಮಹೇಶ್ವರಿ ಬೀಳಗಿ ಹಿರಿಯ ಮೇಲ್ವಿಚಾರಕಿ ಮಾತನಾಡುತ್ತಾ ವಲಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾ ಪೋಷಕರಿಗೆ ಕೇಂದ್ರದಲ್ಲಿ ಆಯೋಜಿಸುತ್ತಿರುವ ಚಟುವಟಿಕೆಗಳ ಕುರಿತಂತೆ *ಸಮುದಾಯ ಚಿತ್ತ ಅಂಗನವಾಡಿ ಸಭೆಗಳ ಮೂಲಕ ವಿವರಿಸಲಾಗಿದೆ ಪ್ರತಿ ಕೇಂದ್ರದ ಮಕ್ಕಳ ಪೋಷಕರ ವಾಟ್ಸಪ್ ಗ್ರೂಪ್ ರಚನೆ  ಮಾಡಿ ಪ್ರತಿದಿನ ಅಂಗನವಾಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ ಸದರಿ ವಿಷಯಕ್ಕೆ ಪೋಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದರು. 


ಸದರಿ ತರಬೇತಿಗಳ ವ್ಯವಸ್ಥಿತ ಅನುಷ್ಠಾನಕ್ಕೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಬಳ್ಳಾರಿ ನಗರ  ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉತ್ತಮ ರೀತಿಯ ಸಹಕಾರವನ್ನು ನೀಡುವುದರೊಂದಿಗೆ ವ್ಯವಸ್ಥಿತ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಕೌಲ್ ಬಜಾರ್ ವಲಯದ ಮೇಲ್ವಿಚಾರಕರಾದ  ಸಾಯಿ ಪ್ರಭ ಅವರು ಸ್ಮರಿಸಿದರು. ವೀರಮ್ಮ ಹಿರೇಮಠ ಅವರು ಪ್ರಾರ್ಥನೆಯನ್ನು ಹಾಗೂ ಟಿ.ಇಂದಿರಾ ವೇದಿಕೆ ಕಾರ್ಯಕ್ರಮಕ್ಕೆ  ವಂದನೆಗಳನ್ನು ಕೋರಿದರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top