ಮಂಗಳೂರು: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೊರಟಿದ್ದ ಕಾಂಗ್ರೇಸ್ ನ ಮುಖಂಡರಾದ ಐವನ್ ಹಾಗೂ ಇವರ ಪಟಾಲಂ ಬಿಜೆಪಿ ಕಛೇರಿ ಇರುವ ಪ್ರದೇಶದ ಹತ್ತಿರವು ಸುಳಿಯದೇ ಬಾಲ ಮುದುರಿಕೊಂಡು ಪಲಾಯನ ಗೈದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಲೇವಡಿ ಮಾಡಿದ್ದಾರೆ.
ಬಿಜೆರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನಲೆ ಬಿಜೆಪಿ ಕಚೇರಿಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಾಂಗ್ಲಾದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ಅರಾಜಕತೆ ಸೃಷ್ಟಿಸಿ ಕರುನಾಡನ್ನು ಪ್ರಕ್ಷುಬ್ಧ ಮಾಡಲು ಕುಮ್ಮಕ್ಕು ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆಗೆ ಯಾರೋ ಅಪರಿಚಿತ ವ್ಯಕ್ತಿಗಳು ಕಲ್ಲೆಸೆದದ್ದನ್ನೇ ನೆಪಮಾಡಿ ಬಾಂಗ್ಲಾದೇಶ ಮಾದರಿಯನ್ನು ಮಂಗಳೂರಿನಲ್ಲಿ ಮಾಡಿ ತೋರಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರಿನ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರ ವಿರುದ್ಧ ಬೆಳಗ್ಗಿನಿಂದ ತೊಡೆ ತಟ್ಟಿ ನಿಂತ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಛೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಾಂಗ್ರೆಸ್ ಗೂಂಡಾ ಕಾರ್ಯಕರ್ತರನ್ನು ಎದುರಿಸಲು ಮಹಿಳೆಯರು ಯುವಕರು ಬಿಜೆಪಿ ಶಾಸಕರು ಹಾಗೂ ಮುಖಂಡರು ಸಜ್ಜಾಗಿದ್ದರು. ಆದರೆ ಬಿಜೆಪಿ ಕಛೇರಿಗೆ ದಾಳಿ ಮಾಡುವ ಹೇಳಿಕೆ ಕೊಡೋವಾಗ ಇದ್ದ ಹುರುಪು, ಅದನ್ನು ಕಾರ್ಯಗತ ಮಾಡುವಾಗ ಕಾಂಗ್ರೆಸ್ಸಿಗರಲ್ಲಿ ಇರಲಿಲ್ಲ. ಈಗ ಮುಗ್ಗರಿಸಿ ಬಿದ್ದು, ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹಾಗೂ ವಿರೋಧವನ್ನು ಅರಿತುಕೊಂಡ ಕಾಂಗ್ರೆಸ್ಸ್ ಮುಖಂಡ ಐವನ್ ಹಾಗೂ ಇವರ ಪಟಾಲಂ ಬಿಜೆಪಿ ಕಛೇರಿ ಇರುವ ಪ್ರದೇಶದ ಹತ್ತಿರವೂ ಸುಳಿಯದೇ ಬಾಲ ಮುದುರಿಕೊಂಡು ಪಲಾಯನ ಮಾಡಿದೆ ಎಂದು ಪ್ರತಿಭಟನಾ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ