ಮಾಮ್‌ ಇನ್‌ಸ್ಪೈರ್‌ ಪ್ರಶಸ್ತಿಗೆ ಅರ್ಜಿ ಆಹ್ವಾನ

Upayuktha
0


ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ಮಂಗಳಗಂಗೋತ್ರಿ (MAAM) ವತಿಯಿಂದ ನೀಡಲಾಗುವ 2023-24ನೇ ಸಾಲಿನ ಮಾಮ್‌ ಇನ್‌ಸ್ಪೈರ್‌ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಯಾವುದೇ ಪದವಿ ವಿಭಾಗ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ವಿಜೇತರಿಗೆ ರೂ 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು.


2023- 24ರಲ್ಲಿ ಯಾವುದೇ ಪದವಿಯ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.


ಅರ್ಹತೆಗಳು: ಪದವಿ ವಿದ್ಯಾರ್ಥಿಗಳಿಗೆ: 2023ರ ಜೂನ್‌ನಿಂದ 2024ರ ಮೇ ಅಂತ್ಯದ ಒಳಗೆ ಕನಿಷ್ಠ 8 ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ರೇಡಿಯೋ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗಿರಬೇಕು. ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತರಾಗಿರಬೇಕು.


ಶೈಕ್ಷ ಣಿಕ ವಿಷಯಗಳಲ್ಲಿ ಶೇ.60ರಷ್ಟು ಅಂಕ ಗಳಿಸಿರಬೇಕು. ಬ್ಲಾಗ್‌ಬರಹ, ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸಿರಬೇಕು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರಬೇಕು.


ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ, ಸ್ನಾತಕೋತ್ತರ ವಿಭಾಗದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾರ್ಥಿಗಳಿಗಿರುವ ಮಾನದಂಡಗಳು ಇಲ್ಲಿಯೂ ಅನ್ವಯಿಸುತ್ತವೆ. ಕನಿಷ್ಠ 12 ಲೇಖನ/ ನುಡಿಚಿತ್ರಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ಶೇ 55ರಷ್ಟು ಅಂಕ ಗಳಿಸಿರಬೇಕು.

ಛಾಯಾಗ್ರಹಣ, ಸಾಕ್ಷ್ಯಚಿತ್ರ ನಿರ್ಮಾಣ, ಡಿಜಿಟಲ್‌/ ನವ ಮಾಧ್ಯಮ/ ಸಿನಿಮಾ/ ಒಟಿಟಿ ಕಂಟೆಂಟ್‌, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಕ್ರಿಯರಾಗಿರವುದು, ಸಾರ್ವಜನಿಕ ಸಂಪರ್ಕ ಮತ್ತು ಪರಿಣಾಮಕಾರಿ ಕಾರ್ಯತಂತ್ರ, ಅತ್ಯುತ್ತಮ ಜಾಹೀರಾತು ವಿನ್ಯಾಸ, ಹೊಸ ಪರಿಕಲ್ಪನೆಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು, ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದು, ಅಧ್ಯಯನ ವರದಿಗಳು (ಶೈಕ್ಷಣಿಕ ವರ್ಷದ ಪ್ರೌಢ ಪ್ರಬಂಧ ಹೊರತುಪಡಿಸಿ) ಪ್ರಕಟವಾಗಿರಬೇಕು. ಎಲ್ಲ ಸಾಧನೆಗಳ ದಾಖಲೆಗಳನ್ನು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ, ಸ್ವವಿರವುಳ್ಳ ಪತ್ರದ ಸಹಿತ ೨೦೨೪ರ ಅಕ್ಟೋಬರ್‌೧೨ರ ಒಳಗೆ ಕಳುಹಿಸಬೇಕು.


ಎಲ್ಲ ದಾಖಲೆಗಳನ್ನು ಸ್ಕ್ಯಾನ್‌ಮಾಡಿ, ಡಿಜಿಟಲ್‌ರೂಪದಲ್ಲಿ (PDF̲ Interactive) ಒಂದೇ ಪಿಡಿಎಫ್‌ಫೈಲ್‌ನಲ್ಲಿ ಹಾಕಿ ಇಮೇಲ್‌ಮೂಲಕ ಕಳುಹಿಸಬೇಕು. ಇಮೇಲ್‌ವಿಳಾಸ: reachtomaam@gmail.com ಮಾಹಿತಿಗೆ ಸಂಘಟನೆಯ ಅಧ್ಯಕ್ಷರಾದ ನವೀನ್‌ ಅಮ್ಮೆಂಬಳ (ಮೊ. 94495 88440), ಸಂಚಾಲಕರಾದ ಕೃಷ್ಣಮೋಹನ ತಲೆಂಗಳ (ಮೊ.. 9481976969), ಅಥವಾ ಶರತ್‌ಹೆಗ್ಡೆ ಕಡ್ತಲ (ಮೊ. 9964677010) ಇವರನ್ನು ಸಂಪರ್ಕಿಸಬಹುದು ಎಂದು ಮಾಮ್‌ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top