ಉಜಿರೆ:‘ನೋ ಯುವರ್ ಅಕೌಂಟ್ಸ್’ ವಿಶೇಷ ಮಾಹಿತಿ ಕಾರ್ಯಕ್ರಮ

Upayuktha
0


ಉಜಿರೆ: 
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳ ವತಿಯಿಂದ ‘ನೋ ಯುವರ್ ಅಕೌಂಟ್ಸ್’ (Know Your Accounts) ವಿಶೇಷ ಮಾಹಿತಿ ಕಾರ್ಯಕ್ರಮ  ಜರಗಿತು.


ಕಾಲೇಜಿನ ಅಕೌಂಟ್ಸ್ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.  ಬ್ಯಾಂಕ್ ಖಾತೆ ಬಳಕೆ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ಅವರು ಮಾಹಿತಿ ನೀಡಿದರು. “ಬ್ಯಾಂಕ್ ವ್ಯವಹಾರಗಳ ಬಗ್ಗೆ ಎಲ್ಲರಲ್ಲೂ ಸಾಮಾನ್ಯ ಜ್ಞಾನ ಇರಲೇಬೇಕು. ಇಲ್ಲವಾದರೆ ಅದರಿಂದ ಉಂಟಾಗುವ ಸಮಸ್ಯೆಗಳು ಹಲವಾರು” ಎಂದು ಅವರು ಕಿವಿಮಾತು ಹೇಳಿದರು.


“ನೇರ ನಗದು ವ್ಯವಹಾರಕ್ಕಿಂತ ಮೊಬೈಲ್ ಮೂಲಕದ (ಆನ್ಲೈನ್) ಅಥವಾ ಚೆಕ್ ಮೂಲಕದ ಹಣದ ವ್ಯವಹಾರ ಉತ್ತಮ. ಯಾಕೆಂದರೆ ಇದರಲ್ಲಿ ಕಪ್ಪು ಹಣ ನಿರ್ಮಾಣವಾಗುವ ಸಾಧ್ಯತೆ ಕಡಿಮೆ ಇದೆ” ಎಂದು ಅವರು ಸಲಹೆ ನೀಡಿದರು. “ಹಣವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುವುದೇ ನಿಜವಾದ ಅಕೌಂಟೆಬಿಲಿಟಿ” ಎಂದರು. 


ಬ್ಯಾಂಕಿಂಗ್ ವಿಚಾರಗಳಾದ ಜರ್ನಲ್ ಎಂಟ್ರಿ, ಅಸೆಟ್, ಲಯೇಬಿಲಿಟಿ ಇತ್ಯಾದಿ ಕುರಿತು ಮಾಹಿತಿ ನೀಡಿದರು.  ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪ ಆರ್.ಪಿ. ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿ ಯರಾದ ಅನುಷ ಬಿ.ಕೆ. ಹಾಗೂ ಕವನ ಕಾರ್ಯಕ್ರಮ ನಿರೂಪಿಸಿದರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top