ಜೇಸಿಐ ರಾಷ್ಟ್ರೀಯ ಅಧ್ಯಕ್ಷ ರೇಖೇಶ್ ಶರ್ಮ
ಕಾಪು: ಯುವ ಜನರಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ, ಸುಸ್ಥಿರ ಸಮಾಜದ ನಿರ್ಮಾಣ ಮತ್ತು ಸಮುದಾಯ ಅಭಿವೃದ್ಧಿಗೆ ಪೂರಕವಾಗಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಜೇಸಿಐ ಭಾರತವು ಪ್ರಸ್ತುತ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ರೇಖೇಶ್ ಶರ್ಮ ಹೇಳಿದರು.
ಕಾಪು ಜೇಸಿಐನ ವತಿಯಿಂದ ಮಂದಾರ ಹೊಟೇಲ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೃತ ಮಹೋತ್ಸವದ ನೆನಪಿಗಾಗಿ ದೇಶದಾದ್ಯಂತ ವಾಯ್ಸ್ ಆಫ್ ಯೂತ್ ಎಂಬ ವಿನೂತನ ಕಾರ್ಯಕ್ರಮದಡಿ ಹತ್ತು ಲಕ್ಷಕ್ಕೂ ಅಽಕ ಯುವ ಜನರನ್ನು ಭೇಟಿ ಮಾಡಿ, ಐಐಟಿ ಮುಂಬಯಿ ಸಹಯೋಗದೊಂದಿಗೆ ಅವರ ಮುಂದಿರುವ ಸವಾಲುಗಳು, ಆಯ್ಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಂವಾದ ನಡೆಸಲಾಗುತ್ತಿದೆ. ಈ ಬಗ್ಗೆ ವಿಸ್ತ್ರತ ವರದಿಯನ್ನು ಸಿದ್ಧಪಡಿಸಿ ಭಾರತ ಸರಕಾರದ ಮುಂದೆ ಮಂಡಿಸಲಾಗುವುದು ಎಂದರು.
ದೇಶದಾದ್ಯಂತ ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೇಸಿಐ ಇಂಡಿಯಾ ಫೌಂಡೇಷನ್ ಮೂಲಕವಾಗಿ ಪ್ರತೀ ವರ್ಷ 3 ಕೋಟಿ ರೂಪಾಯಿ ಹಣವನ್ನು ವಿದ್ಯಾರ್ಥಿ ವೇತನಕ್ಕಾಗಿ ವಿನಿಯೋಗಿಸಲಾಗುತ್ತಿದ್ದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳ ಗೊಂಡಿರುವ ವಲಯ ಹದಿನೈದಕ್ಕೆ 10 ಲಕ್ಷ ರೂ. ನಿಧಿಯನ್ನು ಮೀಸಲಿರಿಸಲಾಗಿದೆ. ಮಹಿಳಾ ಸಬಲೀಕರಣ ಯೋಜನೆಯಡಿ ಪ್ರತೀ ವರ್ಷಕ್ಕೆ 100 ಮಂದಿ ವಿದ್ಯಾರ್ಥಿನಿಯರನ್ನು ದತ್ತು ಸ್ವೀಕರಿಸಿ, 9ರಿಂದ 12ನೇ ತರಗತಿವರೆಗಿನ ನಾಲ್ಕು ವರ್ಷಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುವುದು. ಜೇಸಿಐ ವೆಲ್ಪೇರ್ ಫಂಡ್ ಮೂಲಕವಾಗಿ ಸದಸ್ಯತನ ನೀಡುವ ಸದಸ್ಯರ ಕುಟುಂಬಗಳಿಗೆ ನೆರವಾಗುವ ವಿಶೇಷ ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಗಿದೆ ಎಂದರು.
ಜೆಕಾಂ, ಜೇಸಿಐ ಅಲ್ಯುಮಿನಿ ಕ್ಲಬ್ ಮೂಲಕವಾಗಿಯೂ ಆಂದೋಲನವನ್ನು ಬೆಳೆಸಲಾಗುತ್ತಿದೆ. ನಿರಂತರ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ವರ್ಷ ಕೇರಳ ಮತ್ತು ವಲಯನಾಡುವಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ತೊಂದರೆಗಳಗಾದವರ ನೋವಿಗೆ ಸ್ಪಂದಿಸಿ 1 ಕೋ. ರೂ. ವೆಚ್ಚದ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ವಯನಾಡು ಸಂತ್ರಸ್ತರ ಆರ್ಥಿಕ ಸಬಲೀಕರಣಕ್ಕಾಗಿ 1 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯ ನೀಲ ನಕಾಶೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಜೇಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ. ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಎರಡು ದಿನಗಳ ಭೇಟಿಯ ಸಂದರ್ಭ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಘಟಕಗಳಿಗೆ, ಪ್ರದೇಶಗಳಿಗೆ ಭೇಟಿ ನೀಡಿ ಹತ್ತಾರು ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಸುಮಾರು 1000ಕ್ಕೂ ಅಧಿಕ ಸಮುದಾಯ ಅಭಿವೃದ್ಧಿ ಯೋಜನೆಗಳು, ನಿರಂತರ ತರಬೇತಿ ಕಾರ್ಯಕ್ರಮಗಳು ಮತ್ತು ಸದಸ್ಯರ ಒಗ್ಗೂಡುವಿಕೆಗಾಗಿ ಘಟಕ, ಪ್ರಾಂತ್ಯ ಮತ್ತು ವಲಯ ಮಟ್ಟದ ಕಾರ್ಯಕ್ರಮಗಳನ್ನೂ ನಡೆಸಲಾಗಿದೆ ಎಂದರು.
ಕಾಪು ಜೇಸಿಐ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಸನತ್ ಕುಮಾರ್, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ವಲಯ ನಿರ್ದೇಶಕ ಅಭಿಲಾಷ್ ಬಿ.ಎ., ಸಂಯೋಜಕ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ