ನಿಟ್ಟೆಯಲ್ಲಿ ಎಂಬಿಎ 27ನೇ ಬ್ಯಾಚ್ ಉದ್ಘಾಟನಾ ಸಮಾರಂಭ

Upayuktha
0


ಮಂಗಳೂರು: 
ದೇಶದ ಪ್ರಗತಿಯಲ್ಲಿ ಉದ್ಧಿಮೆಶಾಹಿತ್ವ ಅವಿನಾಭಾವವಾಗಿ ಸೇರಿಕೊಂಡಿದೆ. ಉದ್ಯಮಾಡಳಿತ ಅಧ್ಯಯನ, ಸಂಶೋಧನೆ ಉದ್ಧಿಮೆಶಾಹಿತ್ವಕ್ಕೆ ಪೂರಕವಾಗಿದೆ. ಉದ್ಯಮಾಡಳಿತ ಶಿಸ್ತು ಉದ್ಧಿಮೆಶಾಹಿತ್ವ ಚಿಂತನೆ ಮತ್ತು ಅನುಷ್ಠಾನದಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ (ಆಡಳಿತ)  ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.


ಅವರು ನಿಟ್ಟೆಯ ಪ್ರತಿಷ್ಠಿತ ಜಸ್ಟೀಸ್ ಕೆ. ಎಸ್ ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ ನೂತನ ಎಂ.ಬಿ.ಎ 27ನೆಯ ಬ್ಯಾಚ್ ಓರಿಯಂಟೇಶನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾ ಡುತ್ತಿದ್ದರು. ಎಂ.ಬಿ.ಎ ವಿದ್ಯಾರ್ಥಿಗಳು ಕಲಿಕೆ, ಶಿಸ್ತು, ಮೌಲ್ಯಗಳಿಗೆ ವಿಶೇಷ ಮಹತ್ವ ನೀಡಬೇಕು ಎಂದು ಕರೆನೀಡಿದರು. 


ಸಮಾರಂಭದ ಅತಿಥಿಗಳೂ ನಿಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಸ್ಥಾಪಕ ನಿರ್ದೇಶಕರೂ ನಿಟ್ಟೆ ಪರಿಗಣಿತ ವಿವಿಯ ಕುಲಪತಿ ಪ್ರೊ. ಡಾ| ಎಂ. ಎಸ್. ಮೂಡಿತ್ತಾಯ ಅವರು ಮಾತನಾಡುತ್ತ, ಎಂ.ಬಿ.ಎ ವಿದ್ಯಾರ್ಥಿಗಳು ಸಂಸ್ಥೆ ಒದಗಿಸುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಕಾರ್ಪೊರೇಟ್‌ ಮುಖಂಡರಾಗಿ ಸಂಸ್ಥೆಗೆ ಕೀರ್ತಿ ತರಬೇಕು ಎಂದರು. 


ಎಂ.ಬಿ.ಎ ಅನ್ನುವುದು ಒಂದು ಉತ್ತಮ ಮನೋಧರ್ಮ ಅದನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಎಂ.ಬಿ.ಎ ಶಿಕ್ಷಣವನ್ನು ಯಶಸ್ವಿಗೊಳಿಸ ಬೇಕು ಎಂದು ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ನಿಟ್ಟೆ ವಿ.ವಿ.ಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಪ್ರೊ. ಡಾ| ಗೋಪಾಲ ಮುಗೇರಾಯ ಅವರು ಮಾತನಾಡುತ್ತಾ, ಉತ್ತಮ ಉದ್ಯೋಗವನ್ನು ಪಡೆಯಲು ಕೌಶಲ, ಕಠಿಣ ಪರಿಶ್ರಮ, ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿಗಳೂ ಸಂಸ್ಥೆಯ ಹಳೆ ವಿದ್ಯಾರ್ಥಿ (2005 -2007 ಎಂ.ಬಿ.ಎ ಬ್ಯಾಚ್), ಫೆಡರಲ್ ಬ್ಯಾಂಕ್ ನ ಸಹಾಯಕ ಉಪಾಧ್ಯಕ್ಷ ಅಜಯ ಕಾಮತ್ ಕೆ ಮಾತನಾಡುತ್ತಾ, ಸಂಸ್ಥೆ ಅತ್ಯುತ್ತಮ ವ್ಯವಸ್ಥೆ, ಉನ್ನತ ದರ್ಜೆಯ ಪರಿಣಿತ ಪ್ರಾದ್ಯಾಪಕರನ್ನು ಹೊಂದಿದೆ. ಎಂದು ತಿಳಿಸಿದರು.


ಇಲ್ಲಿನ ಬೋಧನೆ, ಸಂಶೋಧನೆ, ಕೌಶಲ ಮೈಗೂಡಿಸುವ ಕಲೆ ನಿಜಕ್ಕೂ ಶ್ಲಾಘನೀಯ ಎಂದರು. ಸಂಸ್ಥೆಯ ಪ್ರೊಫೆಸರ್ ಎಮಿರಿಟಸ್ ಡಾ| ಏನ್. ಎಸ್. ಶೆಟ್ಟಿ ಶುಭ ಹಾರೈಸಿದರು. ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ| ಸುಧೀರ್ ಎಂ ಸ್ವಾಗತಿಸಿದರು. ದ್ವಿತೀಯ ಎಂ.ಬಿ.ಎ ವಿದ್ಯಾರ್ಥಿನಿ ಕು| ವಂದನ ತಂತ್ರಿ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಡಾ| ಸುಧೀರ್ ರಾಜ್ ಕೆ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಕಾರ್ತಿಕ್ ಕುದ್ರೋಳಿ ವಂದಿಸಿದರು. ಪ್ರಥಮ ವರ್ಷದ ಎಲ್ಲ ಎಂ.ಬಿ.ಎ ವಿದ್ಯಾರ್ಥಿಗಳು ಮತ್ತು ಅವರ ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತದನಂತರ ಒಂದು ವಾರದ ಓರಿಯಂಟೇಶನ್ ಕಾರ್ಯಕ್ರಮವನ್ನು ನೂತನ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top