ಹವ್ಯಕ ಕವನ: ಪುಟ್ಟ ಕೊಟ್ಟಿಗೆ ತಿಂದ ಗೌಜಿ

Chandrashekhara Kulamarva
0


ಅಪ್ಪಾಂ.. ಆನು ತುಪ್ಪವ ಅದ್ದಿ

ಹಲಸಿನ ಹಣ್ಣಿನ ಕೊಟ್ಟಿಗೆ ತಿಂದೆ


ಎರಡೇ ಎರಡು ತಿಂದದು ಅಷ್ಟೇ 

ಶುಂಠಿಯ ಚಟ್ಣಿಲಿ ಮತ್ತೆರಡು ತಿಂದೆ

ಖಾರ ಹೆಚ್ಚಾಗಿ ಕಣ್ಣೀರು ಬಂತು


ಜೇನಿಲಿ ಅದ್ದಿ ‌ಇನ್ನೆರಡು ತಿಂದೆ

ನಿನ್ನೇಣ ಕೊದಿಲಿನ ಪರಿಮಳ‌‌ ಬಂತು

ಮತ್ತೆರಡು ಕೊಟ್ಟಿಗೆ ಆಶೆಲಿ ತಿಂದೆ


ಗಟ್ಟಿಯ ಮಸರು  ಅದ್ದಿಕ್ಕಿ ತಿಂದರೆ

ತಂಪಕ್ಕು ಹೇಳಿ ಇನ್ನೆರಡು ತಿಂದೆ

ಮತ್ತೆರಡು ತಿಂಬಲೆ ಮನಸೆಲ್ಲ ಇದ್ದರು


ಸಾಕಕ್ಕು ಹೇಳಿ ಎದ್ದಿಕ್ಕಿ ಬಂದೆ

ಹೊಟ್ಟೆಲಿ ಗುಳು‌ಗುಳು  ಹೇಳುತ್ತಪ್ಪಂ

ಕೊಟ್ಟಿಗೆ ‌ತುಂಡು ಹೊರಳುತ್ತಪ್ಪಂ



ಕೂಪಲೆ ನಿಂಬಲೆ  ಎಡಿತ್ತೇ ಇಲ್ಲೆ 

ಮನುಗಿದರಂತೂ ತಡೆತ್ತೇ‌ ಇಲ್ಲೆ

ಶುಂಠಿಯ ‌ತಿಂದರು ಕಡಮ್ಮೆಯೆ ಇಲ್ಲೆ


ಒರಕ್ಕು ಹತ್ತರಂಗೆ ಸುಳಿತ್ತೇ ಇಲ್ಲೆ.

ಹೊಟ್ಟೆಲಿ ಸಂಕಟ ತಡೆತ್ತಿಲ್ಲೆಪ್ಪಂ

ದಶಮೂಲಾರಿಷ್ಟವ ತರುಸೆಕ್ಕಪ್ಪಂ..


- ಸವಿತಾ ಯಸ್‌ ಭಟ್, ಅಡ್ವಾಯಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
To Top