ಕೃಷ್ಣಂ ವಂದೇ ಜಗದ್ಗುರುಂ...

Upayuktha
2 minute read
0


ಶ್ರೀಕೃಷ್ಣ ತನ್ನಲ್ಲಿ ಬ್ರಹ್ಮಾಂಡ ಶಕ್ತಿ ಇದ್ದೂ, ತಾನು ಭಗವಂತ ಎಂದು ಗೊತ್ತಿದ್ದೂ ಬಾಲ್ಯದಿಂದ ಆರಂಭಿಸಿ ತನ್ನ ದೇಹ ತ್ಯಾಗ ಮಾಡುವ ಕೊನೆಯ ಕ್ಷಣದವರೆಗೂ ಅನಗತ್ಯ ವಾಗಿ ಎಂದೂ ತನ್ನ ಬ್ರಹ್ಮಾಂಡ ಶಕ್ತಿಯನ್ನು ಬಳಸಲಿಲ್ಲ...!!


ಕಾಳಿಂಗ ಮರ್ದನವೋ,  ಗೋವರ್ಧನ ಗಿರಿ ಎತ್ತುವ ಸಂಧರ್ಭವೋ, ಕಂಸ ಚಾಣೂರ ಮರ್ಧನವೋ‌.. ಹೀಗಿನ‌ ಅನಿವಾರ್ಯ ಸಂಧರ್ಭದಲ್ಲಿ ಮಾತ್ರ ತನ್ನ ದೈವ ಶಕ್ತಿ ಬಳಸಿದ..‌‌‌...


ದಾಸರು ದಾಸಪದವೊಂದರಲ್ಲಿ‌ "ಆಡಿಸಿದಳೆ ಯೋಶೋದೆ ಜಗದೋದ್ದಾರನ" ಎಂದಿದ್ದಾರೆ... ಸಾಕ್ಷಾತ್ ಭಗವಂತ ಮಥುರೆಯ ಸಾಮಾನ್ಯ ಗೊಲ್ಲ ಮಹಿಳೆಗೆ ತನ್ನ ಭಗವಂತನ‌ ಮನುಷ್ಯ ಅವತಾರಿ ಆಗಿ ಮಗುವಾಗಿ ಆಡಿಸಿ ಲಾಲಿಸಿ ಪಾಲಿಸುವ ಸದವಕಾಶವನ್ನು ನೀಡಿದ್ದಾನೆ... ಆ ಮಾತೆ ಯಶೋದೆ ಎಂತಹ ಭಾಗ್ಯವಂತೆ ಅಲ್ವಾ..?


ಮಹಾಭಾರತ ಕುರುಕ್ಷೇತ್ರ ಯುದ್ಧದಲ್ಲಿ ಒಬ್ಬ ಸಾಮಾನ್ಯ ಸಾರಥಿಯಾಗಿ ಪಾಂಡವರ ಜೊತೆಗೆ ನಿಂತು ಧರ್ಮ ಅಧರ್ಮದ ನಡುವೆ ಧರ್ಮಕ್ಕೆ ಗೆಲುವಾಗಲೀ ಎಂದು ನಿಂತ. ಶ್ರೀ ಕೃಷ್ಣ ಮನಸು ಮಾಡಿದ್ದರೆ ತನ್ನ ಬ್ರಹ್ಮಾಂಡ ಶಕ್ತಿಯ ಮೂಲಕ ಕ್ಷಣ ಮಾತ್ರದಲ್ಲಿ ಕೌರವರ ಮೆಟ್ಟಿ ಮುರಿಯಬಹುದಿತ್ತು... ಆದರೆ ಶ್ರೀ ಕೃಷ್ಣ ಹಾಗೆ  ಮಾಡಲಿಲ್ಲ...!! 


ಬಡ ಬಾಲ್ಯ ಗೆಳೆಯ ಸುದಾಮನ ಜೊತೆಗಿನ ಸಂವಹನ ಬಡವ ಬಲ್ಲಿದ ಎಂಬ ತಾತ್ಸಾರ ಮಾಡದೇ ಸರಳವಾಗಿ ವ್ಯಕ್ತಿ ಗತವಾಗಿ ಮನುಷ್ಯ ಮನುಷ್ಯರನ್ನು ನೋಡಿ ಒಡನಾಡಬೇಕು ಎಂಬುದನ್ನು ಶ್ರೀ ಕೃಷ್ಣ  ಹೇಳಿದ... 


"ಭಗವದ್ಗೀತೆ"ಯ ಮೂಲಕ ಶ್ರೀ ಕೃಷ್ಣ ಪರಮಾತ್ಮರು ಮನುಷ್ಯರಿಗೆ ಈ ಜಗತ್ತಿನಲ್ಲಿ ಹೇಗೆ ಬಾಳಿ ಬದುಕಬೇಕು ಎಂಬುದನ್ನು ಹೇಳುವ ಸಾರ್ವಕಾಲಿಕ 

"Personality management' ಪಾಠವನ್ನು "ಗೀತೆ" ಯ ಮೂಲಕ ಯುದ್ದದ ತುರ್ತು ಸಂದರ್ಭದಲ್ಲಿ ಹೇಳಿದ್ದಾನೆ...!!


ಗೀತೆಯನ್ನು ಯಾಂತ್ರಿಕವಾಗಿ ಓದದೇ ಹೃದಯದ ಮೂಲಕ ವ್ಯಕ್ತಿಯ ಜೀವನಕ್ಕೆ ಬಳಸಿಕೊಂಡರೆ ಬಾಳು ಪರಿಪೂರ್ಣ ನೆಮ್ಕದಿ.


ಇಡೀ ಪ್ರಪಂಚವನ್ನು ಆಳುವಷ್ಟು ಶಕ್ತಿ ಇದ್ದರೂ ಒಂದು ಚಿಕ್ಕ ರಾಜ್ಯವನ್ನು ಕೆಲವೇ ಕೆಲವು ವರ್ಷ ಆಳಿ... ತನ್ನ ಅವಧಿ‌ ಮುಗಿದ ಮೇಲೆ ಒಬ್ಬ ಬೇಟೆಗಾರನು ಅಂಗಾಲಿಗೆ ಹೊಡೆದ ಬಾಣಕ್ಕೆ ತನ್ನ ದೇಹ ತ್ಯಾಗ ಮಾಡಿದ ಪರಮಾತ್ಮ....!! 


ಬಾಲ್ಯದಲ್ಲಿ ಹೆತ್ತ ತಂದೆ ತಾಯಿಂದ ದೂರ ಇದ್ದ. ಯೌವನದಲ್ಲಿ ಸಾಕಷ್ಟು ಅವಮಾನ ಅನುಭವಿಸಿದ. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲಾರದಾದ. ಹೀಗೆ ಶ್ರೀಕೃಷ್ಣನ ಜನ್ಮ ವೃತ್ತಾಂತವನ್ನು ನೋಡಿದಾಗ ಬಹಳ ದೊಡ್ಡ ಅಚ್ಚರಿಯಾಗುತ್ತದೆ....!!! ಭಗವಂತ ಮನುಷ್ಯ ಅವತಾರದಲ್ಲಿ ಸಾಮಾನ್ಯ ಮನುಷ್ಯನಾಗಿ ಬಾಳಿ ಬದುಕಿದ್ದು ಎಲ್ಲ ಮಾನವ ಜೀವಿಗಳಿಗೆ ಆದರ್ಶ ಪ್ರಾಯವಾಗಿದೆ.


ಈ ಜಗತ್ತಿನಲ್ಲಿ ಯಕಶ್ಚಿತ್ ಮನುಷ್ಯರು ಚಿಕ್ಕ ಪುಟ್ಟ ಪವಾಡ ಮಾಡಿ "ನಾನೇ ದೇವರು"... ಎಂದು "ದೇವ ಮಾನವರಾದ" ಸಾವಿರ ನಿದರ್ಶನಗಳ ನಡುವೆ ಸಾಕ್ಷಾತ್ "ಭಗವಂತನೇ" ಮನುಷ್ಯನಾಗಿ ಭೂಮಿಯ ಮೇಲೆ ಅವತರಿಸಿ "ಸಾಮಾನ್ಯನಾಗಿ" ಬದುಕಿ ಮನುಷ್ಯ ಹೇಗೆ down to earth ಅಂತೆ ಬದುಕಬೇಕೆಂಬ ಮಾರ್ಗದರ್ಶನ ಮಾಡಿದ್ದಾನೆ‌..‌.!!! 


ಭೌತಿಕ ಜಗತ್ತಿನ ಸೋಲು ಕಷ್ಟ ಪ್ರೀತಿ ಪಾತ್ರರ ಅಗಲಿಕೆಯ ದುಃಖ, ಭಾದಿಸುವ ರೋಗ ರುಜಿನಗಳು ಇದ್ಯಾವುದಕ್ಕೂ ಎದೆಗುಂದದೇ ಸುಖ ದುಃಖ ವನ್ನು ನಿರುಮ್ಮಳವಾಗಿ ಸಮನಾಗಿ ಎದುರಿಸಿ ನಗು ನಗುತ್ತಾ ಬಾಳಬೇಕೆಂದು ಭಗವಂತ ಶ್ರೀಕೃಷ್ಣನ ರೂಪದಲ್ಲಿ ಬಾಳಿ ಬದುಕಿ ಹೋಗಿದ್ದಾನೆ....‌


ಶ್ರೀ ಕೃಷ್ಣನ ಗೀತೆ ಗಿಂತ ಆತನ ಸಾಮಾನ್ಯ ಮನುಷ್ಯ ರೂಪಿ ಬದುಕಿನ ಸರಳತೆ ಜಗತ್ತಿನ ಎಲ್ಲ ಮನುಷ್ಯರಿಗೂ ದಾರಿ ದೀಪ ವಾಗುತ್ತದೆ ಎನಿಸುತ್ತದೆ.


ಶ್ರೀಕೃಷ್ಣ ಜನ್ಮ ದಿನದಂದು ಶ್ರೀಕೃಷ್ಣನ ಪೂಜೆ ನೈವೇದ್ಯ ಗಳನ್ನು ಮಾಡಲಷ್ಟೇ ನಾವು ಸಮಯವನ್ನು ವಿನಿಯೋಗಿಸದೇ ಶ್ರೀ ಕೃಷ್ಣನು ಮಾನವರೂಪಿಯಾಗಿ ಹೇಗೆ ದುರಿತಗಳನ್ನ ಎದುರಿಸಿ ಸಾಮಾನ್ಯ ನಾಗಿ ಸರಳವಾಗಿ ಬದುಕಿ ನಗು ನಗುತ್ತಾ ಜೀವನ ಪ್ರೀತಿಯಿಂದಿದ್ದ ಎಂಬುದನ್ನು ಗಮನಿಸಿ ನಾವೂ ಶ್ರೀಕೃಷ್ಣನ ಜೀವನ ಪ್ರೀತಿ ಮತ್ತು ಸರಳತೆಯನ್ನ ಮೈಗೂಡಿಸಿಕೊಂಡರೆ ಶ್ರೀ ಕೃಷ್ಣ ಪ್ರೀತ್ಯಾರ್ಥ ವಾಗುತ್ತದೆ.


ಶ್ರೀ ಕೃಷ್ಣ ಪರಮಾತ್ಮರಿಗೆ ನಮೋ ನಮಃ

ವಂದನೆಗಳು

- ಪ್ರಬಂಧ ಅಂಬುತೀರ್ಥ

9481801869


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top