ಹುನಗುಂದ: ಪಟ್ಟಣದ ವಿಎಂ ವೃತ್ತದಲ್ಲಿ ಗುರುವಾರ (ಆ.22) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಹುನಗುಂದ ತಾಲೂಕಾ ಪೊಲೀಸ್ ವೃತ್ತ ನಿರೀಕ್ಷಕರಾದ ಸುನಿಲ ಸವಧಿ ಹಾಗೂ ಪಿಎಸ್ಐ ಚನ್ನಯ್ಯ ದೇವೂರರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತ 12 ಹೆಲ್ಮೆಟ್ ತರಿಸಿ ಪ್ರಾಣಸುರಕ್ಷತೆಗಾಗಿ ಕಡ್ಡಾಯ ಹೆಲ್ಮೆಟ್ ಧರಿಸಿಕೊಳ್ಳಲು ಜಾಗೃತಿ ಅಭಿಯಾನ ಜರುಗಿತು.
ಹೆಲ್ಮೆಟ್ ವಿತರಿಸಿ ಮಾತನಾಡಿದ ಅವರು, ದಿನ ಸರಣಿ ರಸ್ತೆ ಅಪಘಾತದಲ್ಲಿ ಜನತೆ ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಂಡು, ತಮ್ಮನ್ನು ನಂಬಿದ ಕುಟುಂಬಕ್ಕೆ ಸಂಕಟ ತಂದೊಡ್ಡುತ್ತಿ ದ್ದಾರೆ. ಹಾಗಾಗಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶದ ಮೇರೆಗೆ ಬೈಕ್ ಸವಾರರ ಪ್ರಾಣದ ಸುರಕ್ಷತೆಗಾಗಿಯೇ ಪೋಲಿಸ್ ಇಲಾಖೆ ದಂಡ ಹಾಕಲಾಗುತ್ತಿತ್ತು. ಅದನ್ನು ಬಿಟ್ಟು ಸದ್ಯ ಕಾನೂನನ್ನುಗೌರವಿಸಿ ಹೆಲ್ಮೆಟ್ಧರಿಸಿದವರನ್ನು ಗುಲಾಬಿ ಹೂವು ನೀಡಿ ಗೌರವಿಸುತ್ತ ಹೆಲ್ಮೆಟ್ ಧರಿಸದವರಿಗೆ ಉಚಿತ ಹೆಲ್ಮೆಟ್‌ಗಳನ್ನು ನೀಡಿ ಜಾಗೃತಿಪಡಿಸುತ್ತಿದ್ದೇವೆ ಎಂದರು.
ಹಾಗಾಗಿ ಇನ್ನು ಮುಂದೆ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು. ಒಂದು ಪಕ್ಷ ಕಾನೂನ್ನು ಉಲ್ಲಂಘಿಸಿದರೆ ಪೋಲಿಸ್ ಇಲಾಖೆಯು ಯಾವ ಶಿಸ್ತುಕ್ರಮ ಜರುಗಿಸಬೇಕೋ, ಅದಕ್ಕೆ ಸದಾ ಸಿದ್ದವಾಗಿರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಈಸಂದರ್ಭದಲ್ಲಿ ಎಎಸ್ಐ ಪಾಪಣ್ಣ ತಳವಾರ, ಎಸ್ ಐ ಇಟಗಿ ಸಿದ್ದು, ಕೌಲಗಿ ಜಗದೀಶ, ಹಡಪದ ಎಂ ಬಿ ಹುನಗುಂದ, ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ