ಶ್ರೀ ಭಾರತಿ ವಿದ್ಯಾ ಪೀಠದಲ್ಲಿ ಮಾತಾಪಿತೃಪೂಜೆ

Upayuktha
0

ಮುಜುಂಗಾವು: ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವಿನಲ್ಲಿ ರಾಮಾಯಣ ಮಾಸಾಚರಣೆಯ ಶುಭಾವಸರದಲ್ಲಿ ಮಾತಾಪಿತೃಪೂಜೆ ನೆರವೇರಿತು. ಬೆಳಿಗ್ಗೆ 9:30ಗೆ ಶ್ರೀ ರಾಮನ ವಿಗ್ರಹದ ಆಗಮನದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರ ನೇತೃತ್ವದಲ್ಲಿ ಮಾತಾ ಪಿತೃ ಪೂಜೆ, ಮಾತೃಭೋಜನ ನೆರವೇರಿತು.


ಈ ಶುಭ ಸಂದರ್ಭದಲ್ಲಿ ಮಾತಾ ಪಿತೃ ಪೂಜೆಯ ಮಹತ್ವವನ್ನು  ಹಾಗೂ ರಾಮಾಯಣದ ಜೀವನ ಮೌಲ್ಯಗಳು ರಾಮಕಥಾ ಸತ್ಸಂಗದ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ, ಆಡಳಿತದ ಸೇವಾಸಮಿತಿ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಮಧ್ಯಾಹ್ನ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top