ಮಂಗಳೂರು: ನೆಕ್ಸಸ್ ಸೆಲೆಕ್ಟ್ ಮಾಲ್ಸ್ ತನ್ನ ಉದ್ಘಾಟನಾ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ, ಬಹುನಿರೀಕ್ಷಿತ ಟೆಕ್ಸ್ಟಿನೇಷನ್ 2.0 ಅನ್ನು ವಿಸ್ತøತ ರೂಪದಲ್ಲಿ ಘೋಷಿಸಿದೆ. ಟೆಕ್ಸ್ಟಿನೇಷನ್ ಎರಡನೇ ಆವೃತ್ತಿಯು ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ ನಡೆಯಲಿದ್ದು, ಪಾಲುದಾರಿಕೆ ಬ್ರಾಂಡ್‍ಗಳಲ್ಲಿ ಸಂಪೂರ್ಣ ಶ್ರೇಣಿಯ ಗ್ಯಾಜೆಟ್‍ಗಳು ಹಾಗೂ ತಂತ್ರಜ್ಞಾನ ಲಭ್ಯವಿರುತ್ತದೆ.
ಇನ್ನು ಪರ್ಸನಲ್ ಟೆಕ್ ಅಥವಾ ಗೃಹೋಪಯೋಗಿ ವಸ್ತುಗಳನ್ನು ಅಪ್‍ಗ್ರೇಡ್ ಮಾಡಲು ಬಯಸುವ ಎಲ್ಲರಿಗೂ ಇದು ಅವಕಾಶ ನೀಡುತ್ತದೆ. ಮಂಗಳೂರಿನ ನೆಕ್ಸಸ್ ಮಾಲ್‍ನ ಫಿಜಾದಲ್ಲಿನ ಟೆಕ್ಸ್ಟಿನೇಷನ್ 30,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಶಾಪಿಂಗ್‍ಗೆ ಖಚಿತವಾದ ಲ್ಯಾಪ್‍ಟಾಪ್ ಬ್ಯಾಗ್, 50,000 ರೂ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಖಚಿತ ಬೆಳ್ಳಿ ನಾಣ್ಯ ಮತ್ತು 90,000 ರೂ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿದೆ ಖಚಿತ ಚಿನ್ನದ ನಾಣ್ಯದ ಉಡುಗೊರೆ ನೀಡುತ್ತದೆ ಎಂದು ಮಾರುಕಟ್ಟೆ ಅಧಿಕಾರಿ ನಿಶಾಂಕ್ ಜೋಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಿಲಯನ್ಸ್ ಡಿಜಿಟಲ್, ಹರ್ಷ, ಮೇಪಲ್, ಪೂರ್ವಿಕಾ, ಸ್ಯಾಮ್‍ಸಂಗ್ ಮತ್ತು ಸಂಗೀತಾ ಮೊಬೈಲ್ಸ್ ಟೆಕ್ಸ್ಟಿನೇಷನ್‍ನ ಭಾಗವಾಗಿರುವ ಬ್ರಾಂಡ್‍ಳಲ್ಲಿ ಸೇರಿವೆ. ಆಗಸ್ಟ್ 15 ರಂದು ವಿಶೇಷ ಫ್ರೀಡಂ ಸೇಲ್ ಕೊಡುಗೆಯಲ್ಲಿ ಆಯ್ದ ಬ್ರಾಂಡ್ ಗಳಲ್ಲಿ ಅದ್ಭುತ ಡೀಲ್ ಇರಲಿದೆ. ಎಲೆಕ್ಟ್ರಾನಿಕ್ಸ್ ಗಮನಾರ್ಹ ಉಳಿತಾಯ ಮತ್ತು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ