ಉಡುಪಿ-ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ) ವತಿಯಿಂದ ಮಕ್ಕಳ ಸಾಹಿತ್ಯಿಕ-ಸಾಂಸ್ಕೃತಿಕ ಉತ್ಸವ 'ಮಕ್ಕಳ ಧ್ವನಿ - 2024' ಕಾರ್ಯಕ್ರಮ ಸೆಪ್ಟಂಬರ್ 14, ಶನಿವಾರ ಸುರತ್ಕಲ್‌ನ ಅನುದಾನಿತ ವಿದ್ಯಾದಾದಾಯಿನಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಅದೇ ಸಂದರ್ಭದಲ್ಲಿ ಮಕ್ಕಳೇ ಬರೆದ ಉತ್ತಮ ಕನ್ನಡ ಕವನ ಸಂಕಲನಗಳಿಗೆ ಗೌರವಧನ ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಾಥಮಿಕ ತರಗತಿಯಿಂದ ಪದವಿಪೂರ್ವ ತರಗತಿಯವರೆಗಿನ ವಿದ್ಯಾರ್ಥಿಗಳು 2023ನೇ ವರ್ಷದಲ್ಲಿ ಪ್ರಕಟಪಡಿಸಿದ ಕವನ ಸಂಕಲನದ ಒಂದು ಪ್ರತಿಯನ್ನು 25.08.204ರ ಮೊದಲು ಕಳುಹಿಸಿ ಕೊಡಬಹುದು.
ಇದೇ ರೀತಿ ಹಿರಿಯರು ಮಕ್ಕಳಿಗಾಗಿ ಬರೆದು 2023ರಲ್ಲಿ ಪ್ರಕಟಪಡಿಸಿದ ಯಾವುದೇ ಪ್ರಕಾರದ ಕೃತಿಗಳ ಸ್ಪರ್ಧೆಗಾಗಿ ಕೃತಿಗಳನ್ನು ಅಹ್ವಾನಿಸಲಾಗಿದೆ. ಹಿರಿಯರು ತಮ್ಮ ಪುಸ್ತಕದ ನಾಲ್ಕು ಪ್ರತಿಗಳನ್ನು ದಿನಾಂಕ 25.08.2024ರ ಒಳಗೆ ಕಳುಹಿಸಿ ಕೊಡಬಹುದು.
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ:
ರಾಮಕೃಷ್ಣ ಭಟ್
ಅಧ್ಯಕ್ಷರು, ಮಕ್ಕಳ ಸಾಹಿತ್ಯ ಸಂಗಮ
ಬೆಳಾಲು ಅಂಚೆ
ಬೆಳ್ತಂಗಡಿ ತಾಲೂಕು – 574240
ದಕ್ಷಿಣ ಕನ್ನಡ ಜಿಲ್ಲೆ
ಸಂಪರ್ಕ: 9008978934
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ